‘ಕೋಳಿ ಅಂಕ’ ಜಾನಪದ ತಜ್ಞ, ಲೇಖಕ ಕುರುವ ಬಸವರಾಜ್ ಅವರ ಸಣ್ಣಕಥಾಸಂಕಲನ. ಈ ಕೃತಿಗೆ ಚಿಂತಕ, ಲೇಖಕ ನಟರಾಜ್ ಹುಳಿಯಾರ್ ಮುನ್ನುಡಿಯಿದ್ದು, ಕುಂ.ವೀರಭದ್ರಪ್ಪ, ರಹಮತ್ ತರೀಕೆರೆ, ಚಂದ್ರಶೇಖರ ನಂಗಲಿ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ಜಾನಪದ ಅಧ್ಯಯನ ಹಾಗೂ ಜಾನಪದ ಒಡನಾಟಗಳು ಪಾತ್ರ ಸೃಷ್ಟಿಯಲ್ಲಿ, ಕಥಾ ಪ್ರಸಂಗಗಳ ಆಯ್ಕೆಯಲ್ಲಿ, ಮಾನವ ವರ್ತನೆಗಳ ಶೋಧನೆಯಲ್ಲಿ, ಪಾತ್ರಗಳು ಆಡುವ ಮಾತುಗಳಿಗೂ ಕಥಾ ನಿರೂಪಣೆಗೂ ಆಡುನುಡಿಯನ್ನು ಬಳಸುವಲ್ಲಿ ಒದಗಿಬಂದಿದೆ ಎನ್ನುತ್ತಾರೆ ನಟರಾಜ್ ಹುಳಿಯಾರ್, ಜೊತೆಗೆ ಜಾನಪದವನ್ನು ತಮ್ಮ ಸೃಜನಶೀಲ ಸೃಷ್ಟಿಗೆ ಬಳಸಿಕೊಳ್ಳುವುದು, ಜನಪದವಾಗಲೆತ್ನಿಸುವುದು ಇವೆರಡು ಬೆಳವಣಿಗೆಗಳು ಕತೆಗಳಲ್ಲಿ ಕಾಣುತ್ತೇವೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಈ ಕೃತಿಗೆ 2021ನೇ ಸಾಲಿನ ಮಾಸ್ತಿ ಕಥಾ ಪುರಸ್ಕಾರ ಲಭಿಸಿದೆ.
ಲೇಖಕ, ಜಾನಪದ ತಜ್ಞ ಕುರುವ ಬಸವರಾಜ್ ಅವರು ಮೂಲತಃ ಹಳೆಯ ಶಿವಮೊಗ್ಗ, ಈಗಿನ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಕುರುವ ಗ್ರಾಮದವರು. ಜಾನಪದ ಲೋಕದಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಕರ್ನಾಟಕ ವಿ.ವಿ.ಯಿಂದ ಎಂ.ಎ(ಕನ್ನಡ) ಪದವಿ ಮತ್ತು ಬೆಂಗಳೂರು ವಿ.ವಿ.ಯಲ್ಲಿ ‘ಜನಪದ ಮಹಾಕಾವ್ಯಗಳ ನಿರ್ಮಾಣ ಪ್ರತಿಭೆಯ ನೆಲೆಗಳು’ ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ಜಾನಪದ ಅಕಾಡೆಮಿ ಫೆಲೋಷಿಪ್ ಗಾಗಿ ಕರ್ನಾಟಕ ಜನಪದ ಸಂಗೀತ ಅಧ್ಯಯನ ಮಾಡಿದ್ದಾರೆ. ಪ್ರಕಟಿತ ಕೃತಿಗಳು: ಹುಲ್ಲೆಹಾಡು, ಕಾಡೊಡಲ ಹಾಡು, ಬೇಲಿ ಮ್ಯಾಗಳ ಹೂವು, ಮಣ್ಣ ಕುಸುಮದ ಹಕ್ಕಿ (ಕಾವ್ಯಸಂಗ್ರಹಗಳು) ಸೆಳೆತ, ...
READ MORE