ಲೇಖಕ ಪ್ರೇಮಶೇಖರ ಅವರ ಕಥಾ ಸಂಕಲನ ʻಕನ್ನಡಿಯೊಳಗಿನ ಗಾಯʼ. ಪುಸ್ತಕದ ಬೆನ್ನುಡಿಯಲ್ಲಿ ಸ್ವತಃ ಲೇಖಕರು, “ಪಾಶ್ಚಾತ್ಯ ಓದುಗರ, ವಿಮರ್ಶಕರ ಮಾತುಗಳು ಕಣ್ಣಿಗೆ ಬೀಳದಿದ್ದಲ್ಲಿ ಕನ್ನಡ ವಿಮರ್ಶಾ ವರ್ಗಕ್ಕೆ ಜಗತ್ತಿನ ಮಾಂತ್ರಿಕ ವಾಸ್ತವ ಸಾಹಿತ್ಯದ ಸುಳಿವೂ ಹತ್ತುತ್ತಿರಲಿಲ್ಲ ಎಂದು ನನಗನಿಸುತ್ತದೆ. ದಶಕಗಳ ಹಿಂದೆಯೇ ಹೀಗೆ ಪರಿಚಯ ಮಾಡಿಕೊಂಡರೂ ಆ ಪ್ರಕಾರದ ಬಗ್ಗೆ ಒಂದು ಬಗೆಯ ಅವ್ಯಕ್ತ ಹೆದರಿಕೆ, ಕೀಳರಿಮೆ ಕನ್ನಡ ವಿಮರ್ಶಾವರ್ಗದಲ್ಲಿ ಇಂದಿಗೂ ಮನೆಮಾಡಿಕೊಂಡಿದೆ. ಮಾಂತ್ರಿಕ ವಾಸ್ತವತೆ ಬೇಡುವ ವಿಶೇಷ ಅವಲೋಕನ ಹಾಗೂ ವಿಮರ್ಶಾ ಪರಿಕರಗಳನ್ನು ಹುಡುಕಿ ಅಥವಾ ಸೃಷ್ಟಿಸಿ ತನ್ನದಾಗಿಸಿಕೊಳ್ಳಲು ಕನ್ನಡ ವಿಮರ್ಶಾವರ್ಗಕ್ಕೆ ಭಯಮಿಶ್ರಿತ ಹಿಂಜರಿಕೆ ಇದೆ ಎಂದು ನಾನಂತೂ ಬಲವಾಗಿ ನಂಬಿದ್ದೇನೆ. ನಾಲ್ಕು ಜನ ನಡೆದು ಸವಕಲಾಗಿರುವ ಹಾದಿಯಲ್ಲೇ ನಡೆಯುವುದು ಕ್ಷೇಮಕರ, ಸುಖಕರ, ಲಾಭಕರ ಎಂದು ನಂಬುವ ಸ್ಥಿತಿ ಇರುವವರೆಗೂ ಹೊಸ, ಅಪರಿಚಿತ ಹಾವಿಗಳತ್ತ ಕುತೂಹಲವಾಗಲೀ, ಆಸಕ್ತಿಯಾಗಲೀ, ಅಗತ್ಯದ ಅರಿವಾಗಲೀ, ಧೈರ್ಯವಾಗಲೀ ಮೂಡುವುದಿಲ್ಲ. ಇದು ಸಾಮಾನ್ಯ ಮನುಷ್ಯರ ಸ್ವಭಾವ. ಅವರನ್ನು ಸಾಕಷ್ಟು ನೋಡಿದ್ದೇವೆ, ನೋಡುತ್ತಲೇ ಇದ್ದೇವೆ. ನಮಗ ಅಸಾಮಾನ್ಯರು ಬೇಕಾಗಿದ್ದಾರೆ. ಈ ಮಾಂತ್ರಿಕಗಾಯ ಕನ್ನಡಿಯಷ್ಟೇ ವಾಸ್ತವ” ಎಂದು ಹೇಳಿದ್ದಾರೆ.
ಹೊರನಾಡ ಕನ್ನಡಿಗ ಪ್ರೇಮಶೇಖರ ಪಠ್ಯವಿಷಯಗಳ ಬಗ್ಗೆ ಇಂಗ್ಲೀಷಿನಲ್ಲಿ ಸಂಶೋಧನಾ ಲೇಖನಗಳನ್ನು ಹಾಗೂ ಕನ್ನಡದಲ್ಲಿ ಕಥೆಕಾದಂಬರಿಗಳನ್ನು ಬರೆಯುವುದರ ಮೂಲಕ ಬರವಣಿಗೆಯನ್ನಾರಂಭಿಸಿದವರು.. ಹುಟ್ಟಿದ್ದು 1960 ಜೂನ್ 22 ಕೊಳ್ಳೇಗಾಲದಲ್ಲಿ. ದೆಹಲಿಯಲ್ಲಿ ವಿದ್ಯಾಭ್ಯಾಸ ಮಾಡಿ, ಇಪ್ಪತ್ತೆರಡು ವರ್ಷಗಳ ಸುಧೀರ್ಘ ಕಾಲ ಪಾಂಡಿಚೆರಿ ವಿಶ್ವವಿದ್ಯಾಲಯದಲ್ಲಿ ಭಾರತದ ವಿದೇಶಾಂಗ ನೀತಿಯನ್ನು ಬೋಧಿಸಿ 2012ರಲ್ಲಿ ಸ್ವಯಂನಿವತಿ ಪಡೆದುಕೊಂಡಿದ್ದಾರೆ. ಪತ್ರಿಕಾರಂಗದಲ್ಲಿರುವ ಹಿತೈಷಿಗಳ ಬಯಕೆಯಂತೆ ಅಂತರರಾಷ್ಟ್ರೀಯ ಸಂಬಂಧಗಳ ಬಗ್ಗೆ ಕನ್ನಡದಲ್ಲಿ ಐನೂರರಷ್ಟು ಲೇಖನಗಳನ್ನು ಬರೆದಿದ್ದಾರೆ. ಇದುವರೆಗೆ ಎರಡು ಕಾದಂಬರಿಗಳನ್ನೂ, ಹತ್ತು ಕಥಾ ಸಂಕಲನಗಳನ್ನೂ, ಹನ್ನೊಂದು ಲೇಖನ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಹಿತ್ಯಾಸಕ್ತರಿಗೆ ಕಥಾರಚನೆಯಲ್ಲಿ ತರಬೇತಿ ನೀಡುವ ಕಾರ್ಯಾಗಾರಗಳನ್ನು ...
READ MORE