ವೈ.ಎನ್. ಗುಂಡೂರಾವ್ ಅವರ ಬರೆದ ಮಹಾಭಾರತದ ಉಪಕಥೆಗಳ ಸಂಕಲನ ‘ಮಹಾಭಾರತದ ಉಪಕಥೆಗಳು’.ಈ ಕೃತಿಯಲ್ಲಿ ಲೇಖಕ ಪ್ರಕಾಶ್ ಕಂಬತ್ತಲ್ಳಿ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರುಉ ಹೇಳುವಂತೆ, "ಇಡೀ ಮಹಾಭಾರತವೇ ಒಂದು ನೀತಿಕಥೆ. ಇಲ್ಲಿಯ ಉಪಕಥೆಗಳೂ ಅದಕ್ಕೆ ಹೊರತಲ್ಲ. ರಂಜನೆ, ನೀತಿ, ಹಾಸ್ಯ, ಶೃಂಗಾರ ಮುಂತಾದವುಗಳನ್ನೊಳಗೊಂಡ ಈ ಕಥೆಗಳು ಮೂಲ ಕಥೆಯಂತೆಯೇ ರಂಜಿಸುತ್ತವೆ. ಈ ಕಥೆಗಳ ಸ್ವಾರಸ್ಯವನ್ನು ಓದಿಯೇ ತಿಳಿಯಬೇಕು” ಎಂದಿದ್ದಾರೆ.
ಹಾಸ್ಯಪ್ರಬಂಧ ಲೇಖಕ, ಮಾಹಿತಿ ಸಂಗ್ರಾಹಕ, ಸಂಪಾದಕರಾದ ಗುಂಡೂರಾವ್ ಅವರು 1945 ಜೂನ್ 6ರಂದು ಈಗಿನ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಯರಗಂಬಳ್ಳಿಯಲ್ಲಿ ಹುಟ್ಟಿದರು. ನಿವೃತ್ತಿಯ ನಂತರ ಪೂರ್ಣ ಪ್ರಮಾಣದ ಸಾಹಿತ್ಯಾಭ್ಯಾಸ, ಬರೆಹದಲ್ಲಿ ತೊಡಗಿಕೊಂಡಿದ್ದಾರೆ. ಸದಭಿರುಚಿಯ ಹಾಸ್ಯ ಪ್ರಸಾರಕ್ಕಾಗಿ ಸ್ಥಾಪಿಸಿರುವ ‘ಹಾಸ್ಯಬ್ರಹ್ಮ ಟ್ರಸ್ಟ್’ನ ಸ್ಥಾಪಕ ಸದಸ್ಯರು. ಸಂಜೆ ಕಾಲೇಜಿಗೆ ಸೇರಿದಾಗ ದೊರೆತ ಸಾಹಿತಿ ಮಿತ್ರರ ಓಡನಾಟದಿಂದ ಸಾಹಿತ್ಯದ ಓದು, ಬರೆಹವನ್ನು ಅತಿ ಗಂಭೀರವಾಗಿ ತೆಗೆದುಕೊಂಡು ಪತ್ರಿಕೆಗಳಿಗೆ ಬರೆದ ಲೇಖನಗಳು. ಮೊದಲ ಲೇಖನ ಕಸ್ತೂರಿ ಮಾಸಪತ್ರಿಕೆ, ಮೊದಲ ಕತೆ ಇಂಚರ ಮಾಸ ಪತ್ರಿಕೆ ಹಾಗೂ ಮೊದಲ ಹಾಸ್ಯಲೇಖನ ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ...
READ MORE