ಮಾಧವಿ ಭಂಡಾರಿ ಅವರು ರಂಗಭೂಮಿ ಕಲಾವಿದರು, ಸಾಹಿತಿಗಳು, ಕವಯತ್ರಿ. ಹಲವಾರು ರಂಗಳಲ್ಲಿ ತೊಡಗಿಕೊಂಡಿರುವ ಅವರು 'ಸ್ನಾನ' ನಾಟಕದಲ್ಲಿ ಸರಸ್ವತಿ ಪಾತ್ರ, 'ಸಂಧ್ಯಾ-ಛಾಯಾ' ನಾಟಕದಲ್ಲಿ ನಾನಿ ಪಾತ್ರ, 'ನಾಗಮಂಡಲ' ನಾಟಕದಲ್ಲಿ ಕುರುಡವ್ವನ ಪಾತ್ರಗಳನ್ನು ಮಾಡಿದ್ದಾರೆ. 1955 ಮೇ 01 ಜಿಲ್ಲೆಯ ಧಾರೇಶ್ವರದಲ್ಲಿ ಜನಿಸಿದರು. ಇದರೊಂದಿಗೆ ಗುಡ್ಡದ ಭೂತ, ಓ ನನ್ನ ಬೆಳಕೆ ಮತ್ತು ಅಬೋಲಿನಾ ಧಾರವಾಹಿಗಳಲ್ಲಿ ನಟಿಸಿದ್ದಾರೆ. ’ಉತ್ಸವದಿಂದ ಉತ್ಸವಕ್ಕೆ ಕಟ್ಟುವುದು ಬಲುಕಷ್ಟ, ಕನ್ನಡಿಯೊಳಗಿನ ಪ್ರತಿಬಿಂಬ’ ಅವರ ಕವನ ಸಂಕಲನಗಳು. ಗಾಯ ಅವರ ಮತ್ತೊಂದು ಕಥಾಸಂಕಲನ. ಅಂತ್ಯಜ (ವೈದೇಹಿಯವರ ಅಸ್ಪಶ್ಯರು ಕಾದಂಬರಿ ಹಿಂದಿಗೆ), ಚಂದ್ರಕಾಂತಾ (ಹಿಂದಿ ಕಾದಂಬರಿ ಅನುವಾದ), ವಿಚಿತ್ರ ದಾಂಪತ್ಯ ಮತ್ತು ವಿಚಿತ್ರ ಕಾಯಿಲೆಗಳು (ಹಿಂದಿಗೆ ಅನುವಾದ), ಕಡತದೊಳಗಿನ ಕಥೆಗಳು (ಅನುವಾದಿತ ಹಿಂದಿ ಕಥೆಗಳು) ಅನುವಾದ ಮಾಡಿದ್ದಾರೆ. ಮಧ್ಯಯುಗೀನ ಹಿಂದಿ ಕವಿತಾ, ಮಹಿಳೆ ಮತ್ತು ಕೋಮುವಾದ (ವೈಚಾರಿಕ ಕೃತಿ). 'ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ'ಗೆ ಭಾಜನರಾಗಿದ್ಧಾರೆ.