ವೇದಗಳಿಗೆ ಕೊಡುಗೆಗಳನ್ನು ನೀಡಿದ ಮಹಿಳೆಯರನ್ನು ‘ವೇದ ಕಾಲದ ವಿದುಷಿಯರು’ ಕೃತಿಯಲ್ಲಿ ಮೂಲ ಚೌಕಟ್ಟಿಗೆ ಧಕ್ಕೆಯಾಗದಂತೆ ಪರಿಚಯಿಸಿದ್ದಾರೆ ಲೇಖಕ ಅರವಿಂದ ಚೊಕ್ಕಾಡಿ. ಕುಟುಂಬದವರಿಂದ ಕೇಳಿಸಿಕೊಂಡ, ಋಗ್ವೇದ, ಯಜುರ್ವೇದದ ಕೆಲವು ಭಾಗಗಳು, ಅರವಿಂದ ಘೋಷರ ಬರಹಗಳು, ಬೃಹದಾರಣ್ಯಕ ಉಪನಿಷತ್, ಹಲವು ವಿದ್ವತ್ ಚರ್ಚೆಗಳಲ್ಲಿ ಕೇಳಿಸಿಕೊಂಡ ವಿಷಯಗಳು, ಮುಂತಾದವುಗಳಿಂದ ಪಡೆದ ಮಾಹಿತಿಯನ್ನು ಒಟ್ಟಾಗಿ ಒಂದು ಚೌಕಟ್ಟಿನಲ್ಲಿ ತಂದು ನಿರೂಪಿಸಿದ್ದಾರೆ ಲೇಖಕರು.
ಅರವಿಂದ ಚೊಕ್ಕಾಡಿ ಅವರು 1975ರ ಡಿಸೆಂಬರ್ 21ರಂದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಮಾಲೆತ್ತೋಡಿ ಎಂಬಲ್ಲಿ ಜನಿಸಿದರು. ತಂದೆ ಕುಕ್ಕೆಮನೆ ವೆಂಕಟ್ರಮಣಯ್ಯ ಗೋಪಾಲ ಶರ್ಮ. ತಾಯಿ ಪಾರ್ವತಿ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚಕ್ಕಾಡಿಯಲ್ಲಿ ಮುಗಿಸಿ ಪದವಿ ಪೂರ್ವ ಮತ್ತು ಬಿ.ಎ ಪದವಿಯನ್ನು ಸುಳ್ಯದ ನೆಕರೂ ಮೆಮೋರಿಯಲ್ ಕಾಲೇಜಿನಲ್ಲಿ ಪಡೆದರು. ಮಂಗಳೂರಿನ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದಿಂದ ಬಿ. ಇಡ್. ಪದವೀಧರರಾಗಿರುವ ಇವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ. ಎ ಪದವಿ ಪಡೆದರು. 2011 ರಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ...
READ MORE