ದೀಪ್ತಿ ಭದ್ರಾವತಿ ಅವರ ‘ಇಪ್ಪತ್ತೈದು ಕಥೆಗಳು’ ಕೃತಿಯು ಕಥಾ ಸಂಕಲನವಾಗಿದೆ. ಪ್ರತಿ ಕಥೆಯು ಸಾಮಾಜಿಕ ಹೊಣೆಗಾರಿಕೆಯನ್ನು ರಚ್ಚ್ರಿಸುತ್ತದೆ. ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಥಾ ಸಂಕಲನವು ಓದುಗರ ಗಮನ ಸೆಳೆಯುತ್ತದೆ.
ದೀಪ್ತಿ ಭದ್ರಾವತಿ -ದಕ್ಷಿಣ ಕನ್ನಡದ ಮರವಂತೆ ಮೂಲದವರು. ಚಿಕ್ಕಮಂಗಳೂರಿನ ನಕ್ಕರಿಕೆ ಎಂಬ ಕುಗ್ರಾಮದಲ್ಲಿ ಹುಟ್ಟಿದ್ದು, ಹೆಸರು ಕೇವಲ ದೀಪ್ತಿ ಮಾತ್ರ ಆದರೆ ಭದ್ರಾವತಿಯ ಜೊತೆ ಅವಿನಾಭಾವ ಸಂಬಂಧ ಇರುವುದರಿಂದ ಹಾಗೂ ಅವರ ಜೀವನದಲ್ಲಿ ಬಾಲ್ಯದಿಂದ ಯೌವನದವರೆಗೆ ಭದ್ರಾವತಿಯ ಕೊಡುಗೆ ತುಂಬಾ ಇರುವುದರಿಂದ ದೀಪ್ತಿ ಭದ್ರಾವತಿ ಎಂಬ ಹೆಸರಿನಿಂದ ಕಾವ್ಯವನ್ನು ಬರೆಯುತ್ತಾರೆ. ದೀಪ್ತಿಯವರು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವೀಧರರು, ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿಯನ್ನೂ ಹಾಗೂ ಹಿಂದಿಯಲ್ಲಿ ವಿಶಾರದ ಪದವಿಯನ್ನು ಪಡೆದಿದ್ದಾರೆ. ಪದವಿಪೂರ್ವದಲ್ಲಿ ವಿಜ್ಞಾನದ ವಿದ್ಯಾರ್ಥಿನಿಯಾಗಿದ್ದ ಇವರಿಗೆ ಸಾಹಿತ್ಯ ಕ್ಷೇತ್ರದ ಆಕರ್ಷಣೆ ಬೇರೆ ಬೇರೆ ಪದವಿಗಳಿಗೆ ಅನುವು ಮಾಡಿಕೊಟ್ಟಿತ್ತು. ಪ್ರಸ್ತುತ ಸರಕಾರಿ ...
READ MORE