"ಕಥೆಯಾದ ಬದುಕು" ಡಾ. ಎಂ.ಜಿ. ದೇಶಪಾಂಡೆ ಅವರ ಕಥಾ ಸಂಕಲನ. ಮೂವತ್ತೆರಡು ಕಥೆಗಳು ಒಳಗೊಂಡಿವೆ. ವಯಾನಿ ,ಹೆಜ್ಜೆಗಳು ,ಗಜ್ಜರಿ, ಹೆಣ , ಫಲಿತಾಂಶ, ಮೂಕವೇದನೆಗಳು, ಅಂತಃಕರಣ, ಮಾಯೆ ಕಳೆದುಕೊಂಡ ಛಾಯೆ, ತುಮುಲಗಳು, ಮೌಲಾನ್ ಕಾಕಾ, ವಿಧಿಲೀಲೆ, ವಸಂತ ಬಂದಾಗ, ವೈಶಾಲಿ, ಗೌತಮಿ ಸೇರಿದಂತೆ ಸಾಮಾಜಿಕ ಕೌಟುಂಬಿಕ ಕಥೆಗಳಿವು. ಕೆಲವೊಂದು ಕಥೆಗಳಲ್ಲಿ ದೇಸಿ ಭಾಷೆ ಅಡಕವಾಗಿದೆ . ಹಿಂದೂ ಮುಸ್ಲಿಂ ಸಾಮರಸ್ಯವನ್ನು ಬಿತ್ತರಿಸುತ್ತವೆ .ಬದುಕಿನಲ್ಲಿ ನಡೆಯುವ ಕಷ್ಟಸುಖಗಳ ಸಂದರ್ಭಗಳನ್ನು ಇಲ್ಲಿ ಅತ್ಯಂತ ವಿವರವಾಗಿ ಚಿತ್ರಿಸಲಾಗಿದೆ . ಕತೆಗಳು ಕಾಲ್ಪನಿಕವಾದರೂ ವಾಸ್ತವಿಕ ಚಿತ್ರಣಕ್ಕೆ ದರ್ಪಣ ಹಿಡಿಯುತ್ತವೆ.
ಲೇಖಕ ಎಂ. ಜಿ. ದೇಶಪಾಂಡೆ (ಮಾಣಿಕರಾವ್ ಗೋವಿಂದರಾವ್ ದೇಶಪಾಂಡೆ) ಮೂಲತಃ ಬೀದರನವರು. ಎಂ..ಫಿಲ್ ಹಾಗೂ ಪಿಎಚ್ ಡಿ ಪದವೀಧರರು. ಇವರ ಕಾವ್ಯನಾಮ ಲಕ್ಷ್ಮೀಸುತ. ಮಾಣಿಕ್ಯ ವಿಠಲ ಎಂಬುದು ಇವರ ವಚನಾಂಕಿತ. ತಂದೆ ಗೋವಿಂದರಾವ್ ದೇಶಪಾಂಡೆ, ತಾಯಿ ಲಕ್ಷ್ಮೀಬಾಯಿ ದೇಶಪಾಂಡೆ, ಸಹಕಾರ ಕೇಂದ್ರ ಬ್ಯಾಂಕಿನ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ. ಕನ್ನಡಾಂಬೆ ಮತ್ತು ಖ್ಯಾತಿ (1977) ಕನ್ನಡ ವಾರ ಪತ್ರಿಕೆಯ ಸಂಪಾದಕ ರಾಗಿದ್ದರು. ದೇಶಪಾಂಡೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು, ಶಾಂತಿ, ಕನ್ನಡ ಗೆಳೆಯರ ಬಳಗ, ಬೀದರ ಜಿಲ್ಲಾ ಲೇಖಕರ ಬಳಗ, ಜ್ಞಾನ ತರಂಗ ವಿಚಾರ ವೇದಿಕೆ ಮುತ್ತಂಗಿ, ಮಂದಾರ ಕಲಾವಿದರ ವೇದಿಕೆ ಹೀಗೆ ಹಲವಾರು ಸಂಘಸಂಸ್ಥೆಗಳ ರೂವಾರಿಯಾಗಿದ್ದಾರೆ. ಕೊರೊನಾ ವೈರಸ್ ಪರಿಣಾಮ ಲಾಕ್ ...
READ MORE