‘ಬಾಳೆಗಿಡ ಗೊನೆ ಹಾಕಿತು’ ಬಿ. ಎಂ. ಬಶೀರ್ ಅವರ ಕಥಾಸಂಕಲನವಾಗಿದೆ. ಕೌಟುಂಬಿಕ ಹಿನ್ನೆಲೆಯಿರುವ ಸಾಮಾಜಿಕ ನಿಷ್ಠುರ ಸತ್ಯಗಳನ್ನು ಬಿಡಿಸಿಡುವ ಏಳು ಸಣ್ಣ ಕಥೆಗಳು ಈ ಸಂಕಲನದಲ್ಲಿವೆ. ಶೈಲಿ ಅತಿರಂಜಿತವೂ ನೀರಸವೂ ಅಲ್ಲದಂಥ ಹದವಾದ ಬರವಣಿಗೆ, ಮನೆ ಮನೆಗಳಲ್ಲಿ ತನ್ನ ಒತ್ತಿ ಬದುಕನ್ನು ಅಸಹನೀಯಗೊಳಿಸುವ ಬಡತನವನ್ನು ಮೀರಿ ಮಾನವೀಯತೆಯೊಂದು ಎದ್ದುನಿಂತು ಎಲ್ಲವನ್ನೂ ಸಂಭಾಳಿಸಿಕೊಂಡು ಹೋಗುತ್ತದೆ. ಕಥೆಗಳಲ್ಲಿನ ಪಾತ್ರಗಳೆಲ್ಲ ಒಂದು ಪರಿಧಿಯನ್ನು ಸುತ್ತುತ್ತಾ ಹೊರಬರಲು ದಾರಿ ಕಾಣದೆ ಚಡಪಡಿಸುತ್ತವೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿ ಸಮೀಪದ ಮಠ ಎಂಬ ಊರಿನಲ್ಲಿ ಜನಿಸಿದ ಬಶೀರ್ ಅವರು ಉಪ್ಪಿನಂಗಡಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಪದವಿ, ಮುಂಬೈ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ.) ಪಡೆದವರು. ಮಂಬಯಿ ಕರ್ನಾಟಕ ಮಲ್ಲ’ ಕನ್ನಡ ದೈನಿಕದಲ್ಲಿ ಐದು ವರ್ಷ ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡಿದ ಅವರು ನಂತರ ಜನವಾಹಿನಿ’ ಕನ್ನಡ ದಿನಪತ್ರಿಕೆಯಲ್ಲಿ ಐದು ವರ್ಷ ಹಿರಿಯ ಉಪಸಂಪಾದಕನಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಳೆದ ಒಂದು ದಶಕಕಕ್ಕೂ ಹೆಚ್ಚು ಕಾಲದಿಂದ ವಾರ್ತಾಭಾರತಿ’ ದಿನಪತ್ರಿಕೆಯಲ್ಲಿ ಸುದ್ದಿ ಸಂಪಾದಕರಾಗಿದ್ದಾರೆ. ಗೌರಿ ಲಂಕೇಶ್, ಅಗ್ನಿ ...
READ MORE