ಲೇಖಕಿ ಶಾಂತಲಾ ಭಂಡಿ ಅವರ ಸಣ್ಣ ಕಥೆಗಳ ಸಂಕಲನ ‘ಚಂದಮಾಮ ಮಲಗಿದ್ದಾನೆ’. ಸುಮಾರು 2007ರಿಂದ-2014ರ ವರೆಗೆ ಬರೆದ 10 ಕತೆಗಳು ಈ ಸಂಕಲನದಲ್ಲಿವೆ. ಓದುವವರಿದ್ದಾರೆಂಬ ಆತ್ಮವಿಶ್ವಾಸದಿಂದ ಬರೆದ ಕತೆಗಳು, ಪತ್ರಿಕೆಗಳಲ್ಲಿ ಪ್ರಕಟವಾದ ಕತೆಗಳು ಪುಸ್ತಕ ರೂಪವನ್ನು ಪಡೆದಿದೆ.ಈ ಕಥಾ ಸಂಕಲನಕ್ಕೆ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅವರು ಬೆನ್ನುಡಿಯನ್ನು ಬರೆದಿದ್ದಾರೆ. ವರ್ಷಾಂತ್ಯದಲ್ಲಿ ಸಪ್ನ ಬುಕ್ ಹೌಸ್ ರಾಜ್ಯೋತ್ಸವವನ್ನು ಪುಸ್ತಕದ ಹಬ್ಬವಾಗಿ ಆಚರಿಸಿದ್ದು,ಲೇಖಕರು, ಓದುಗರು, ಪ್ರಕಾಶಕರು ಈ ಪುಸ್ತಕ ಪರ್ವದಲ್ಲಿ ಪಾಲ್ಗೊಂಡು ಕಣ್ಮನ ತುಂಬಿಕೊಂಡಿದ್ದಾರೆ. ಹೀಗೆ ಸಂಸ್ಕೃತಿಗೆ ಪೋಷಕವಾದ ಸರಸ್ವತೀ ಮಂದಿರವನ್ನು ಸ್ಥಾಪಿಸಿ ಮುನ್ನಡೆಸುತ್ತಿರುವ ಸಪ್ನ ಬುಕ್ ಹೌಸ್‌ನ ಮಾಲೀಕರನ್ನೂ, ವ್ಯವಸ್ಥಾಪಕರನ್ನೂ ಕನ್ನಡಿಗರು ಹೃದಯ ಅಭಿನಂದಿಸಬೇಕಾಗಿದೆ ಎಂದಿದ್ದಾರೆ. ಕನ್ನಡ ಪ್ರಭದ ಪ್ರಧಾನ ಸಂಪಾದಕರಾದ ರವಿ ಹೆಗ್ಡೆಯವರ ಚೆಂದದ ಮುನ್ನುಡಿಯಿದೆ.
ಕೃತಿಯ್ಲಲಿ ಹತ್ತು ಪರಿವಿಡಿಗಳಾದ ಕೊನೆ ಕೊಯಿಲು, ಆ ತೀರಕೆ ಆತ್ಮಯಾನ, ಪಾಪ ಬರೆಸಿದ ಕಥೆಗಳು, ಚಂದಮಾಮ ಮಲಗಿದ್ದಾನೆ. ಹಿಂದೆ ಯಾವ ಜನ್ಮದಲ್ಲೋ, ದೂರದೊಂದು ತೀರದಿಂದ, ನೀಲು ಎಂಬ ನೆನಪು, ಹೊಸ ಕದಿರು, ಅಂತರ, ಸೀತಿ ಇವೆಲ್ಲವುಗಳು ಇಲ್ಲಿವೆ.
ಕವಯತ್ರಿ, ಲೇಖಕಿ ಶಾಂತಲಾ ಭಂಡಿ ಅವರು ಮೂಲತಃ ಶಿರಸಿ ತಾಲೂಕಿನ ಬೆಂಗಳೆಯವರು. ಪ್ರಸ್ತುತ ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿದ್ದು, ಟೆಕ್ನಿಕಲ್ ರಿಕ್ರೂಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಅನೇಕ ಕತೆ-ಕವನ, ಪ್ರಬಂಧ, ಲಹರಿ, ಲೇಖನಗಳು ಕನ್ನಡ ಪತ್ರಿಕೆ ಹಾಗೂ ಅಂತರ್ಜಾಲದಲ್ಲೂ ಪ್ರಕಟವಾಗಿವೆ. ಇವರ ಬ್ಲಾಗ್ ’ನೆನಪು ಕನಸುಗಳ ನಡುವೆ’. ಕೃತಿಗಳು: ಬೊಗಸೆಯಲ್ಲಿ ಬೆಳದಿಂಗಳು (ಕವನ ಸಂಕಲನ-2010), ಬೆಳದಿಂಗಳ ಬೇರು (ಪ್ರಬಂಧ/ಲಹರಿ ಗುಚ್ಛ -2012) ...
READ MORE