ಡಿ.ಬಿ. ರಜಿಯಾ ಅವರ ಕತಾಸಂಕಲನ ‘ವಾಸ್ತವದ ಕನವರಿಕೆ’. ಈ ಕೃತಿಗೆ ಡಾ.ನಾ. ದಾಮೋದರ ಶೆಟ್ಟಿ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ಕಾವ್ಯ ಮಾಧ್ಯಮದ ಬೆನ್ನೇರಿ ಸಾಗಿದ ಡಿ.ಬಿ. ರಜಿಯಾ ಕಥಾ ಪ್ರಕಾರದೊಳಗೆ ಪ್ರವೇಶ ಪಡೆಯುವ ಸಂಭ್ರಮದ ಸಂದರ್ಭ. ದಿನ ಪತ್ರಿಕೆಗಳಲ್ಲಿ ಪ್ರಕಟಗೊಂಡವುಗಳು ಕೆಲವಾದರೆ ಸಂಕಲನಕ್ಕೆಂದೇ ಬರೆದ ಕತೆಗಳು ಕೆಲವು. ಕವನದ ನಾಡಿಮಿಡಿತವನ್ನು ಬಲ್ಲವರು ಕತೆಯೊಳಕ್ಕೆ ಪ್ರವೇಶ ಪಡೆದಾಗ ಕತೆಯೂ ಕಾವ್ಯಮಯವಾಗಬಲ್ಲದು. ರಜಿಯಾರದು ಆ ಬಗೆಯ ಆತ್ಮೀಯ ಶೈಲಿ. ಅವರ ಮುಗ್ಧ ಮಾನಿನಂತೆಯೇ ಎಂದಿದ್ದಾರೆ ದಾಮೋದರ ಶೆಟ್ಟಿ. ಹಾಗೇ ರಜಿಯಾ ಅವರ ಕತೆಗಳಿಗೆ ಜಾತಿಮತಗಳಿಲ್ಲ. ಅವರ ಕಥಾಪಾತ್ರಗಳು ಮುಸ್ಲಿಂ ಆಗಿದ್ದರೆ ಆ ಪರಿಸರವನ್ನು ಕಟ್ಟಿಕೊಡುವ, ಹಿಂದೂ ಆಗಿದ್ದರೆ ಆ ಆವರಣಕ್ಕೆ ಹೊಂದಿಕೊಳ್ಳುವ ಜಾಯಮಾನವುಳ್ಳವು. ಆದ್ದರಿಂದಲೇ ಅವರನ್ನು ಯಾವುದೇ ನಿರ್ದಿಷ್ಟ ಸಂವೇದನೆಯರೆಂದು ಮುದ್ರೆ ಒತ್ತಿ ಕರೆಯುವ ಹಾಗಿಲ್ಲ ಎಂದಿದ್ದಾರೆ. ರಜಿಯಾ ಅವರ ಕತೆಗಳಲ್ಲಿ ನೀಚಪಾತ್ರಗಳು ಅತಿ ವಿರಳ, ಕರುಣೆ, ಮಿಡಿಯುವ ಕತೆ, ಅನುತಾಪ ಬಯಸುವ ಪಾತ್ರಗಳು, ಮುಖ್ಯವಾಗಿ ಸ್ತ್ರೀ ಪಾತ್ರಗಳು, ಅಪರೂಪಕ್ಕೊಮ್ಮೆ ನೀಚರಾಗಿ ಕಾಣಿಸಿಕೊಂಡವರು ಅದಕ್ಕೆ ಬಡ್ಡಿ ತೆತ್ತಾಗಲೇ ಕತೆ ಮುಗಿಯುವುದು. ಸಾಮಾಜಿಕ ಎಚ್ಚರ, ರುಜು ಮಾರ್ಗಗಳೇ ಅವರ ಕತೆಗಳ ಜೀವಾಳ. ಆದ್ದರಿಂದಲೇ ಅವರ ಕತೆಯ ಪ್ರತಿಸಾಲೂ ಓದುಗನ ಮನಸ್ಸನ್ನು ತಟ್ಟುವುದು- ಅವರ ಮುಗ್ಧ ಮಾತಿನಂತಿಯೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಡಾ. ನಾ. ದಾಮೋದರ ಶೆಟ್ಟಿ.
ಡಿ. ಬಿ. ರಜಿಯಾ ಮೂಲತಃ ಬಳ್ಳಾರಿ ಜಿಲ್ಲೆಯ ಹಿರೇಕಾಳಿನವರು. 1954 ಜನವರಿ 26ರಂದು ಜನನ. ತಂದೆ ಹೆಚ್. ಇಬ್ರಾಹಿಂ, ತಾಯಿ ಸಕೀನಾ ಬೇಗಂ. ‘ಛಾಯೆ, ಕಳೆದು ಹೋಗುತ್ತೇವೆ, ಋತು’ ಎಂಬ ಹನಿಗವನಗಳನ್ನು ರಚಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆಯಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ. ‘ವಾಸ್ತವದ ಕನವರಿಕೆ’ ಅವರ ಕಥಾ ಸಂಕಲನವಾಗಿದೆ. ಅವರಿಗೆ ಡಾ. ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಗೀತಾ ದೇಸಾಯಿ ದತ್ತಿ ಬಹುಮಾನ, ಕರಾವಳಿ ಲೇಖಕಿಯರು ವಾಚಕಿಯರ ಸಂಘದ ಕೃಷ್ಣಬಾಯಿ ದತ್ತಿ ಬಹುಮಾನ, ಅಮ್ಮ ಪ್ರಶಸ್ತಿ, ಮಾತೃಶ್ರೀ ರತ್ನಮ್ಮ ಹೆಗಡೆ ಬಹುಮಾನ , ಹರಿಹರಶ್ರೀ ಪ್ರಶಸ್ತಿ, ...
READ MORE