ಲೇಖಕಿ ಪ್ರೇಮಲತ. ಬಿ ಅವರ ಕತೆಗಳ ಸಂಕಲನ ಐದು ಬೆರಳುಗಳು. 10 ಸಣ್ಣ ಕಥೆಗಳ ಸಂಕಲನ. ಲೇಖಕರು ಪುಸ್ತಕದ ಪ್ರಾರಂಭದಲ್ಲಿ ಹೇಳಿರುವಂತೆ, ಲೇಖಕರು ಅನಿವಾಸಿ ಭಾರತೀಯರಾಗಿರುವುದರಿಂದ ಕಥೆಗಳಲ್ಲಿ ಹಲವು ವಿದೇಶಿಗರ ಪಾತ್ರಗಳನ್ನು ಕಾಣಬಹುದು. ಅಲ್ಲದೆ ವೈದ್ಯರಾಗಿರುವ ಕಾರಣ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಘಟನೆಗಳ ಸುತ್ತ ಕೆಲವು ಕಥೆಗಳನ್ನು ಹೆಣೆಯಲಾಗಿದೆ. ಕಥೆಗಳಲ್ಲಿ ನಡೆಯುವ ಕೆಲವು ಘಟನೆಗಳು ವಿದೇಶದಲ್ಲಾದರೆ, ಇನ್ನು ಕೆಲವು ಕಥೆಗಳಲ್ಲಿ ಅಪ್ಪಟ ದೇಸಿ ಛಾಯೆಯನ್ನೂ ಕಾಣಬಹುದು ಎಂದಿದ್ದಾರೆ.
ತಲೆಯ ಮೇಲೆ ಅಪ್ಪನ ಸಾಲದ ಹೊರೆ, ಮನೆಯವರ ಅಭಿಲಾಷೆಗಳ ಭಾರ, ಚೆನ್ನಾಗಿ ತರಬೇತಿ ಪಡೆದು ಮೇಲೆ ಬರಬೇಕು ಎಂಬ ಹಂಬಲ, ಎಲ್ಲಿ ಯಾವುದಾದರೂ ತಪ್ಪನ್ನು ಮಾಡಿ, ಆಕಸ್ಮಿಕವಾಗಿ ಯಾವುದಾದರೂ ರೋಗಿ ಗೊಟಕ್ ಅಂದುಬಿಟ್ಟರೆ ಎನ್ನುವ ಭಯವನ್ನು ಹೊತ್ತ ನಮ್ಮ ಹುಡುಗರಿಗೆ ತರಬೇತಿ ಪಡೆಯುತ್ತಿರುವ ವರ್ಷಗಳಲ್ಲಿ ಸೆಕ್ಸ್ ನೆನಪಾಗುವುದು ಕೂಡ ಕಷ್ಟವೇ! ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ.ಪ್ರೇಮಲತಾ ಅವರು ತಮ್ಮದೇ ಕ್ಷೇತ್ರದ ಒಳ-ಹೊರಗನ್ನು ತಮ್ಮ ಕತೆಗಳಲ್ಲಿ ಪಾತ್ರಗಳಾಗಿ ತಂದಿದ್ದಾರೆ.
ತುಮಕೂರು ಮೂಲದ ಪ್ರೇಮಲತ ಬಿ. ಅವರು ದಂತವೈದ್ಯೆ. ಬೆಂಗಳೂರಿನಲ್ಲಿ ಪದವಿ, ಮ್ಯಾಂಚೆಸ್ಟರಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಕಳೇದ ಹದಿನೈದು ವರ್ಷಗಳಿಂದ ಇಂಗ್ಲಂಡ್ ನಿವಾಸಿ. ಕನ್ನಡ ಓದು, ಬರವಣಿಗೆ ಹಾಗೂ ಸಮರ ಕಲೆಯ ಹವ್ಯಾಸವುಳ್ಳ ಇವರು ಕನ್ನಡ ಲೇಖನಗಳಿಗೆ ಬಹುಮಾನವನ್ನೂ ಪಡೆದವರು. ಕೃತಿ: ತಿರುವುಗಳು, ಐದು ಬೆರಳುಗಳು, ಕೋವಿಡ್ ಡೈರಿ ...
READ MORE