ಅರಳದ ಅಲರು

Author : ವಿಜಯಲಕ್ಷ್ಮಿ ಕೊಟಗಿ

Pages 134

₹ 0.00




Year of Publication: 2021
Published by: ವಿಜಯ ಲಕ್ಷ್ಮಿ ಕೊಟಗಿ
Address: "ಸಮೃದ್ಧಿ" ನಂದಿ ನಗರ, 4 ಅಡ್ಡ ರಸ್ತೆ ಕೊಪ್ಪಳ-583231
Phone: 9632240787

Synopsys

ಕಥೆಗಾರ್ತಿ ವಿಜಯಲಕ್ಷ್ಮಿ ಕೊಟಗಿ ಅವರ  'ಅರಳದ ಅಲರು' ಕೃತಿ ಸಣ್ಣ ಕಥೆಗಳ ಸಂಕಲನ. ಡಾ.ಅಮರೇಶ್ ನುಗಡೋಣಿ ಅವರು ಈ ಕೃತಿಗೆ ಬೆನ್ನುಡಿ ಬರೆದಿದ್ದು, ಬದುಕಿನ ದಟ್ಟವಾದ ಅನುಭವ ಹೊಂದಿದ ಅವರು ತಮ್ಮ ಸುತ್ತಮುತ್ತಲಿನ ಬದುಕನ್ನು ತೆರೆದ ಕಣ್ಣಿನಿಂದ ಗ್ರಹಿಸಿದ್ದಾರೆ. ಅವರು ಶಿಕ್ಷಕಿಯಾಗಿ ಗ್ರಾಮೀಣ ಮತ್ತು ನಗರಗಳ ಬದುಕನ್ನು ಬಹಳ ಹತ್ತಿರದಿಂದ ನೋಡಿದ್ದಾರೆ. ಮನುಷ್ಯನ ಹಲವು ಮುಖಗಳನ್ನು ಅವುಗಳ ಮೂಲ ಭಾವವನ್ನು ಅರಿಯುವಲ್ಲಿ ಪ್ರಯತ್ನಶೀಲರಾಗಿದ್ದಾರೆ. ಅವೆಲ್ಲವುಗಳ ಸಾಕ್ಷಿಪ್ರಜ್ಞೆಯಾಗಿ *ಅರಳದ ಅಲರು* ನಮ್ಮ ಕಣ್ಣೆದುರಿಗಿದೆ. ವರ್ತಮಾನದ ಸಂಗತಿಗಳು, ಪ್ರಚಲಿತದಲ್ಲಿರುವ ಸಂಗತಿಗಳು, ಬದುಕಿನ ಅನುಭವಗಳು, ಜನರೊಂದಿಗಿನ ನಿರಂತರ ಒಡನಾಟ ಕಥೆಯ ಹುಟ್ಟಿಗೆ ಕಾರಣವಾಗಿರಬಹುದು. ಹಾಗಾಗಿ ಅವರ ಕಥೆಯಲ್ಲಿನ ಪಾತ್ರಗಳು ನೋವಿನಲ್ಲಿ, ಸಂಕಷ್ಟದಲ್ಲಿ, ಧಾವಂತದಲ್ಲಿ ನೊಂದ ಪಾತ್ರಗಳಾಗಿವೆ. ಈ ನೋವಿನ ಕಥನಗಳು ಕಥೆಗಾರ್ತಿ ಯನ್ನು ತಟ್ಟಿದೆ. ನೋವುಗಳಿಗೆ ಸರಿಯಾದ ಪರಿಹಾರಗಳನ್ನು ಕಂಡುಕೊಳ್ಳಬೇಕೆಂಬ ತುಡಿತದಲ್ಲಿ ಕಥೆಗಳು ಉದಯಿಸಿವೆ ಎಂಬುದು ಕಥೆಗಾರರ ನಿಲುವುಗಳಿಂದಲೇ ವ್ಯಕ್ತವಾಗುತ್ತದೆ. ಕೆಲವೊಂದು ಸಂದರ್ಭದಲ್ಲಿ ಪರಿಹಾರಗಳು ಸೀಮಿತವಾಗಿಬಿಡುತ್ತದೆ ಎಂಬುದನ್ನು ಮರೆಯಬಾರದು. ತಮ್ಮ ಅಪಾರವಾದ ಅನುಭವಗಳಿಂದ ಕಥಾವಸ್ತುವಿನಲ್ಲಿ ವೈವಿಧ್ಯತೆಯನ್ನು ತರಲು ಕತೆಗಾರ್ತಿಗೆ ಸಾಧ್ಯವಾಗಿದೆ. ಈ ಕಥನಗಳ ನಿರ್ವಹಣೆಯಲ್ಲಿ ಇನ್ನಷ್ಟು ಸ್ಪಷ್ಟತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗಿದ್ದರೆ ಇವು ಇನ್ನಷ್ಟು ಉತ್ತಮ ಸಾಲಿನಲ್ಲಿ ನಿಲ್ಲಬಹುದಿತ್ತು. ಅವುಗಳ ವಸ್ತುವಿನ ದೃಷ್ಟಿಯಿಂದ ಈ ಮಾತನ್ನು ಹೇಳಬಹುದು. ಮೌಲ್ಯವನ್ನು ನಿರ್ಧರಿಸಲು ಇನ್ನಷ್ಟು ಹೊಳಹುಗಳನ್ನು ಕೊಡಬಹುದಿತ್ತು. ಕಥೆಯ ಪಾತ್ರಗಳು ನಿರಂತರವಾಗಿ ಒಂದೇ ಆಯಾಮದಲ್ಲಿರದೆ ಹಲವು ನೆಲೆಗಳಿಂದ ಚಿತ್ರಿತವಾಗಿವೆ. ಇಲ್ಲಿ ಬಹಳಷ್ಟು ಕಥೆಗಳು ಫ್ಲಾಶ್ ಬ್ಯಾಕ್ ತಂತ್ರದ ಮೂಲಕ ವರ್ತಮಾನಕ್ಕೆ ತೆರೆದುಕೊಳ್ಳುತ್ತವೆ. ಇದು ಕತೆಗಾರ್ತಿಯ ಶಕ್ತಿ ಎಂದೇ ಹೇಳಬಹುದು. ಈ ಕಥೆಗಳಿಗೆ ಬಳಸಿಕೊಂಡ ಕವೀಶ್ವರ ಕಾವ್ಯನಾಮದ ತ್ರಿಪದಿಗಳು ಕಥೆಗಳ ಆಂತರ್ಯವನ್ನು ಬಿಚ್ಚಿಡುವುದರಲ್ಲಿ ಸಹಕಾರಿಯಾಗಿವೆ. ಇಲ್ಲಿರುವ ಹದಿನಾಲ್ಕು ಕಥೆಗಳು ಓದಿಸಿಕೊಂಡು ಹೋಗುವ ಜೊತೆಗೆ ಓದುರಿಗೆ ಸಂವಹನವಾಗುತ್ತವೆ.ಅಯಾ ಪಾತ್ರದ ಮುಖ್ಯ ವಿವರಗಳ ಜೊತೆ ಅನ್ಯ ಎನಿಸುವ ಸಂಗತಿಗಳ ಕುರಿತು ಗಮನಹರಿಸಬಹುದಿತ್ತು. ಆದರೂ ಇದು ಅಲ್ಲಲ್ಲಿ ಸಾಧ್ಯವಾಗಿದೆ. ತನ್ನ ವಸ್ತು ವೈವಿಧ್ಯತೆಯಿಂದ *ಅರಳದ ಅಲರು* ಎಲ್ಲ ಕನ್ನಡಿಗರ ಮನಸ್ಸನ್ನು ತಟ್ಟಬಹುದೆಂದು ಆಶಿಸುವೆ’ ಎಂದಿದ್ದಾರೆ. 

About the Author

ವಿಜಯಲಕ್ಷ್ಮಿ ಕೊಟಗಿ
(01 June 1968)

ಕೊಪ್ಪಳ ಜಿಲ್ಲೆಯ ವಿಜಯಲಕ್ಷ್ಮಿ ಕೊಟಗಿಯವರು ವೃತ್ತಿಯಿಂದ ಶಿಕ್ಷಕಿಯಾದರೂ ಪ್ರವೃತ್ತಿಯಿಂದ ಕವಯತ್ರಿ ಮತ್ತು ಕಲಾವಿದೆ. ವೃತ್ತಿಯೊಂದಿಗೆ ಪ್ರವೃತ್ತಿಯನ್ನು ಅಪಾರವಾಗಿ ಪ್ರೀತಿಸುವ ಇವರು ಸದಾ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಅನೇಕ ಸಾಹಿತ್ಯ ಸಮ್ಮೇಳನ ಮತ್ತು ಕವಿ ಗೋಷ್ಠಿಯಲ್ಲಿ ಭಾಗವಹಿಸಿ ಹಿರಿಯ ಸಾಹಿತಿಗಳ ಮೆಚ್ಚುಗೆ ಪಡೆದಿದ್ದಾರೆ. ಅಲ್ಲದೇ *ನನ್ನೊಳಗಿನ ನಾನು, ಕೆಂಡದ ಉಡಿಯಕ್ಕಿ, ಮುತ್ತಿನ ಕುಂಚಿಗೆ, ಮಿಂಚುಹನಿ* ಕೃತಿಗಳು ಈಗಾಗಲೇ ಪ್ರಕಟಿಸಿದ್ದಾರೆ. ಈಗ *ಶ್ರೀವಿಜಯ ಸ್ವಗತ* ಆಧುನಿಕ ವಚನಗಳು ಮತ್ತು *ಅರಳದ ಅಲರು* ಸಣ್ಣ ಕಥಾ ಸಂಕಲನ ಲೋಕಾರ್ಪಣೆಗೊಳ್ಳಬೇಕಿದೆ. ಸ್ತ್ರೀಪರ ನೆಲೆಯಲ್ಲಿ ಸೂಕ್ಷ್ಮ ಸಂವೇದಿ ಬರಹದ ಈ ಕೃತಿಗಳು ಎಲ್ಲರ ಮೆಚ್ಚುಗೆಗೆ ...

READ MORE

Related Books