ಶಿವಕುಮಾರ ಮಾವಲಿ ಅವರ ಮೊದಲ ಕಥಾ ಸಂಕಲನ `ದೇವರು ಅರೆಸ್ಟ್ ಆದ’. ಇಲ್ಲಿಯ ಕತೆಗಳ ನವೀನ ನಿರೂಪಣೆ, ಸೃಜನಾತ್ಮಕತೆ, ನವಿರಾದ ಹಗುರ ಭಾವಗಳು ಓದಿನೊಂದಿಗೆ ನಮ್ಮದಾಗುತ್ತದೆ. ತಮ್ಮ ತಾಜಾತನದ ಕತೆಯ ಎಳೆಯೊಂದಿಗೆ ಸಮ್ಮೋಹನಗೊಳಿಸುವಲ್ಲಿ ಯಶಸ್ವಿಯಾಗುತ್ತವೆ.
'ದೇವರು ಅರೆಸ್ಟ್ ಆದ’ ಕತೆಯು ಬರಹಕ್ಕೂ ಬದುಕಿಗೂ ಸಂಬಂಧವಿಲ್ಲದೆ ನಾಡಿಗೆ ಬುದ್ಧಿ ಹೇಳುವ ಆಷಾಡಭೂತಿಗಳ ಬಣ್ಣ ಬಯಲು ಮಾಡುತ್ತದೆ. ಮೇಲ್ನೋಟಕ್ಕೆ ಸರಳವಾದ ಕತೆ ಎನಿಸಿಕೊಂಡರೂ ಆಳದಲ್ಲಿ ವಿಶೇಷ ಅನುಭವಗಳನ್ನು ಕಟ್ಟಿಕೊಡುತ್ತದೆ. ಶಿವಕುಮಾರ ಮೂಲತಃ ರಂಗಭೂಮಿಯವರಾದ್ದರಿಂದ ಅವರು ಬಳಸಿರುವ ವ್ಯಂಗ್ಯ ಮಿಶ್ರಿತ ಮಾತುಗಳು, ಕೊಟ್ಟು ತೆಗೆದುಕೊಳ್ಳುವ ಸಂಭಾಷಣೆಯ ಮಾದರಿ ಕತೆಗೆ ಮತ್ತಷ್ಟು ಗಟ್ಟಿತನ ತಂದುಕೊಟ್ಟಿದೆ.
ಶಿವಕುಮಾರ್ ಮಾವಲಿ ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಾವಲಿಯವರು. ಶಿವಮೊಗ್ಗದ ಡಿ.ವಿ.ಎಸ್. ಹಾಗೂ ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ.ಪದವಿ ಪಡೆದಿದ್ದಾರೆ. ಸದ್ಯ ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಶಿವಕುಮಾರ್ ಪ್ರತಿಭಾವಂತ ಬರಹಗಾರ. ಕಥೆ, ಕವಿತೆ, ನಾಟಕ ಹೀಗೆ ಸಾಹಿತ್ಯದ ಹಲವು ವಿಭಾಗಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಶಿವಕುಮಾರ್ ಅವರ ಮೊದಲ ಕಥಾಸಂಕಲನ ‘ದೇವರು ಅರೆಸ್ಟ್ ಆದ’ ಅವರ ‘ಸುಪಾರಿ ಕೊಲೆ’ ನಾಟಕ ಸಿನಿಮವಾಗುತ್ತಿದೆ. ಅವರ ಇತ್ತೀಚಿನ ಪುಸ್ತಕ ಟೈಪಿಸ್ಟ್ ತಿರಸ್ಕರಿಸಿದ ಕಥೆ. ಈ ಕೃತಿಯನ್ನು ಬಹುರೂಪಿ ...
READ MORE