2020 ನೇ ವರ್ಷದ ವಿಜಯ ಕರ್ನಾಟಕ ಯುಗಾದಿ ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದ ಹಾಗೂ ಮೆಚ್ಚುಗೆ ಪಡೆದ ಟಾಪ್ 25 ಕತೆಗಳು ಸಂಕಲನ ಇದು. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಕನ್ನಡ ಕಥೆಗಳು ಸಹ ಹೊಸ ದಿಕ್ಕಿನತ್ತ ಪಯಣಿಸುತ್ತಿರುವ ಉತ್ತಮ ಕತೆಗಳು ಅಡಕವಾಗಿವೆ. ಈ ಕಥೆಗಳು ನಿರೂಪಣೆಯಲ್ಲಿ, ಕಥಾವಸ್ತುವಿನ ಆಯ್ಕೆಯಲ್ಲಿ, ಆಧುನಿಕ ಬದುಕಿನ ಸಂಕೀರ್ಣ ಅನುಭವ, ಪ್ರಯೋಗಶೀಲತೆ ಹೀಗೆ ಹಲವು ಹೊಸತನಗಳನ್ನಿಟ್ಟುಕೊಂಡ ವಿಶಿಷ್ಟ ಕೃತಿಯಾಗಿದೆ. ದಾದಾಪೀರ್ ಜೈಮನ್ ಅವರ 'ಪೇಟೆ ಸಮುದ್ರದ ದಾರಿ' ಕಥೆಗೆ ಪ್ರಥಮ ಬಹುಮಾನ, ಭುವನಾ ಹಿರೇಮಠ ಅವರ 'ಹಸಿರು ಪೈಠಣ ಸೀರಿ' ಹಾಗೂ ಮೇಘನಾ ಸುಧೀಂದ್ರ ಅವರ 'ಏನೆಂದು ಹೆಸರಿಡಲಿ?' ಕಥೆಗಳಿಗೆ ಕ್ರಮವಾಗಿ ದ್ವಿತೀಯ, ತೃತೀಯ ಬಹುಮಾನ ಸಂದಿವೆ.