ಕ್ರಿಸ್ತನ ಸಾಮ್ಯಗಳು

Author : ವಿಲಿಯಂ

Pages 116

₹ 120.00




Year of Publication: 2019
Published by: ನೇಕಾರ ಪ್ರಕಾಶನ
Address: ನೇಕಾರ ಪ್ರಕಾಶನ, ಗುರುಮಂದಿರ ರಸ್ತೆ, ಸೊರಬ-577429 ಶಿವಮೊಗ್ಗ ಜಿಲ್ಲೆ.
Phone: 9141833556

Synopsys

ದೈವತ್ವದ ಜ್ವಾಜಲ್ಯ ಕಿರಣಗಳು ಮನುಕುಲವನ್ನು ಪ್ರವೇಶಿಸಿ ಅದರ ಅಂಧತ್ವವನ್ನು ಹೊಡೆದೋಡಿಸುವಂತೆ ಮಾಡಿದ ಜಗತ್ತಿನ ಮಹಾನ್ ಚೇತನಗಳಲ್ಲಿ ಅನನ್ಯವಾಗಿ ಹಾಗೂ ಅಮರವಾಗಿ ನಿಲ್ಲುವ ಚೇತನವೇ ಯೇಸು ಕ್ರಿಸ್ತ. ಆತ ತನ್ನ ಸರಳ ಮತ್ತು ಸಾಮಾನ್ಯ ಉಪಮೆಗಳ ಮೂಲಕ ಜಗತ್ತಿಗೆ ತೋರಿದ ಅಸಾಮಾನ್ಯ ದಿವ್ಯಪಥವನ್ನು ಮತ್ತೊಮ್ಮೆ ಜಾನಪದ ಅನುಭವಗಳ ಬೊಗಸೆಯಲಿ ಹಿಡಿದಿಡುವ ಯತ್ನವೇ ವಿಲಿಯಂರವರ “ಸಾಮ್ಯಗಳು” ಎಂಬ  ಕೃತಿ. ಈ ದಿಶೆಯಲ್ಲಿ “ಸಾಮ್ಯಗಳು” ಕನ್ನಡ ಸಾಹಿತ್ಯವಲಯಕ್ಕೆ ಒಂದು ಕೊಡುಗೆ. ಇಪ್ಪತ್ತು ಶತಮಾನಗಳ ಹಿಂದೆ ಎಲ್ಲಿಯೋ ದೂರದ ಪ್ಯಾಲಸ್ತೀನದ ಭೌಗೋಳಿಕ ಹಾಗೂ ಸಮಾಜೋ-ರಾಜಕೀಯ ಸಂದರ್ಭದಲ್ಲಿ ಹುಟ್ಟಿದ ಕಿಸ್ತನ ಸಾಮ್ಯಗಳನ್ನು ಕನ್ನಡದ ನೆಲಕ್ಕೆ ಹಾಗೂ ಭಾರತೀಯ ಸಂದರ್ಭಕ್ಕೆ ಒಗ್ಗುವಂತೆ ಪರಿಣಾಮಕಾರಿಯಾಗಿ ಮರುಚಿತ್ರಿಸುವ ಪರಿ ಇಲ್ಲಿ ಅತ್ಯಂತ ಮನೋಜ್ಞ ಹಾಗೂ ಅಷ್ಟೇ ಅನನ್ಯ, ಕ್ರಿಸ್ತನ ಸಾಮ್ಯಗಳನ್ನು ಹೀಗೆ ಮರುಸೃಷ್ಟಿಸುವ ಮೂಲಕ ಕ್ರಿಸ್ತ ಮತ್ತು ಆತನ ಸಂದೇಶಗಳು ಕಾಲಾತೀತ ಮತ್ತು ಧರ್ಮಾತೀತ ಎಂಬುದನ್ನು ಈ ಕೃತಿ ಸಾರಿಹೇಳುತ್ತದೆ. “ಯೇಸುವಿನ ಸಾಮ್ಯಗಳಿಗೆ ಈಗಾಗಲೇ ಎರಡು ಸಾವಿರ ವರ್ಷಗಳಾಯಿತು. ಇವತ್ತಿಗೂ ಅವು ಜ್ವಲಂತ, ಪ್ರಸ್ತುತ, ಸಮಕಾಲಿನ ಸಮಸ್ಯೆಗಳಿಗೆ ಯೇಸುವಿನ ಸಾಮ್ಯಗಳಲ್ಲಿ ಉತ್ತರವಿದೆ...” ಎಂಬ ಪ್ರಾಸ್ತಾವಿಕ ಮಾತು ಲೇಖಕನಲ್ಲಿರುವ ಸಮಾಜದ ಸಂವೇದನೆಯನ್ನು ಎತ್ತಿಹಿಡಿಯುತ್ತದೆ. ಆದ್ದರಿಂದಲೇ ಯೇಸುವಿನ ಪ್ರತೀ ಸಾಮ್ಯಕ್ಕೂ ಲೇಖಕ ನೀಡುವ ಸಮಕಾಲೀನ ವ್ಯಾಖ್ಯಾನ ಸಾಮಾಜಿಕ ಕಳಕಳಿಯ ಪ್ರತಿಬಿಂಬವಾಗಿ ನಿಲ್ಲುತ್ತದೆ. ಸಂಬಂಧಗಳ ಮೌಲ್ಯಗಳನ್ನು ಧಿಕ್ಕರಿಸಿ ಅಹಮಿಕೆಯ ಅಮಲಿನಲ್ಲಿರುವ ಮನುಕುಲದ ಅಂತರಾಳವನ್ನು ಕ್ರಿಸ್ತನ ಸಾಮ್ಯಗಳು ತಟ್ಟದೇ ಹಿಂದೆ ಬಾರವು. ಹೇಗೆ ಕ್ರಿಸ್ತನಲ್ಲಿ ಸತ್ಯದ ಚಿರಂತನ ಸಂದೇಶ ಕಾಲಾತೀತವಾಗಿ ಹಾಗೂ ಧರ್ಮಾತೀತವಾಗಿ ಆವಿರ್ಭವಿಸಿತೋ ಅದೇ ಮಾದರಿಯಲ್ಲಿ ಕ್ರಿಸ್ತನಾಡಿದ ಸಾಮ್ಯಗಳು ಮಾನವನಿರ್ಮಿತ ದ್ವೀಪಗಳನ್ನು ಮೀರಿ ಬೆಳಗುವ ದೀಪಗಳಾಗಿ ಪ್ರತಿಯೊಬ್ಬ ಸಹೃದಯ ಓದುಗನೊಳಗೆ ಆವಿರ್ಭವಿಸುವಂತೆ ಮಾಡುವ ಯತ್ನವನ್ನು ಈ ಕೃತಿ ಯಶಸ್ವಿಯಾಗಿ ಮಾಡುತ್ತದೆ.

Related Books