ಹಿರಿಯ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸಣ್ಣಕಥೆಗಳ ಸಂಕಲನ-ಗರುಡಗಂಬದ ದಾಸಯ್ಯ. ಗೊರೂರು ಮತ್ತು ಮಲ್ಲಿಗೆ ಹಳ್ಳಿಯ ವಿದ್ಯಮಾನಗಳ ಸಂಕಲನವಾಗಿದೆ. ಹಳ್ಳಿಯ ಜನರ ನಡವಳಿಕೆಗಳು, ಉದ್ಯೋಗಗಳು, ಜನರ ಬಾಂಧವ್ಯ, ತಿರಸ್ಕಾರಗಳು ಹೀಗೆ ಹಳ್ಳಿಯ ಸಮಗ್ರ ಚಿತ್ರ ಣ ನೀಡುತ್ತದೆ. ಪ್ರತಿ ಕಥೆಯ ಪಾತ್ರ ಇಂದಿಗೂ ಪ್ರಸ್ತುತವಾಗಿದೆ. ಊರಿನ ಹಾರುವರು-ತುರುಕರ ವೈಷಮ್ಯ, ಮಲ್ಲಿಗೆ ಹಳ್ಳಿಯನ ಬಯಲಾಟ, ಜಾತ್ರೆಯ ವಿವರಗಳು, ಊರಿನನ ಕ್ಷೌರಿಕರ ಚಿತ್ರಣ ಹೇಮಾವತಿ ನದಿಯ ಚಿತ್ರಣ ಹೀಗೆ ಅವರ ಬರಹ ಶೈಲಿ ಆಪ್ತವಾಗುತ್ತದೆ.
ಗಾಂಧಿವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕನ್ನಡದ ಜನಪ್ರಿಯ ಸಾಹಿತಿಗಳಲ್ಲಿ ಒಬ್ಬರಾಗಿದ್ದರು. ಗೊರೂರು ಗ್ರಾಮದಲ್ಲಿ 1904ರ ಜುಲೈ 4ರಂದು ಜನಿಸಿದರು. ತಂದೆ ಶ್ರೀನಿವಾಸ ಅಯ್ಯಂಗಾರ್ ತಾಯಿ ಲಕ್ಷ್ಮಮ್ಮ. ಗೊರೂರಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮುಗಿಸಿದ ಮೇಲೆ ಹಾಸನದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆಯುತ್ತಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು. ಅನಂತರ ಗುಜರಾತ್ ಗಾಂಧಿ ಆಶ್ರಮದಲ್ಲಿದ್ದ ವಿದ್ಯಾ ಪೀಠದಲ್ಲಿ ಓದು ಮುಂದುವರೆಸಿದರು. ಅನಂತರ ಪತ್ರಿಕಾರಂಗ ಪ್ರವೇಶಿಸಿದರು. ಮದರಾಸಿನ `ಲೋಕಮಿತ್ರ’ ಆಂಧ್ರ ಪತ್ರಿಕೆ `ಭಾರತಿ’ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದರು. 1952ರಲ್ಲಿ ವಿಧಾನಸಭೆಗೆ ನಾಮಕರಣಗೊಂಡಿದ್ದ ಅವರು ಅದಕ್ಕೂ ...
READ MORE