ಹುಲಿಯೂರಿನ ಸರಹದ್ದು (1962) ತೇಜಸ್ವಿಯವರ ಮೊದಲ ಕಥಾ ಸಂಕಲನ. 'ಲಿಂಗಬಂದ', 'ಪಂಜೊಳ್ಳಿ ಪಿಶಾಚಿಯ ಸವಾಲು', 'ಗುಡುಗು ಹೇಳಿದ್ದೇನು?’, ’ಉರ್ವಶಿ', 'ಹುಲಿಯೂರಿನ ಸರಹದ್ದು', 'ಗಾಂಧೀಜಿ ದೆಸೆಯಿಂದ’ ಎಂಬ ಆರು ಕಥೆಗಳು ಇಲ್ಲಿವೆ. ಇವು 'ವ್ಯಕ್ತಿ ವಿಶಿಷ್ಟ ಸಿದ್ದಾಂತ'ಕ್ಕೂ ಮೊದಲು ಬರೆದವುಗಳಾಗಿವೆ. 1966ರಲ್ಲಿ ಸ್ವರೂಪ ಪ್ರಕಟವಾದ ಮೊದಲ ಕಿರುಕಾದಂಬರಿ ಹಾಗೂ 1973ರಲ್ಲಿ ಪ್ರಕಟವಾಗಿದ್ದ ’ನಿಗೂಢ ಮನುಷ್ಯರು’ ಕಿರು ಕಾದಂಬರಿಗಳನ್ನು ಈ ಸಂಕಲನದಲ್ಲಿ ಸೇರಿಸಲಾಗಿದೆ. ’ಸ್ವರೂಪ’ ಕಾದಂಬರಿಯು ನವ್ಯ ಸಾಹಿತ್ಯದ ಬೌದ್ಧಿಕತೆಯ ದಟ್ಟ ಪ್ರಭಾವಕ್ಕೆ ಒಳಗಾಗಿದೆ. ಹೇಮಂತ ಮತ್ತು ಶ್ರೀನಿವಾಸರ ಆತ್ಮ ನಿವೇದನೆಯಾಗಿ ಬೆಳೆಯುವ ಈ ಕಾದಂಬರಿ ಭೂತದ ಘಟನಾವಳಿಗಳ ನಿರೂಪಣೆಯ ಮೂಲಕ ವ್ಯಕ್ತಿತ್ವದ ಸ್ವರೂಪಗಳನ್ನು ಅನಾವರಣಗೊಳಿಸುತ್ತದೆ. ವ್ಯಕ್ತಿಯ ದುರಂತಕ್ಕೆ ಸಮಾಜವೇ ಕಾರಣ, ಎಲ್ಲರ ಗಮನಕ್ಕೆ ಎಲ್ಲರೂ ಹೊಣೆಗಾರರು ಎಂಬ ಆತ್ಯಂತಿಕ ಸತ್ಯವನ್ನು ಇದು ಹೊರಡಿಸುತ್ತದೆ. ’ನಿಗೂಢ ಮನುಷ್ಯರು’ ಕಿರುಕಾದಂಬರಿಯನ್ನು ನೀಳ್ಗತೆ ಎಂದು ಕರೆಯಬಹುದು. ಪ್ರಕೃತಿ ಮತ್ತು ಮನುಷ್ಯ ಮನುಷ್ಯ ಮತ್ತು ಮನುಷ್ಯ ಸಂಬಂಧಗಳ ನಿಗೂಢತೆಯನ್ನು ಹೇಳುತ್ತದಾದರೂ ಇದರುದ್ದಕ್ಕೂ ಬಿಚ್ಚಿಕೊಳ್ಳುತ್ತ ಹೋಗುವ ರಹಸ್ಯಗಳು ಸಷ್ಟಗೊಳ್ಳದೆ ಮತ್ತಷ್ಟು ಸಂಕೀರ್ಣವಾಗುವುದನ್ನು ಕಾಣುತ್ತೇವೆ. ನಿಗೂಢತೆಯು ಕೊನೆಗೂ ನಿಗೂಢವಾಗಿಯೇ ಉಳಿಯುತ್ತದೆ. ಇಂಗ್ಲಿಷಿಗೆ ಅನುವಾದಗೊಂಡು ಪ್ರತಿಷ್ಠಿತ ಪೆಂಗ್ವಿನ್ ಪ್ರಕಾಶನದಿಂದ ಪ್ರಕಟವಾಗಿದೆ.
ಕನ್ನಡದ ಹೆಸರಾಂತ ಲೇಖಕ ಕುವೆಂಪು ಅವರ ಪುತ್ರರಾಗಿರುವ ಪೂರ್ಣಚಂದ್ರ ತೇಜಸ್ವಿ ಅವರು 08-09-1938ರದು ಜನಿಸಿದರು. ತಮ್ಮ ಬರವಣಿಗೆಯ ಮೂಲಕವೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ’ಚಿದಂಬರ ರಹಸ್ಯ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ತೇಜಸ್ವಿ ಅವರು ಕನ್ನಡದಲ್ಲಿ ನವ್ಯ ಸಾಹಿತ್ಯ ಚಳುವಳಿಯು ಉಚ್ಛ್ರಾಯ ಸ್ಥಿತಿಯಲ್ಲಿದ್ದ ದಿನಗಳಲ್ಲಿ ಅದಕ್ಕಿಂತ ಭಿನ್ನವಾದ ನೆಲೆಯ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ನವ್ಯ ಲೇಖಕರು ನಗರ ಕೇಂದ್ರಿತ, ವ್ಯಕ್ತಿನಿಷ್ಟ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಬದುಕು ಕುರಿತ ಮತ್ತು ಅದು ಹಳಹಳಿಕೆಯ ಧ್ವನಿಯಲ್ಲಿ ಇರದ ಹಾಗೆ ನೋಡಿಕೊಂಡರು. ಲೋಹಿಯಾ ಚಿಂತನೆಗಳಿಂದ ಪ್ರೇರಿತರಾಗಿದ್ದ ...
READ MORE