ಮತಾಂತರ

Author : ಕಲಿಗಣನಾಥ ಗುಡದೂರು

Pages 96

₹ 65.00




Year of Publication: 2007
Published by: ಸಂಸ್ಕೃತಿ ಪ್ರಕಾಶನ
Address: ಪಿಡಬ್ಯುಡಿ ಕ್ವಾಟ್ರಸ್‌, ಡಿಡಿಪಿಐ ಕಚೇರಿ ಎದುರು, ಬಳ್ಳಾರಿ
Phone: 9448323400

Synopsys

ಮತಾಂತರ ಕಲಿಗಣನಾಥ ಗುಡದೂರು ಅವರ ಕಥಾ ಸಂಕಲನ. ಸಮಕಾಲೀನ ವಿಷಯಗಳನ್ನು ಕಥಾ ವಸ್ತುವಾಗಿಸಿಕೊಂಡಿರುವ ಲೇಖಕರ ಕತೆಗಳು ಇಂದಿನ ಸಮಾಜದ ಪ್ರತಿರೂಪದಂತಿವೆ. ಈ ಕೃತಿಯಲ್ಲಿರುವ ಕತೆಗಳು ಓದುಗನ ಆಲೋಚನಾ ಕ್ರಮವನ್ನೇ ಬದಲಾಯಿಸುವಂತಿವೆ. ಸುತ್ತ ಮುತ್ತಲ ಸಮಾಜದಲ್ಲಿ ತಾನು ಕಂಡುಂಡ ಅಂಶಗಳನ್ನು ಕತೆ ರೂಪದಲ್ಲಿ ಕಟ್ಟಿಕೊಟ್ಟಿರುವ ಲೇಖಕರ ಬರವಣಿಗೆ ಶೈಲಿ ಸರಳವಾಗಿದ್ದು, ಓದುಗನನ್ನು ಹಿಡಿದಿಡುತ್ತದೆ.  

ಈ ಕಥಾ ಸಂಕಲನದಲ್ಲಿರುವ ಕತೆಗಳೆಂದರೆ; ಈ ದಾಹ ದೊಡ್ಡದು, ಉರಿವ ಕೆಂಡದ ಮೇಲೆ, ಮತಾಂತರ, ಕಾಗದದ ದೋಣಿ, ಕೆರೆ, ಆಗಸ್ಟ್‌ 15, ಫಲಶೃತಿ ಹಾಗೂ ಅವ್ವ.  

About the Author

ಕಲಿಗಣನಾಥ ಗುಡದೂರು
(11 October 1974)

 ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಗುಡದೂರು ಗ್ರಾಮದವರಾದ ಕಲಿಗಣನಾಥ ಅವರು ವೃತ್ತಿಯಂದ ಪತ್ರಕರ್ತ. ಕಥೆ, ಕವನ, ಲೇಖನಗಳನ್ನು ಬರೆದಿದ್ದರೂ ಸಾಹಿತ್ಯಲೋಕದಲ್ಲಿ ’ಕತೆಗಾರ’ ಎಂದೇ ಚಿರಪರಿಚಿತ. ಜಾಗತೀಕರಣದ ನಂತರದ ಹೊಸ ತಲೆಮಾರಿನ ತಲ್ಲಣಗಳಿಗೆ ಸ್ಪಂದಿಸುವ ಕಲಿಗಣನಾಥ ಅವರು, ಬದಲಾದ ಗ್ರಾಮೀಣ ಆರ್ಥಿಕತೆ ಸಂಕಷ್ಟ ಹಾಗೂ ಸಾಮಾಜಿಕ ಸ್ಥಿತ್ಯಂತರಗಳನ್ನು ತಮ್ಮ ಕತೆಗಳಲ್ಲಿ ದಾಖಲಿಸುತ್ತಾರೆ. ಮತಾಂತರ, ಮಾಮೂಲಿ ಗಾಂಧಿ, ತೂತುಬೊಟ್ಟು (ಕಥಾ ಸಂಕಲನಗಳು) ಪ್ರಕಟಿತ ಕೃತಿಗಳು. ...

READ MORE

Related Books