‘ಎಲ್ಲ ಮರೆತಿರುವಾಗ’ ಬಿ.ಎನ್.ಗೋವಿಂದ ರಾವ್ ಅವರ ಕೃತಿಯಾಗಿದೆ. ಚಿಕ್ಕಂದಿನಿಂದಲೂ ಕಥೆ ಕಾದಂಬರಿಗಳನ್ನು ಓದುವ ಹಂಬಲ, ಹವ್ಯಾಸಗಳನ್ನು ನನಗೆ ಹುಟ್ಟಿಹಾಕಿದ್ದುದು ನಮ್ಮ ಮನೆಯಲ್ಲಿದ್ದ “ಸುಮಿತ್ರಾ. ಪುಸ್ತಕ ಭಂಡಾರ"ದ ಕಾದಂಬರಿಗಳು ನನಗೆ ಬಹುಕಾಲ ಇಚ್ಛಿತರಾಗಿರುವ ಕಾದಂಬರಿಕಾರರು ಎಂದರೆ ಅ.ನ.ಕೃ, ಶಿವರಾಮ ಕಾರಂತ, ತ.ರಾ.ಸು, ಬಸವರಾಜ ಕಟ್ಟಿಮನಿ, ತ್ರಿವೇಣಿ, ಎಸ್.ಎಲ್. ಭೈರಪ್ಪ ಅವರು. ಅವರ ಕಾದಂಬರಿಗಳನ್ನು ಓದುತ್ತಾ ನಾನು ಒಂದು ಕಾಲಕ್ಕೆ ಇಂತಹ ಕಾದಂಬರಿಕಾರ ಆಗದಿದ್ದರೂ ಕಥೆಗಳನ್ನು ಬರೆಯಬೇಕೆಂಬ ಹಂಬಲ ಮಾತ್ರ ಬೆಳೆಯುತ್ತಲೇ ಇದಕ್ಕೆ ಪೂರಕವಾಗಿ ನನ್ನ ಉದ್ಯೋಗವೂ ಸಹ ಸಹಕಾರಿಯಾಯಿತು. ವಿದ್ಯಾರ್ಥಿಗಳನ್ನು ಮೊದಲು ನನ್ನ ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ಆದರ್ಶದ ಕಥೆಗಳನ್ನು ಹೇಳುವುದರ ಮೂಲಕ ನನ್ನ ಕಡೆ ಸೆಳೆದುಕೊಳ್ಳಬೇಕೆಂದು ನಂಬಿದವನು ನಾನು. ಅದು ಹಳ್ಳಿಯಾಗಿರಬಹುದು ಪಟ್ಟಣವಾಗಿರಬಹುದು ಮಕ್ಕಳು ಮಕ್ಕಳೇ, ಅವರಿಗೆ ಪಾಠದ ಜೊತೆಗೆ ನೀತಿಕಥೆಗಳನ್ನು ಹೇಳುತ್ತಾ ಉತ್ತಮ ಪ್ರಜೆಗಳನ್ನಾಗಿ ಬೆಳೆಸುವುದು ನನ್ನ ಉದ್ದೇಶ ಆಗಿತ್ತು ಎಂದು ಮುನ್ನುಡಿಯಲ್ಲಿ ಲೇಖಕರು ತಿಳಿಸಿದ್ದಾರೆ.
ಬಿ.ಎನ್. ಗೋವಿಂದರಾವ್ ಅವರು ಮೂಲತಃ ಭದ್ರಾವತಿ ತಾಲೂಕಿನವರು. ಪ್ರಸ್ತುತ ಹೊಸದುರ್ಗದಲ್ಲಿದ್ದಾರೆ. ಕನ್ನಡದಲ್ಲಿ ಎಂ.ಎ ಮಾಡಿದ್ದಾರೆ. 10 ವರ್ಷಗಳ ಕಾಲ ಪ್ರೌಢಶಾಲೆಯ ಹಿರಿಯ ಉಪಾದ್ಯಾಯರಾಗಿ, 27 ವರ್ಷಗಳ ಕಾಲ ಚಿತ್ರದುರ್ಗ ಜಿಲ್ಲೆಯಲ್ಲಿ ಕಾಲೇಜು ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. "ಎಲ್ಲ ಮರೆತಿರುವಾಗ" ಸಣ್ಣ ಕತೆಗಳ ಸಂಗ್ರಹ ಮೊದಲ ಕೃತಿ. ಮತ್ತೊಂದು ಕೃತಿ ಚಿಂತನ ದೀಪ್ತಿ. ...
READ MORE