ಲೇಖಕಿ ಅನನ್ಯ ತುಷಿರ ಅವರ ಸಣ್ಣ ಕತೆಗಳ ಸಂಕಲನ ಅರ್ಧ ನೆನಪು ಅರ್ಧ ಕನಸು. ಈ ಕಥಾ ಸಂಕಲನದಲ್ಲಿ 14 ಕಥೆಗಳಿವೆ. ಕೃತಿಗೆ ಲಲಿತಾ ಸಿದ್ದಬಸವಯ್ಯ ಅವರು ಮುನ್ನುಡಿ ಬರೆದಿದ್ದು,’ಹಳ್ಳಿ ಪೇಟೆಗಳೆಂಬ ಎರಡು ಚಪ್ಪರಗಳ ಮೇಲೆ ನಿಮ್ಮ ಕಥಾವಲ್ಲರಿಗಳು ಕುಡಿಗಳೊಡೆಯುತ್ತವೆ. ಹಳ್ಳಿಯ ಕತೆಗಳು ಹೆಚ್ಚು ಗಟ್ಟಿಯಾಗಿವೆ, ಸಹಜವಾಗಿವೆ, ಅನುಭವವು ಓದುಗನ ಅನುಭವವೂ ಆಗಬಹುದಾದ ಆಳವನ್ನು ಹೊಂದಿವೆ. ತಕ್ಕಂತಹ ಭಾಷೆಯೂ ಕರಗತವಾಗಿದೆ. ಬಹು ಮುಖ್ಯವಾದವು ಎಂದು ನನಗನಿಸಿದ ಜೋಳದ ಕಾಳು, ಅಜ್ಜಯ್ಯ, ಎಲೆಹಬ್ಬ - ಈ ಮೂರೂ ಕತೆಗಳೂ ಸೇರಿದಂತೆ ನಿಮ್ಮ ಅಷ್ಟೂ ಗ್ರಾಮ್ಯ ಚಿತ್ರಗಳು ಒಂದೇ ಗ್ರಾಮದ ಬೇರೆ ಬೇರೆ `ಓಣಿಯಲ್ಲಿ ಓಡಾಡಿಕೊಂಡಿರುವವು ಅನಿಸುತ್ತವೆ. ಈ ಎಲ್ಲವುಗಳನ್ನು ಕೋದು ಒಂದು ಕಾದಂಬರಿ ರಚಿಸಲು ನೀವು ಶಕ್ತರು. ನಿಮ್ಮ ಕತೆಗಳಿಗೆ ಮೊದಲ ಕಥಾಸಂಗ್ರಹ ಎಂಬ ರಿಯಾಯಿತಿಯ ಅಗತ್ಯವಿಲ್ಲ. ಕನ್ನಡಕ್ಕೆ ಮತ್ತೊಬ್ಬ ಪಳಗಿದ ಕತೆಗಾರಮ್ಮ ಸಿಕ್ಕಿದಿರಿ’ ಎಂಬುದಾಗಿ ಹೇಳಿದ್ದಾರೆ.
ಅನನ್ಯ ತುಷಿರಾ (ಸವಿತಾ ಆರ್.ಇನಾಮದಾರ್) ಮೂಲತಃ ಬಿಜಾಪುರ (ವಿಜಯಪುರ) ಜಿಲ್ಲೆ ತಾಳೀಕೋಟೆಯವರು. ತಂದೆ ಶ್ರೀ ರಾಜಪ್ಪ ಇನಾಮದಾರ ಮತ್ತು ತಾಯಿ ಶ್ರೀಮತಿ ಅನಸೂಯಾ ಇನಾಮದಾರ. ತನ್ನದೇ ಪುಟ್ಟ ಅಕ್ಷರ ಜಗತ್ತಿನಲ್ಲಿ 'ಅನನ್ಯ ತುಷಿರಾ'. ಜೀವ-ಭಾವದ ಸಂಗಾತಿ ಕಿರಣ್ ಬಿರಾದಾರ್. ಹಾಗಾಗಿ ಇವರು 'saki’ ಕೂಡ. ಮಡಿಲ ಬೆಳಕು ಅಶ್ಮಯು ನಿನಾದ. ಬಹುತೇಕ ಓದು ತಾಳಿಕೋಟೆಯಲ್ಲಿ. ನಂತರ ಧಾರವಾಡದಲ್ಲಿ. ಸದ್ಯ ಬೆಂಗಳೂರು ವಾಸಿ. ಮೊದಲ ವೃತ್ತಿ ಶಿಕ್ಷಣ ಕ್ಷೇತ್ರದಲ್ಲಿ. ಪ್ರಸ್ತುತ ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿ ಸಹಾಯಕ ಆಯುಕ್ತರ ಹುದ್ದೆಯಲ್ಲಿ ಕಾರ್ಯ ನಿರ್ವಹಣೆ. ಅಕ್ಷರ ಪ್ರೀತಿ ಅಪಾರ. ಆಗೀಗ ಅನುಭೂತಿಗೆ ...
READ MORE