ಜಿ.ಎಸ್.ಅಮೂರ ಅವರ ‘ಅವಳ ಕತೆಗಳು’ ಕೃತಿಯು ಈ ಶತಮಾನದ ಮಹಿಳೆಯರ ಆಯ್ದ ಇಪ್ಪತ್ತೈದು ಕತೆಗಳ ಸಂಕಲನ. 1999ರಲ್ಲಿ ಈ ಕೃತಿಯು ಮೊದಲ ಮುದ್ರಣವನ್ನು ಕಂಡಿದೆ.
ಲೇಖಕ ಜಿ.ಎಸ್.ಅಮೂರ ಅವರು ಪ್ರಸ್ತಾವನೆಯಲ್ಲಿ ಬರೆದಂತೆ’ ಮಹಿಳೆ ಹಾಗೂ ಕತೆಯ ಸಂಬಂಧ ಇಂದು ನಿನ್ನೆಯದಲ್ಲ. ಭಾರತೀಯ ಪರಂಪರೆಯಲ್ಲಿ ಕತೆಗೆ ನಾಟಕಕ್ಕಿದ್ದಂತೆ ದೈವೀ ನೆಲೆಯನ್ನು ಕಲ್ಪಿಸಲಾಗಿದೆ. ಮಹಿಳೆಯರಿಗೆ ಸೀಮಿತವಾಗಿ ಹೇಳುವುದಾದರೆ ಸಣ್ಣಕತೆಯ ಪ್ರಾರಂಭವಾದುದು ಈ ಶತಮಾನದ ಮೂರನೆಯ ದಶಕದಲ್ಲಿ. ಕಳೆದ ಆರು ದಶಕದಲ್ಲಿ ಮಹಿಳಾ ಕಥಾ ಸಾಹಿತ್ಯಕ್ಕೂ ಒಂದು ಪರಂಪರೆ ನಿರ್ಮಿತವಾಗಿದೆ. ಈ ಪರಂಪರೆಯ ನಾಲ್ಕು ಪೀಳಿಗೆಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ಶ್ಯಾಮಲಾ ಬೆಳಗಾಂವಕರ ಮೊದಲಾದ ಮೊದಲನೆಯ ಪೀಳಿಗೆಯ ಲೇಖಕಿಯರು ಎದುರಿಸಿದ ಮುಖ್ಯ ಪ್ರಶ್ನೆಯ ಸ್ವರೂಪ ಸಾಮಾಜಿಕವಾದದ್ದು. ಆದ್ದರಿಂದ ಅವಳಿಗೆ ಸ್ವತಂತ್ತ್ಯ್ರವಾದ ಅಸ್ತಿತ್ವವಾಗಲಿ, ಅದರ ಕಲ್ಪನೆಯಾಗಲೀ ಇರಲಿಲ್ಲ. ತಾವು ಸಮಾಜದಲ್ಲಿ ಕಂಡು ಅನುಭವಿಸಿದ ಚಿತ್ರಗಳನ್ನೇ ಈ ಲೇಖಕಿಯರು ಕೊಡುತ್ತಿದ್ದರಿಂದ ವಾಸ್ತವ ಮಾರ್ಗದ ಅನುಸರಣೆ ಅವರಿಗೆ ಅವಶ್ಯವೆನ್ನಿಸಿತು. ಎರಡನೆಯ ಪೀಳಿಗೆಯ ಲೇಖಕಿಯರು ಕಂಡ ಮಹಿಳೆಯರಲ್ಲಿಯೂ ಕೂಡ ಕ್ರಾಂತಿಕಾರಕ ಬದಲಾವಣೆಗಳು ಇರದೇ ಹೋದರೂ ಅವರಲ್ಲಿ ತಮ್ಮ ಆಸ್ಮಿತೆಯ ಅರಿವು ಜಾಗೃತವಾಗಿದ್ದರಿಂದ ವ್ಯವಸ್ಥೆಯ ವಿರುದ್ದ ದನಿ ಎತ್ತುವುದು ಪ್ರತಿಭಟನೆಯನ್ನು ಕೃತಿಗಿಳಿಸುವುಉದ ಅವಶ್ಯವೆನ್ನಿಸಿತು. ಈ ಪೀಳಿಗೆಯ ಪ್ರಮುಖ ಲೇಖಕಿಯರಾದ ಅನುಪಮಾ ನಿರಂಜನ ಹಾಗೂ ತ್ರಿವೇಣಿಯಂತಹ ಕತೆಗಾರ್ತಿಯರಲ್ಲಿ ಈ ಬೆಳವಣಿಗೆ ಕಾಣಬಹುದು ಎಂದಿದ್ದಾರೆ.
ಕರುಳ ಕತ್ತರಿ - ಶ್ಯಾಮಲಾ ಬೆಳಗಾಂವಕರ
ವಾಣಿಯ ಸಮಸ್ಯೆ -ಕೊಡಗಿನ ಗೌರಮ್ಮ
ಅವಳ ಉದ್ಧಾರ -ಸರಸ್ವತಿಬಾಯಿ ರಾಜವಾಡೆ
ಒಂದು ಪ್ರಕರಣ -ಎಚ್.ವಿ. ಸಾವಿತ್ರಮ್ಮ
ಒಂದು ಘಟನೆ ಮತ್ತು ಆನಂತರ -ಅನುಪಮಾ ನಿರಂಜನ
ದೂರ-ಬಹುದೂರ -ಗೀತಾ ಕುಲಕರ್ಣಿ
ಇಲ್ಲ, ಇಲ್ಲ… -ರಾಜಲಕ್ಷ್ಮೀ ಎನ್. ರಾವ್
ಹಾಲು ಉಕ್ಕಿತು -ಸರಸ್ವತಿದೇವಿ ಗೌಡರ
ಕೊನೆಯ ನಿರ್ಧಾರ -ತ್ರಿವೇಣಿ
ಒಂದು ಮೂಗುತಿಯ ಕತೆ -ಶಾಂತಾದೇವಿ ಕಣವಿ
ಹೊರಟು ಹೋದವನು -ವೀಣಾ ಶಾಂತೇಶ್ವರ
ಅವಲಂಬಿತರು -ವೈದೇಹಿ
ತಾಯಿ ಸಾಕೀಬಾಯಿ -ಬಿ.ಟಿ. ಲಲಿತಾ ನಾಯಕ
ಲಿನ್ -ಮುಮ್ತಾಜ್ ಬೇಗಂ
ಹೊಸಹುಟ್ಟು -ನೇಮಿಚಂದ್ರ
ನಾನು, ಅವನು ಮತ್ತು ಅವಳು -ಕಮಲಾ ಹೆಮ್ಮಿಗೆ
ನಾ ಯಾಕ ಹುಟ್ಟಿದೆನೋ -ಮಾಲತಿ ಪಟ್ಟಣಶೆಟ್ಟಿ
ಧರ್ಮ ಬಲೆ ಬೀಸಿದಾಗ -ಸಾರಾ ಅಬೂಬಕ್ಕರ್
ಸರಿದ ಕಾರ್ಮೋಡ -ಬಾನು ಮುಷ್ತಾಕ್
ಕೇವಲ ಮನುಷ್ಯ -ಎಚ್. ಗಿರಿಜಮ್ಮ
ತಪ್ತರು -ತುಳಸಿ ವೇಣುಗೋಪಾಲ್
ಕುರುಕ್ಸೇತ್ರವೂ ಕುಂಯ್ಯನೆಂಬ ಬಾಲನ ಕತ್ತಲ ಲೋಕವೂ -ಎಂ.ಎಸ್. ವೇದಾ
ದೇಹಾಂತ -ಉಮಾ ರಾವ್
ಗಾಳ -ನಾಗವೇಣಿ ಎಚ್.
ಒಂದು ಒಸಗೆ ಒಯ್ಯುವುದಿತ್ತು -ಮಿತ್ರಾ ವೆಂಕಟ್ರಾಜ್
ಕನ್ನಡ ಸಾಹಿತ್ಯವನ್ನು ಇಂಗ್ಲಿಷ್ ಮೂಲಕ ಇತರ ಭಾಷಾ ಜಗತ್ತಿಗೆ ಪರಿಚಯಿಸುತ್ತಾ, ವಿಮರ್ಶಾಲೋಕದಲ್ಲಿ ಕನ್ನಡ-ಇಂಗ್ಲಿಷ್ ಕೃತಿಗಳನ್ನು ವಿಮರ್ಶಿಸುತ್ತಾ, ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಗುರುರಾಜ ಶಾಮಾಚಾರ್ಯ ಆಮೂರರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ. ತಂದೆ ಶಾಮಾಚಾರ್ಯರು, ತಾಯಿ ಗಂಗಾದೇವಿ. ತಂದೆಗೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ. ಪ್ರಾರಂಭಿಕ ಶಿಕ್ಷಣ ಸೂರಣಗಿಯಲ್ಲಿ (ಈಗ ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲಾ) ಹೈಸ್ಕೂಲು ವಿದ್ಯಾಭ್ಯಾಸ ಹಾವೇರಿಯಲ್ಲಿ. ಶಿಕ್ಷಕರಾಗಿ ದೊರೆತ ಹುಚ್ಚೂರಾವ್ ಬೆಂಗೇರಿ ಮಾಸ್ತರು ಕನ್ನಡದಲ್ಲಿ ಆಸಕ್ತಿ ಬೆಳೆಯುವಂತೆ ಮೂಡಿದರೆ, ಎಸ್.ಜಿ. ಗುತ್ತಲ ಮಾಸ್ತರು ಇಂಗ್ಲಿಷ್ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಧಾರವಾಡದ ...
READ MORE