‘ಗಾಯ’ ಮಾಧವಿ ಭಂಡಾರಿ ಅವರ ರಚನೆಯ ಕಥಾಸಂಕಲನವಾಗಿದೆ. 'ರಾಜಮಾತೆಯ ಸ್ವರ್ಗಾರೋಹಣ ಪರ್ವ' ಎಂಬ ಕತೆಗೆ ಹಿಂದಿ ಕತೆಯೊಂದು ಪ್ರೇರಣೆ ಒದಗಿಸಿದೆ. ಮನುಷ್ಯ ಸಂಬಂಧಗಳ ನಾನಾಮುಖಗಳನ್ನು ಚಿತ್ರಿಸುವ ಇಲ್ಲಿನ ಕತೆಗಳ ಸ್ವರೂಪ ವ್ಯಾಸರಾಯ ಬಲ್ಲಾಳರ ಕತೆಗಳನ್ನು ನೆನಪಿಗೆ ತರಿಸುತ್ತದೆ. ಗರುಡರೇಖೆ ರಹಸ್ಯದಂತಹ ಕತೆಗಳು ಸಣ್ಣ ಕತೆಗಳ ಶಿಲ್ಪದ ವ್ಯಾಪ್ತಿಗೆ ಬರುವುದಿಲ್ಲ, ಕೆಲವು ಕತೆಗಳ ವಿಡಂಬನೆ ಉತ್ತಮ ಮಟ್ಟದಲ್ಲಿದೆ.
ಮಾಧವಿ ಭಂಡಾರಿ ಅವರು ರಂಗಭೂಮಿ ಕಲಾವಿದರು, ಸಾಹಿತಿಗಳು, ಕವಯತ್ರಿ. ಹಲವಾರು ರಂಗಳಲ್ಲಿ ತೊಡಗಿಕೊಂಡಿರುವ ಅವರು 'ಸ್ನಾನ' ನಾಟಕದಲ್ಲಿ ಸರಸ್ವತಿ ಪಾತ್ರ, 'ಸಂಧ್ಯಾ-ಛಾಯಾ' ನಾಟಕದಲ್ಲಿ ನಾನಿ ಪಾತ್ರ, 'ನಾಗಮಂಡಲ' ನಾಟಕದಲ್ಲಿ ಕುರುಡವ್ವನ ಪಾತ್ರಗಳನ್ನು ಮಾಡಿದ್ದಾರೆ. 1955 ಮೇ 01 ಜಿಲ್ಲೆಯ ಧಾರೇಶ್ವರದಲ್ಲಿ ಜನಿಸಿದರು. ಇದರೊಂದಿಗೆ ಗುಡ್ಡದ ಭೂತ, ಓ ನನ್ನ ಬೆಳಕೆ ಮತ್ತು ಅಬೋಲಿನಾ ಧಾರವಾಹಿಗಳಲ್ಲಿ ನಟಿಸಿದ್ದಾರೆ. ’ಉತ್ಸವದಿಂದ ಉತ್ಸವಕ್ಕೆ ಕಟ್ಟುವುದು ಬಲುಕಷ್ಟ, ಕನ್ನಡಿಯೊಳಗಿನ ಪ್ರತಿಬಿಂಬ’ ಅವರ ಕವನ ಸಂಕಲನಗಳು. ಗಾಯ ಅವರ ಮತ್ತೊಂದು ಕಥಾಸಂಕಲನ. ಅಂತ್ಯಜ (ವೈದೇಹಿಯವರ ಅಸ್ಪಶ್ಯರು ಕಾದಂಬರಿ ಹಿಂದಿಗೆ), ಚಂದ್ರಕಾಂತಾ (ಹಿಂದಿ ಕಾದಂಬರಿ ಅನುವಾದ), ವಿಚಿತ್ರ ...
READ MOREಹೊಸತು- ಡಿಸೆಂಬರ್ -2005
ಹಿಂದೀ ಭಾಷೆಯ ಪ್ರಾಧ್ಯಾಪಕರಾಗಿರುವ ಈ ಲೇಖಕಿ ಬರೆದ ಹತ್ತು ಕತೆಗಳು ಇಲ್ಲಿ ಸಂಕಲಿತವಾಗಿವೆ. ಇಲ್ಲಿನ ಕತೆಗಳು ಹಲವು ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 'ರಾಜಮಾತೆಯ ಸ್ವರ್ಗಾರೋಹಣ ಪರ್ವ' ಎಂಬ ಕತೆಗೆ ಹಿಂದಿ ಕತೆಯೊಂದು ಪ್ರೇರಣೆ ಒದಗಿಸಿದೆ. ಮನುಷ್ಯ ಸಂಬಂಧಗಳ ನಾನಾಮುಖಗಳನ್ನು ಚಿತ್ರಿಸುವ ಇಲ್ಲಿನ ಕತೆಗಳ ಸ್ವರೂಪ ವ್ಯಾಸರಾಯ ಬಲ್ಲಾಳರ ಕತೆಗಳನ್ನು ನೆನಪಿಗೆ ತರಿಸುತ್ತದೆ. ಗರುಡರೇಖೆ ರಹಸ್ಯದಂತಹ ಕತೆಗಳು ಸಣ್ಣ ಕತೆಗಳ ಶಿಲ್ಪದ ವ್ಯಾಪ್ತಿಗೆ ಬರುವುದಿಲ್ಲ, ಕೆಲವು ಕತೆಗಳ ವಿಡಂಬನೆ ಉತ್ತಮ ಮಟ್ಟದಲ್ಲಿದೆ. ಬಹುಪಾಲು ಕತೆಗಳು ಸಿದ್ಧ ಮಾದರಿಗಳನ್ನು ಆಶ್ರಯಿಸಿವೆ. ಎಸ್. ಹಯವದನ ಉಪಾಧ್ಯ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ. ಎಲ್ಲ ಕತೆಗಳು 'ಪ್ರಗತಿಪರ'ವಾಗಿ 'ಸಮಾಜಮುಖಿ' ಯಾಗಿರಬೇಕೆಂಬ ಅವರ ಒರಟು ಆಶಯವನ್ನು ಮಾರ್ಗದರ್ಶಿಯಾಗಿ ತೆಗೆದುಕೊಳ್ಳುವುದು ಅಪಾಯಕಾರಿ.