ಹಿನ್ನೀರ ಅಲೆಗಳು

Author : ಪರಮೇಶ್ವರ ಕರೂರು

Pages 92

₹ 80.00




Year of Publication: 2017
Published by: ನೇಕಾರ ಪ್ರಕಾಶನ
Address: ನೇಕಾರ ಪ್ರಕಾಶನ, ಗುರುಮಂದಿರ ರಸ್ತೆ, ಸೊರಬ-577429 ಶಿವಮೊಗ್ಗ ಜಿಲ್ಲೆ
Phone: 9141833556

Synopsys

ಹಿನ್ನೀರ ಅಲೆಗಳು- ಪರಮೇಶ್ವರ ಕರೂರು ಅವರ ಕಥಾಸಂಕಲನ. ಭಾಷೆಯ ಮೇಲಿನ ಪ್ರಭುತ್ವ ಹಾಗೂ ಪ್ರಾದೇಶಿಕತೆಯ ಸೊಗಡನ್ನು ಕಥೆಗಳಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ. ಹೆಸರಾಂತ ಕಥೆಗಾರರು. ಶರಾವತಿಯ ಹಿನ್ನೀರಿನವರಾದ ಪರಮೇಶ್ವರ ಕರೂರು ಅಲ್ಲಿಯ ಬಡತನ, ಹಸಿವು, ಹಿಂಸೆ, ಮಾನವೀಯ ಸಂಬಂಧಗಳ ನಡುವೆ ಉಂಟಾಗಿರುವ ತಲ್ಲಣ ಇತ್ಯಾದಿಗಳನ್ನು ತಮ್ಮ ಕಥೆಗಳಲ್ಲಿ ಹಿಡಿದಿಟ್ಟಿದ್ದಾರೆ. ಸಣ್ಣ ಕಥೆಗಳಲ್ಲಿ ಈಗಾಗಲೇ ಇವರು ರಾಜ್ಯ ಮಟ್ಟದ ಹಲವಾರು ಬಹುಮಾನಗಳನ್ನೂ ಪಡೆದಿದ್ದಾರೆ. ಬದುಕು ಬದಲಾಗುತ್ತಿದೆ, ಬದಲಾಗುತ್ತಿರುವುದನ್ನು ಯಾವುದೇ ಸಿಟ್ಟಿಲ್ಲದೆ ನೋಡುವ ಈ ಕಥೆಗಾರನ ಕಥೆಗಳಲ್ಲಿ ಕುತೂಹಲ ಹಾಗೂ ಹೊಸ ದೃಷ್ಟಿಕೋನ ಎರಡೂ ಒಮ್ಮೆಗೇ ಮೂಡುತ್ತವೆ. 

ಆಧುನಿಕತೆ ಮತ್ತು ಅಭಿವೃದ್ಧಿಯ ವೇಗದಲ್ಲಿ ಅಸ್ಥಿರವಾದ ಮಾನವ ಬದುಕಿನ ದುರವಸ್ಥೆಯನ್ನು ಆಪ್ತವಾಗಿ ಚಿತ್ರಿಸುವ ಪರಮೇಶ್ವರ ಕರೂರು ಅವರ ಹಿನ್ನೀರ ಅಲೆಗಳು' ಶರಾವತಿ ಕಣಿವೆಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪಲ್ಲಟಗಳನ್ನು ಸಮಕಾಲೀನಗೊಳಿಸುವ ಮಹತ್ವದ ಕೃತಿಯಾಗಿದೆ. ಶರಾವತಿ ಕಣಿವೆಯಲ್ಲಿ ನೆಲೆನಿಂತ ನೀರು, ಆ ಭಾಗದ ಜನರ ಭಾವನಾತ್ಮಕ ಜಗತ್ತನ್ನು ಮುಳುಗಿಸಿದ ಪರಿಯನ್ನು ಯಾವುದೇ ಭಾವಾವೇಶಕ್ಕೆ ಒಳಗಾಗದೆ ಚಿತ್ರಿಸುವ ಕುಶಲತೆ ಇಲ್ಲಿ ಗಮನ ಸೆಳೆಯುತ್ತದೆ. ಯಾವುದೇ ಜನಾಂಗ ಮತ್ತು ಸಂಸ್ಕೃತಿಯ ಆತ್ಮಚರಿತ್ರೆಯಂತಿರುವ ಪ್ರಾದೇಶಿಕ ಭಾಷೆಯನ್ನು ದುಡಿಸಿಕೊಂಡಿರುವ ಬಗೆ ಇಲ್ಲಿ ಪರಿಣಾಮಕಾರಿಯಾಗಿದೆ. ಜೊತೆಗೆ ಭಾಷೆಯೇ ಒಂದು ಪಾತ್ರ'ವಾದ ಭಾವವನ್ನು ಉಂಟುಮಾಡುತ್ತದೆ. ಒಟ್ಟಾರೆ ಮುಳುಗಡೆಯ ಸಮಸ್ಯೆಗಳನ್ನು ಕುರಿತು ಜವಾಬ್ದಾರಿಯನ್ನು ಮೆರೆವ ಹಲವು ಉತ್ತಮ ಕೃತಿಗಳ ಜೊತೆ ಆತ್ಮವಿಶ್ವಾಸದಿಂದ ನಿಲ್ಲುವ ಶಕ್ತಿಯನ್ನು ಈ ಕೃತಿ ಪಡೆದಿದೆ

About the Author

ಪರಮೇಶ್ವರ ಕರೂರು
(01 June 1978)

ಕನ್ನಡ ಉಪನ್ಯಾಸಕರಾಗಿರುವ ಪರಮೇಶ್ವರ ಕರೂರು ಅವರು ಹಿನ್ನೀರ ಅಲೆಗಳು ಎಂಬ ಪುಸ್ತಕ ಪ್ರಕಟಿಸಿದ್ದಾರೆ. ಜಲಾಶಯ ನಿರ್ಮಾಣದ ನಂತರ ಹಿನ್ನೀರಿನಲ್ಲಿ ಉಂಟಾಗುವ ತಲ್ಲಣಗಳ ಬಗ್ಗೆ ಕರೂರು ಅವರು ದಾಖಲಿಸಿದ್ದಾರೆ. ...

READ MORE

Related Books