ಲೇಖಕ ಕೇಶವರೆಡ್ಡಿ ಹಂದ್ರಾಳ ಅವರ ಕಥಾ ಸಂಕಲನ ʻಮೃಗಜಲʼ. ಪುಸ್ತಕದ ಬೆನ್ನುಡಿಯಲ್ಲಿ ಡಾಕ್ಟರ್ ಅರುಂಧತಿ ಅವರು, “ಕನ್ನಡ ಕಥನ ಕ್ಷೇತ್ರದಲ್ಲಿ ಸುಮಾರು ಮೂರೂವರೆ ದಶಕಗಳಿಂದಲೂ ನಿರಂತರವಾಗಿ ಸಕ್ರಿಯರಾಗಿರುವ ಕೇಶವರೆಡ್ಡಿ ಹಂದ್ರಾಳರ ಕಥಾ ಜಗತ್ತು ತುಂಬಾ ವಿಶಿಷ್ಟವಾದದ್ದೆಂದು ನಿರೂಪಿತವಾಗಿದೆ. ಯಾವುದೇ ಕಥಾ ವಸ್ತುವನ್ನಾದರೂ ಅವರು ಕಥಾನಕಕ್ಕೆ ಒಗ್ಗಿಸುವ ರೀತಿ ನಿಜಕ್ಕೂ ಅನನ್ಯವಾದದ್ದು. ಹಳ್ಳಿಯ ಬದುಕಿನ ಸಂಗತಿಗಳಿರಲಿ, ನಗರ ಬದುಕಿನ ಸಂವೇದನೆಗಳೇ ಆಗಲಿ ಅವರ ಕಥೆಗಳಲ್ಲಿ ಸರಳ ಸುಂದರ ಕಲಾಕೃತಿಗಳಂತೆ ಆಕಾರ ಪಡೆಯುವುದೊಂದು ಚಂದದ ನಿರ್ಮಾಣವೇ! ಅವರು ಭಾಷೆಯೊಂದಿಗೆ ಅನುಸಂಧಾನಗೊಳಿಸುವ ಕಥಾ ಶೈಲಿ ಕುತೂಹಲಕರವೂ, ಮನೋಜ್ಞವೂ ಆದ ಚೈತನ್ಯದಾಯಕ ಮಾರ್ಗಗಳ ಅನ್ವೇಷಣೆಯಂತೆ ಚೇತೋಹಾರಿಯಾಗಿದೆ. ಮಾನವ ಸಹಜವಾದ ಹಸಿವು, ಕಾಮ, ಸ್ವಾರ್ಥ, ಕ್ರೌರ್ಯ, ಪ್ರೀತಿ ಸಕಲವೂ ಅವರ ಕಥೆಗಳಲ್ಲಿ ಜೀವಂತ ಪಾತ್ರಗಳಂತೆ ಮೈದಳೆಯುತ್ತವೆ. ಹಂದ್ರಾಳರು ತಮ್ಮ ಪ್ರತಿಯೊಂದು ಕಥೆಯಲ್ಲೂ ಪ್ರೀತಿ ಮತ್ತು ಮಾನವೀಯತೆಯ ಬೆಳೆ ಬೆಳೆಯಲು ಪ್ರಯತ್ನಿಸುವುದೊಂದು ಅನನ್ಯವಾದ ಸಂಗತಿ, ಸಾಹಿತ್ಯದ ಒಂದು ತುರ್ತು ಅನಿವಾರ್ಯತೆ ಕೂಡ” ಎಂದು ಹೇಳಿದ್ದಾರೆ.
ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರಾದ ಕೇಶವರೆಡ್ಡಿ ಹಂದ್ರಾಳ ಅವರು 22-07-1957 ರಲ್ಲಿ ಮಧುಗಿರಿ ತಾಲೂಕಿನ ಹಂದ್ರಾಳದಲ್ಲಿ ಜನಿಸಿದರು. ತಂದೆ ತಾಯಿ ಇಬ್ಬರೂ ಅನಕ್ಷರಸ್ಥರು . ಕೃಷಿ ಕೆಲಸಗಳನ್ನು ಮಾಡಿಕೊಂಡೇ ಹಂದ್ರಾಳದ ಪ್ರೈಮರಿ ಸ್ಕೂಲು , ಬ್ಯಾಲ್ಯದ ಮಿಡ್ಲಿಸ್ಕೂಲು ಪೂರೈಸಿದ್ದು . ತಾತ ನರಸಿಂಹರೆಡ್ಡಿ ಆಂಧ್ರದ ಅನಂತಪುರ ಜಿಲ್ಲೆಯ ಊರೊಂದರ ಜಮೀನುದಾರ . ಕಳೆದ ಶತಮಾನದ ಇಪ್ಪತ್ತರ ದಶಕದಲ್ಲಿ ಆ ಸೀಮೆಯ ಶೋಷಕ ಬ್ರಿಟಿಷ್ ಕಲೆಕ್ಟರ್ ನನ್ನು ಖೂನಿ ಮಾಡಿ ರಾತ್ರೋರಾತ್ರಿ ಕರ್ನಾಟಕದ ಕಡೆ ಪ್ರಯಾಣ . ಕಾಪು ರೆಡ್ಡಿಯಾಗಿದ್ದ ತಾತ ಮದುವೆಯಾಗಿದ್ದು ಕಮ್ಮ ಜಾತಿಯ ಅಜ್ಜಿಯನ್ನು . 1947 ...
READ MORE