‘ಬಣ್ಣದ ಹನಿಗಳು’ ಕತೆಗಾರ ಎಸ್.ಬಿ. ಜೋಗುರ ಅವರ ಕತಾಸಂಕಲನ.ಇಲ್ಲಿ ಅವರ ಹತ್ತು ಕತೆಗಳು ಸಂಕಲನಗೊಂಡಿವೆ. ಬಯಲು ಸೀಮೆಯ ಬದುಕಿನ ಗಾಢ ಬಣ್ಣವನ್ನು ಅನಾವರಣಗೊಳಿಸುತ್ತವೆ. ಈ ಕತೆಗಳು ಕೇವಲ ನಿರೂಪಣೆ ಮತ್ತು ಚಿತ್ರಕ ಶಕ್ತಿಯ ಚೌಕಟ್ಟಿಗೆ ಮಾತ್ರ ಸೀಮಿತವಾಗದೆ ಒಂದು ಪ್ರದೇಶದ ಸಾಂಸ್ಕೃತಿಕ ಸೊಗಡಿನ ವಾಸನೆಯನ್ನು ಹದವಾಗಿ ಹುರಿಗೊಳಿಸಿ, ಸೂಡು ಕಟ್ಟುತ್ತವೆ. ಕಥನ ಕ್ರಮ, ತಂತ್ರ, ಭಾಷೆ ಮತ್ತು ನಿರೂಪಣೆಯಲ್ಲಿ ಇಲ್ಲಿಯ ಬಹುತೇಕ ಕತೆಗಳು ವಿಭಿನ್ನತೆಯನ್ನು ಮೆರೆಯುತ್ತಲೇ ಗಮನ ಸೆಳೆಯುತ್ತವೆ.
ವೈಚಾರಿಕ ಬರಹಗಾರ ಎಸ್. ಬಿ. ಜೋಗುರ ಅವರುಕಥೆಗಳನ್ನೂ, ಕಾದಂಬರಿ, ಲೇಖನಗಳನ್ನು ಬರೆದಿದ್ದಾರೆ.ಇವರ ನಿದರ್ಶನ' ಕಾದಂಬರಿಯು ಒಂದು ಕುಟುಂಬದ ಮೂರು ತಲೆಮಾರಿನ ಬದುಕನ್ನು ಕೇವಲ 147 ಪುಟಗಳಲ್ಲಿ ಅನಾವರಣಗೊಳಿಸಿದ ಕಾದಂಬರಿಯಾಗಿದೆ. ಅಸ್ಪಶ್ಯತೆಯೆಂಬ ವಿಷ ಕೂಸಿನ ಸುತ್ತ, ಓಡಿ ಹೋದ ಹುಡುಗ ಮರಳಿ ಬಂದ ಕಥೆ, ‘ಅಂತರಾಳದ ಮಾತು, ಇರದೇ ತೋರುವ ಬಗೆ’ ಅವರ ಮತ್ತೆರಡು ಕೃತಿಗಳು. ಕತೆಗಾರ ಮತ್ತು ಪತ್ರಕರ್ತ ಎಸ್. ಬಿ. ಜೋಗುರ ಅವರು ಮೂಲತಃ ಸಿಂದಗಿಯವರು. ಧಾರವಾಡದಲ್ಲಿ ನೆಲೆಸಿದ್ದರು. ‘ಮುಗ್ಗಲು ಮನಸಿನ ಪದರು’ ಅವರ ಕತಾ ಸಂಕಲನ. ಸಿಂದಗಿಯಲ್ಲಿ ‘ಜೋಗುರ ಪತ್ರಿಕೆ’ ನಡೆಸುತ್ತಿದ್ದರು. ಕಾರವಾರದ ಕರಾವಳಿ ಮುಂಜಾವು ಪತ್ರಿಕೆ ...
READ MORE