'ನವಿಲು ಕೊಂದ ಹುಡುಗಾ' ಸಚಿನ್ ತೀರ್ಥಹಳ್ಳಿಯವರ ಮೊದಲ ಕಥಾಸಂಕಲನ. ತೀರ್ಥಹಳ್ಳಿ ಮೂಲದ ಸಚಿನ್ ಇನ್ಫೋಸಿಸ್ ನಲ್ಲಿ ಪೈಥಾನ್ ಡೆವೆಲವರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಐಟಿ ಲೋಕದ ಹುಡುಗ ಕಾಡುಗಳಲ್ಲಿ ಕಳೆದೊಗುವುದನ್ನು ಇಷ್ಟ ಪಡುತ್ತಾರೆ. ಅವರ ಕಥೆಗಳಲ್ಲಿ ಎಲ್ಲಿಯೂ ಯಾವುದೇ ವಿಷಯಗಳನ್ನ ಅಭಿಪ್ರಾಯಗಳನ್ನ ಓದುಗರ ಮೇಲೆ ಬಲವಂತವಾಗಿ ಹೇರುವ ಪ್ರಯತ್ನಮಾಡದೆ, ತನ್ನಷ್ಟಕ್ಕೆ ತಾನು, ತನಗೆ ಎಂಬಂತೆ ಕಥೆ ಹೇಳುತ್ತಾ ಹೋಗುವ ಕಥೆಗಾರ ಕಥೆ ಮುಗಿಯುವ ವೇಳೆಗೆ ನಮ್ಮವನೇ ಅನ್ನುವಷ್ಟು ಇಷ್ಟವಾಗಿ ಬಿಡುತ್ತಾರೆ. 'ಸಚಿನ್ ಕನ್ನಡ ಕಥಾಲೋಕ ಪ್ರವೇಶಿಸಿದ್ದು ತೀರಾ ಆಕಸ್ಮಿಕ ಅಂತೇನು ಹೇಳಲಾರೆ, ಆದರೆ ಈ ಹುಡುಗನನ್ನು ಕಥೆ ಕಟ್ಟಿ ಬೆಳೆಸಿದೆ ಎಂಬುದರಲ್ಲಿ ನಮಗ್ಯಾರಿಗೂ ಅನುಮಾನವೇ ಇಲ್ಲ’ ಎನ್ನುತ್ತಾರೆ ಕಥೆಗಾರ ಗೋಪಾಲಕೃಷ್ಣ ಕುಂಟನಿ. ಮಲೆನಾಡಿನವರಾದ ಸಚಿನ್ ಬೆಂಗಳೂರೆಂಬ ಮಹಾನಗರದಲ್ಲಿ ಸಿಲುಕಿದ್ದಾರೆ. ಹಾಗಾಗಿ ಇರುವಲ್ಲಿ ಇರಲಾರದೇ ಇದ್ದೆಡೆಯಿಂದ ಇರಬೇಕಾದೆಡೆಗೆ ಅವರ ಭಾವಲೋಕ ಹೊಯ್ದಾಡುತ್ತದೆ. ಅದು ಅವರ ಕಥೆಗಳಲ್ಲಿ ದಟ್ಟವಾಗಿ ಕಾಣಿಸಿಕೊಂಡಿದೆ.
ಕೆಲವೊಮ್ಮೆ ಕಥೆಗಳು ಮುಂಗಾರು ಮಳೆಯಂತೆ ಕಾಣುತ್ತವೆ. ತೇಜಸ್ವಿ ಅವರ ಗಾಢ ಪ್ರಭಾವಕ್ಕೆ ಒಳಗಾಗಿರುವುದು ಸತ್ಯಸ್ಯ ಸತ್ಯವೇ. ಆಲನಹಳ್ಳಿಯವರ ನೆರಳು ಅನೇಕ ಕಡೆ ಕಂಡು ಕಾಣಿಸಿ ಮರೆಯಾಗುತ್ತದೆ. ಕುವೆಂಪು ಗದ್ಯ ಅಲ್ಲಲ್ಲಿ ದಾಟಿ ಸಾಗುತ್ತದೆ. ಇದನ್ನು ಪ್ರಭಾವ ಅಂತಲೇ ಕರೆಯಲಾಗದು. ಹೊಸ ತಲೆಮಾರಿನ ಮಲೆನಾಡಿನ ಹುಡುಗನ ಓದಿನ ವಿಸ್ತಾರ ಇದು. ಇದು ಬೇಕಾಗಿರುವುದು. ಓದುವುದೇ ಇಲ್ಲ ಈ ಜಮಾನ ಎಂಬ ಬೇಸರದ ನಡುವೆ ಸಚಿನ್ ಓದಿ ಬರೆದು ಬೆರಗು ಮತ್ತು ಭರವಸೆ ಮೂಡಿಸುವುದು ಅವರ ಇಷ್ಟದ ಬ್ಲಾಕ್ ಡಾಗ್‌ನಂತೆ ಸಂತೋಷ ಕೊಡುತ್ತದೆ.
ಹೆಸರು ಸಚಿನ್ ತೀರ್ಥಹಳ್ಳಿ ಅವರು ಮೂಲತಃ ತೀರ್ಥಹಳ್ಳಿಯವರು. ತೀರ್ಥಹಳ್ಳಿ ತಾಲೂಕಿನ ಈಚಲಬಯಲು ಅನ್ನುವ ಹದಿನೈದೇ ಮನೆಗಳಿರುವ ಊರಲ್ಲಿ ಹುಟ್ಟಿ ಬೆಳೆದಿದ್ದು. ಬೆಂಗಳೂರಿನ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ ಎಂಜಿನಿಯರಿಂಗ್ ಓದಿ , ಸದ್ಯ ಇನ್ಫೋಸಿಸ್ ನಲ್ಲಿ ಪೈಥಾನ್ ಡೆವೆಲವರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ಪ್ರೇಮದ ಗುಂಗು ಮತ್ತು ನಿಸರ್ಗದ ಮೌನವೇ ಬರೆಯೋಕೆ ಪ್ರೇರಣೆ ಎನ್ನುವ ಸಚಿನ್, ಕುವೆಂಪು , ಕಾರಂತ, ಅನಂತಮೂರ್ತಿ , ತೇಜಸ್ವಿ, ಮಾರ್ಕ್ವೆಜ್ ಅವರನ್ನು ಇಷ್ಟ ಪಟ್ಟು ಓದುತ್ತಾರೆ. ಕಾವ್ಯ ಓದೋಕೆ ಇಷ್ಟ, ಬರೆಯುವ ಸಾಹಸ ಮಾಡಲ್ಲ ಎನ್ನುವ ಅವರು ಥಿಯೇಟರಿಗೇ ಹೋಗಿ ...
READ MORE