ಪಳಮೆಗಳು

Author : ಸೇಡಿಯಾಪು ಕೃಷ್ಣಭಟ್ಟ

Pages 136

₹ 60.00




Year of Publication: 2013
Published by: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ
Address: ಉಡುಪಿ 576102

Synopsys

ಹಿರಿಯ ಸಾಹಿತಿ ಸೇಡಿಯಾಪು ಕೃಷ್ಣ ಭಟ್ಟರ ’ ಪಳಮೆಗಳು’ ಕತಾನಕಗಳನ್ನು ಒಳಗೊಂಡ ಕೃತಿಯಾಗಿದೆ. 1947 ರಲ್ಲಿ ಪ್ರಥಮವಾಗಿ ಮುದ್ರಿತವಾದ ಈ ಕೃತಿ 2013 ರಲ್ಲಿ 12 ನೇ ಬಾರಿಗೆ ಮುದ್ರಿತವಾಗಿದೆ. ಪಳಮೆಗಳು ಕೃತಿಯ ಮೊದಲ ಕತೆಯೊಂದರಲ್ಲಿ ಹೊರತು ಉಳಿದ ಮೂರರಲ್ಲೂ ಕತೆಗೊಂದು ಚೌಕಟ್ಟನ್ನು ಒದಗಿಸಿದ್ದು, ಚೌಕಟ್ಟೆ ಕತೆಯ ಅವಿಭಾಜ್ಯ ಅಂಗವಾಗಿದೆ. ಮಹಾಭಾರತದಲ್ಲಿ ’ಕೇಳು ಜನಮೇಜಯ’ ಎಂದಷ್ಟೇ ಆರಂಭದ ಚೌಕಟ್ಟು ಇಲ್ಲಿನ ಕತೆಗಳಾದ ಇದ್ದರೆ ಚೆನ್ನೆಮಣೆ, ನಾಗರ ಬೆತ್ತ, ಧರ್ಮಮ್ಮ ಕತಾನಕಗಳಲ್ಲಿ ಮುಖ್ಯ ಕತೆಯ ವೈಶಿಷ್ಟ್ಯ, ಅದರ ನೀತಿ, ವಿಶ್ಲೇಷಣಗಳು ಆನುಷಂಗಿಕವಾಗಿ ಯಾವ ಪ್ರಯತ್ನವೂ ಇಲ್ಲದಂತೆ ಭಾಸವಾಗುವ ರೀತಿಯಲ್ಲಿ ಹೊಂದಿಕೊಂಡಿವೆ. ಚಿನ್ನದ ಚೇಳು, ಶಕುಂತಲೆ ಮತ್ತು ಮಹಾರಾಣಿ ಲಕ್ಷ್ಮೀಬಾಯಿ ಕತೆಗಳಲ್ಲಿ ನಿರೂಪಣೆ ನೇರ ರೀತಿಯಲ್ಲಿದ್ದು, ಅವುಗಳನ್ನು ಎರಡು ಕಥನಗಳೆಂದು ಬೇರೆಯಾಗಿ ಇಲ್ಲಿ ಗುರುತಿಸಲಾಗಿದೆ. ಈ ಕತನಗಳಲ್ಲಿ ಕತೆಗಾರನು ನೇರವಾಗಿ ಓದುಗನ ಮುಂದೆ , ನಡೆದ ಘಟನೆಗಳನ್ನು ನಿರೂಪಿಸುತ್ತಾ ಸಾಗುತ್ತಾನೆ.

About the Author

ಸೇಡಿಯಾಪು ಕೃಷ್ಣಭಟ್ಟ
(08 June 1902 - 09 June 1996)

ಸೇಡಿಯಾಪು ಕೃಷ್ಣಭಟ್ಟರು ಜನಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಸೇಡಿಯಾಪು.ತಂದೆ ರಾಮಭಟ್ಟ, ತಾಯಿ ಮೂಕಾಂಬಿಕೆ. ಸ್ವಾತಂತ್ರ್ಯ ಹೋರಾಟಗಾರರು, ಕವಿತೆ, ಕಥೆ ಸಂಶೋಧನೆ ಕುರಿತು ಕೃತಿಗಳನ್ನು ಬರೆದಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಚಂದ್ರಖಂಡ ಮತ್ತು ಕೆಂಪು ಸಣ್ಣ ಕಾವ್ಯಗಳು, ವಿಚಾರ ಪ್ರಪಂಚ, ಪಳಮೆಗಳು, ಕನ್ನಡ ವರ್ಣಗಳು, ಕೆಲವು ದೇಶನಾಮಗಳ ಛಂದೋಗತಿ, ಡಿಸ್ಕವರಿ ಆಫ್ ಫ್ಯಾಕ್ಟ್ಸ್‌ (ಇಂಗ್ಲೀಷ್) ಮುಂತಾದವು. ಇವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಪಂಪ ಪ್ರಶಸ್ತಿ ಲಭಿಸಿದೆ ಚಿದಾನಂದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ...

READ MORE

Related Books