‘ತೂಫಾನ್ ಮೇಲ್’ ಸಾಹಿತಿ ಜಯಂತ ಕಾಯ್ಕಿಣಿ ಅವರ ಕತಾಸಂಕಲನ. ಈ ಪುಸ್ತಕಕ್ಕೆ ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರು ಬೆನ್ನುಡಿ ಬರೆದಿದ್ದಾರೆ. ಇಲ್ಲಿಯ ಕತೆಗಳ ಕುರಿತು ಬರೆಯುತ್ತಾ ‘ಮಾನವೀಯ ಅಸಂಗತವನ್ನು ಗ್ರಹಿಸುವ ಜಯಂತ ಕಾಯ್ಕಿಣಿಯವರ ನೋಟ ವಿಶಿಷ್ಟವಾದದ್ದು, ಸಣ್ಣ ಊರಿನಿಂದ ಬಂದವರಾಗಿದ್ದೂ ಜಯಂತ ನಗರ ಜೀವನವನ್ನು ನೋಡುವ ಬಗೆ ಕನ್ನಡಕ್ಕೆ ಹೊಸತಾಗಿದೆ. ಅವರ ಕತೆಗಳ ಕಳಕಳಿ, ಚಲನೆಯ ಲಯ, ಹೊಮ್ಮುವ ಚೈತನ್ಯ ಎಲ್ಲ ಅವರದೇ ಆಗಿದೆ. ಓದಬೇಕು ಅನ್ನಿಸುವ ಅಪರೂಪದ ಸೆಳೆತದ ಲೇಖಕ ಜಯಂತ’ ಎಂದಿದ್ದಾರೆ ಕಾರ್ನಾಡ್.
ಈ ಕೃತಿಯಲ್ಲಿ ಕಾಯ್ಕಿಣಿ ಅವರ ನೋ ಪ್ರೆಸೆಂಟ್ಸ್ ಪ್ಲೀಸ್, ಕಣ್ಮರೆಯ ಕಾಡು, ಪಾರ್ಟನರ್, ಭಾಮಿನಿ ಸಪ್ತಪದಿ, ಕನ್ನಡಿ ಇಲ್ಲದ ಊರಲ್ಲಿ, ತೂಫಾನ್ ಮೇಲ್, ಬಕುಲ ಗಂಧ, ಬಾವಿಯಲ್ಲೊಂದು ಬಾಗಿಲು, ಗೇಟ್ ವೇ, ಟಿಕ್ ಟಿಕ್ ಗೆಳೆಯ ಹಾಗೂ ಒಪೆರಾ ಹೌಸ್ ಹೀಗೆ ಹನ್ನೊಂದು ಕತೆಗಳು ಸಂಕಲನಗೊಂಡಿವೆ.
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದ ಜಯಂತ ಅವರ ತಂದೆ ಗೌರೀಶ ಕಾಯ್ಕಿಣಿ ಹೆಸರಾಂತ ವಿಚಾರವಾದಿ ಲೇಖಕ. ಆಧುನಿಕ ಬದುಕಿನ ಆತಂಕಗಳನ್ನು ಕತೆಯಾಗಿಸುವ ಜಯಂತ ಕಾಯ್ಕಿಣಿ ಅವರು ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರು. ’ಕತೆಗಾರ’ ಎಂಬ ವಿಶೇಷಣ ಇದೆಯಾದರೂ ಅವರೊಬ್ಬ ಪ್ರಮುಖ ಕವಿ ಕೂಡ ಹೌದು. ಪ್ರಬಂಧ, ಅಂಕಣ ಬರಹ, ಚಲನಚಿತ್ರ ಸಂಭಾಷಣೆ ಮತ್ತು ಗೀತರಚನೆ ಹೀಗೆ ಹಲವು ಪ್ರಕಾರಗಳಲ್ಲಿ ಹೆಜ್ಜೆಗುರುತು ಮೂಡಿಸಿದ್ದಾರೆ. ’ಭಾವನಾ’ ಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದ ಜಯಂತ ಅವರು ಈಟಿವಿ ವಾಹಿನಿಗಾಗಿ ’ನಮಸ್ಕಾರ’, ಬೇಂದ್ರೆ, ಕುವೆಂಪು, ಕಾರಂತ ನಮನ ಸರಣಿಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ರಂಗದಿಂದೊಂದಿಷ್ಟು ದೂರ, ಕೋಟಿತೀರ್ಥ, ಶ್ರಾವಣ ಮಧ್ಯಾಹ್ನ, ...
READ MORE