ಅಬ್ದುಲ್ ಹಮೀದ್ ಪಕ್ಕಲಡ್ಕ ಅವರ ಐದನೇ ಕಥಾ ಸಂಕಲನ. ಅರಣ್ಯ ಇಲಾಖೆಯಲ್ಲಿ ಅಧೀಕ್ಷಕರಾಗಿ ಕೆಲಸ ನಿರ್ವಹಿಸಿ ನಿವೃತ್ತರಾಗಿರುವ ಇವರು ಸಾಹಿತ್ಯ ಕೃಷಿಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಇಲ್ಲಿ ಒಟ್ಟು 16 ಕತೆಗಳಿವೆ. ತಾನು ಕಳೆದುಕೊಂಡದ್ದನ್ನು ಮರಳಿ ಪಡೆಯುವ ಹವಣಿಕೆಯಲ್ಲಿ ವಿಫಲನಾಗುವ ಮನುಷ್ಯನ ಒಳ ಹೊರಗಿನ ದುರಂತವನ್ನು ಕಳಕೊಂಡವನು' ಹೇಳುತ್ತದೆ. ವೃಂದಾಳ ಒಡೆದ ಕನಸನ್ನು ಹೇಳುವ 'ಕನಸುಗಳಿಗೆ ದಡಗಳಿರುವುದಿಲ್ಲಕತೆ, ರಾಜಕಾರಣಿಗಳ ಸಮಯ ಸಾಧಕತನಕ್ಕೆ ಬಲಿಯಾಗುವ ಪ್ರತಿಭಾವಂತ ಯುವಕರ ದುರಂತವನ್ನು ಹೇಳುವ ನಿರಾಳ' ಕತೆ ಇದೆ. ಇಲ್ಲಿರುವ ಹೆಚ್ಚಿನ ಕತೆಗಳೂ ಕೌಟುಂಬಿಕ ನೆಲೆಯಿಂದ ಮೂಡಿ ಬಂದಿದೆ. ಜನಪ್ರಿಯ ಮಾದರಿಯನ್ನು ಕತೆ ಹೇಳುವ ತಂತ್ರವನ್ನಾಗಿಸಿದ್ದಾರೆ. ಅನಿರೀಕ್ಷಿತ ಅಂತ್ಯ ಕತೆಯ ಹೆಗ್ಗಳಿಕೆಯಾಗಿದೆ.
ನಿವೃತ್ತ ಅರಣ್ಯ ಅಧೀಕ್ಷಕ, ಕಥೆಗಾರರಾದ ಅಬ್ದುಲ್ ಹಮೀದ್ ಪಕ್ಕಲಡ್ಕ ಅವರು ಬಿಳಿಗೋಡೆ, ಒಂಟಿತೆಪ್ಪ ಇವರ ಪ್ರಮುಖ ಕೃತಿಗಳು. ಇವರಿಗೆ ಮುಸ್ಲಿಂ ಸಾಹಿತ್ಯ ಪ್ರಶಸ್ತಿ, ಉದಯೋನ್ಮುಖ ಸಾಹಿತ್ಯ ಕೃತಿಗೆ ನೀಡುವ ವರ್ಧಮಾನ ಪ್ರಶಸ್ತಿ ಸಂದಿವೆ. ...
READ MORE