‘ಒಂದಿಷ್ಟು ಹೊಸ ಕತೆಗಳು’ ಕೃತಿಯು ರಮಾಕಾಂತ ಜೋಶಿ ಅವರು ಸಂಪಾದಿಸಿರುವ ಕತಾಸಂಕಲನವಾಗಿದೆ. ಈ ಸಂಗ್ರಹದಲ್ಲಿಯ ಕತೆಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೆಯ ವಿಭಾಗದಲ್ಲಿ ಸರ್ವಶ್ರೀ ನಾ. ಡಿಸೋಜ, ಕುಂ. ವೀರಭದ್ರಪ್ಪ, ಬರಗೂರು ರಾಮಚಂದ್ರಪ್ಪ, ಬಿ.ಟಿ. ದೇಸಾಯಿ, ಅಮರೇಶ ನುಗಡೋಣಿ, ಕೃಷ್ಣಮೂರ್ತಿ ಚ೦ದರ್ ಅವರ ಕತೆಗಳು ಹಳ್ಳಿಗಾಡಿನ ತಮ್ಮ ಹಳೆಯ ಜೀವನಾನುಭವದ ಘಟನೆಗಳಿಗೆ ಒಂದು ಸುಸೂತ್ರವಾದ ಕತೆಯನ್ನು ಪೋಣಿಸುವಲ್ಲಿ ಅತ್ಯಂತ ಯಶಸ್ವಿಯಾಗಿದೆ. ಟಿ. ಜಿ. ರಾಘವ, ಲೋಹಿತ ನಾಯ್ಕರ, ವಿವೇಕ ಶಾನಭಾಗ, ಕೆ.ವಿ. ತಿರುಮಲೇಶ್, ಎಸ್. ದಿವಾಕರ, ಆರ್ಯ, ಗೋಪಾಲಕೃಷ್ಣ ಪೈ, ಶ್ರೀಮತಿ ಸುಧಾ ಮೂರ್ತಿ, ಶ್ರೀಮತಿ ಮಿತ್ರಾ ವೆಂಕಟರಾಜ್ ಅವರ ಕತೆಗಳು ಹಳೆಯ ಅನುಭವಗಳ ಜಾಡಿನಿಂದ ಹೊರಬಂದು, ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುತ್ತ ಹೊಸ ಅನುಭವವನ್ನು ಓದುಗರಿಗೆ ನೀಡುತ್ತವೆ. ಹೊಸ ಹೊಸ ಸಂವೇದನೆಗಳಿಗೆ ಅಭಿವ್ಯಕ್ತಿ ನೀಡುತ್ತ ಪ್ರಸಕ್ತ ಜನಜೀವನದ ಗೊಂದಲಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತವೆ. ಶ್ರೀಮತಿ ಆರ್‍ಯಾಂಬ ಪಟ್ಟಾಭಿ, ಕಸ್ತೂರಿ ಬಾಯರಿ, ಗಂಗಾ ರಾಜಪುರೋಹಿತ, ಜಾನಕಿ ಸೀತಾರಾಂ ಜೋಶಿ ಇವರ ಕತೆಗಳು ಸ್ತ್ರೀ ಸಂವೇದನೆಯನ್ನು, ತಮ್ಮ ರೂಢಿಗತವಾದ ಸಂಪ್ರದಾಯಬದ್ಧವಾದ ಕಥಾರೀತಿಯಲ್ಲಿ ಹೇಳುತ್ತ ಹೆಣ್ಣಿನ ಮೌಲ್ಯಗಳನ್ನು ಎತ್ತಿ ಹಿಡಿಯುತ್ತವೆ.
ಪ್ರಸಿದ್ದ ಮನೋಹರ ಗ್ರಂಥಮಾಲಾದ ಸಂಪಾದಕ ಮತ್ತು ಪ್ರಕಾಶಕರಾಗಿರುವ ರಮಾಕಾಂತ್ ಜೋಶಿ ಅವರು ರಂಗಕರ್ಮಿ, ಲೇಖಕ ಜಿ.ಬಿ. ಜೋಶಿ ಅವರ ಮಗ. ಜಿ.ಬಿ. ಜೋಶಿಯವರು ಆರಂಭಿಸಿದ ಮನೋಹರ ಗ್ರಂಥಮಾಲೆ ಪ್ರಕಾಶನವನ್ನು ನಡೆಸಿಕೊಂಡು ಬಂದಿದ್ದಾರೆ. ತಂದೆ ಜಿ.ಬಿ. ಜೋಶಿ (ಜಡಭರತ) ತಾಯಿ ಪದ್ಮಾವತಿ. ಮೂಲತಃ ಧಾರವಾಡದವರಾದ ರಮಾಕಾಂತ್ ಜೋಶಿ ಅವರು ಪುಸ್ತಕ ಪ್ರಕಾಶನದ ಜೊತೆಗೆ ಲೇಖಕರಾಗಿಯೂ ಗುರುತಿಸಿಕೊಂಡವರು. ಸವಣೂರ ವಾಮನರಾವ್, ಗರುಡ ಸದಾಶಿವರಾವ್, ರಾಘವೇಂದ್ರ ಖಾಸನೀಸ, ದ.ಬಾ. ಕುಲಕರ್ಣಿ, ಎ.ಕೆ.ರಾಮಾನುಜನ್, ಒಂದಷ್ಟು ಹೊಸಕಥೆಗಳು ಸೇರಿದಂತೆ ಹಲವು ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಅದೇ ...
READ MORE