'ಕತ್ತಲ ಗರ್ಭದಲ್ಲಡಗಿದ್ದ ಬೆಳಕು' ಕೃತಿಯು ಸವಿತಾ ಶ್ರೀನಿವಾಸ್ ಅವರ ಕಥಾಸಂಕಲನವಾಗಿದೆ. ಕೃತಿಯು 2012 ರಲ್ಲಿ ಮೊದಲನೇ ಮುದ್ರಣವನ್ನು ಕಂಡಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ಕಥಾ ಸಂಕಲನದಲ್ಲಿನ 10 ಕಥೆಗಳು ಭಿನ್ನ ವಸ್ತು ಹಾಗೂ ಶೈಲಿಯಿಂದಾಗಿ ಓದುಗರನ್ನು ಸೆರೆ ಹಿಡಿಯುತ್ತವೆ. ಇದರಲ್ಲಿನ ಹಲವಾರು ಕಥೆಗಳು ಮಧ್ಯಮ ವರ್ಗದ ಯುವತಿಯ ಸುತ್ತ ಹೆಣೆಯಲಾಗಿದ್ದು, ಅವಳ ಸ್ಥಿತಿ, ಎದುರಿಸುವಂತಹ ಸನ್ನಿವೇಶಗಳು, ಅವಳ ಆಶೋತ್ತರಗಳನ್ನು ‘ಸ್ತ್ರೀಯತ್ವದ’ ಛಾಪಿನಲ್ಲಿ ಮೂಡಿ ಬಂದಿವೆ. ಹಿಂದಿನ ಕಥಾಸಂಕಲನದಲ್ಲಿಯಂತೆ ಈ ಸಂಕಲನದಲ್ಲೂ ಹಲವಾರು ವೈವಿಧ್ಯಮಯ ಪಾತ್ರಗಳನ್ನು ಲೇಖಕಿಯು ಕಲಾತ್ಮಕವಾಗಿ ಕಡೆದಿದ್ದಾರೆ.
ಸವಿತಾ ಶ್ರೀನಿವಾಸ ಅವರು ಮೂಲತಃ ಬೆಂಗಳೂರಿನವರು. ಸ್ನಾತಕೋತ್ತರ ಡಿಪ್ಲೊಮಾ (ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ) ಎಂ.ಎ.(ಯೋಗ) ಪದವಿ ಪಡೆದಿದ್ದಾರೆ. ತಂದೆ ಎಂ.ಸಿ. ಶ್ರೀನಿವಾಸ, ತಾಯಿ ರತ್ನಮ್ಮ. ಕೃತಿಗಳು : ಮಧುಮಾಸ (ಕಾದಂಬರಿ) ೧೯೯೩, ಈ ಮನದ ಆಕಾಶಗಂಗೆ (ಕಥಾ ಸಂಕಲನ) ೧೯೯೩, ಹಿಮಗಿರಿಯ ಹೇಮಲತೆ (ಕಾದಂಬರಿ) ೧೯೯೪, ರ‍್ಮನಿಯ ಒಡಲಲ್ಲಿ (ಪ್ರವಾಸ ಕಥನ) ೧೯೯೮, ಕನ್ನಡ ವೈಜ್ಞಾನಿಕ ಕತೆಗಳು (ಸಂಪಾದಿತ) ೨೦೦೦, ಶತಮಾನದಂಚಿನ ಮಿಂಚು (ಕಥಾ ಸಂಕಲನ) ೨೦೦೧, ಹೂಗುಚ್ಛ (ಪ್ರೌಢಮಕ್ಕಳ ಕತೆಗಳು) ೨೦೦೧, ಸಂಗೀತ ಚಿಕಿತ್ಸೆ (ವೈಜ್ಞಾನಿಕ) ೨೦೦೨, ಕಾಮನಬಿಲ್ಲ ಅರಸುವವರು (ದಶಕದ ಆಯ್ದಕತೆಗಳು) ೨೦೦೫, ...
READ MORE