ವೈಜ್ಞಾನಿಕ ಆವಿಷ್ಕಾರಗಳು

Author : ಎಂ.ಜೆ. ಸುಂದರ್ ರಾಮ್

Pages 76

₹ 80.00




Year of Publication: 2016
Published by: ಇಂಡಿಗೋ ಮಲ್ಟಿಮೀಡಿಯಾ
Address: ನಂ-10,1,11 ನೇ ಮುಖ್ಯರಸ್ತೆ, ಪ್ರಕಾಶನಗರ, ಬೆಂಗಳೂರು-21,

Synopsys

ಲೇಖಕ ಡಾ. ಎಂ.ಜೆ. ಸುಂದರ್ ರಾಮ್ ಅವರ ’ ಕುತೂಹಲ ಕೆರಳಿಸುವ ಸ್ವಾರಸ್ಯಕರ ವೈಜ್ಞಾನಿಕ ಆವಿಷ್ಕಾರಗಳು’ ಕೃತಿಯು ವಿಜ್ಞಾನ ವಿಚಾರಗಳನ್ನು ಒಳಗೊಂಡ ಕತಾಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಎಮ್. ಆರ್. ನಾಗರಾಜ್ ‘ವಿಜ್ಞಾನ ಮಾಹಿತಿಯನ್ನು ಮಕ್ಕಳಿಗೆ ರವಾನಿಸುವುದೇ ವಿಜ್ಞಾನವಾಗಿರುವಾಗ ವೈಜ್ಞಾನಿಕತೆ ಹಿಂದೆ ಸರಿದು ಕೇವಲ ಸಂಗತಿಗಳ ವರ್ಗಾವಣೆಯಾಗುತ್ತದೆ. ಮಾತನ್ನು ಚೆನ್ನಾಗಿ ಆಡಲು ಕೇಳಿಕೊಂಡು ಅರ್ಥಮಾಡಿಕೊಳ್ಳಲು ಕಲಿತ ಮಗುವಿನ ಕಥಾವಿನೋದವನ್ನು ವಿಜ್ಞಾನಕತೆಯ ಕ್ರಮದಲ್ಲಿ ಬಳಕೆ ಮಾಡಿಕೊಳ್ಳಲು ವಿಪುಲ ಅವಕಾಶಗಳಿವೆ. ನಿಸರ್ಗದ ರಹಸ್ಯವನ್ನು ಪತ್ತೆ ಮಾಡುವ ಪತ್ತೇದಾರಿಕೆಯೇ ವಿಜ್ಞಾನವಾಗಿದ್ದು, ವಿಜ್ಞಾನದ ಇತಿಹಾಸ ಓದತೊಡಗಿದ ಮೇಲೆ ಪತ್ತೇದಾರಿಕೆಯೂ ಸಪ್ಪೆ ಎನಿಸತೊಡಗಿತು ಎಂದು ವಿಜ್ಞಾನಿ ಕಾರ್ಲ್ ಸಗನ್ ಅಭಿಪ್ರಾಯ ಪಟ್ಟಿದ್ದಾರೆ. ಇಂತಹ ಒಂದು ಸಾಧ್ಯತೆಯ ಬಗೆಗೆ ಅಧ್ಯಾಪಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗ ಪ್ರವರ್ತಕರ ಕೊರತೆಯಿದೆ. ಅಂತಹ ಮಾರ್ಗಪ್ರವರ್ತಕರು, ವಿಜ್ಞಾನದ ಪ್ರಸಂಗಗಳನ್ನು ಮುಂದೇನಾಯಿತೆಂದು ಕಣ್ಣರಳಿಸಿ ತಿಳಿಯುವಂತೆ ನಿರೂಪಿಸಿ ತೋರಿಸಬೇಕು. ಈ ಕೊರತೆಯನ್ನುಡಾ. ಎಂ.ಜೆ.ಸುಂದರ್‌ ರಾಮ್‌ ಅವರು ಈ ಕೃತಿಯ ಮೂಲಕ ನಿವಾರಿಸಿದ್ದಾರೆ. ಸಂಶೋಧನೆಗೆ ಬೇಕಾದ ಬಿಕ್ಕಟ್ಟು ಸಂಶೋಧಕರ ಬದುಕಿನಲ್ಲಿ ರೂಪಗೊಂಡ ಬಗೆ, ಸಂಶೋಧನೆಯ ನೋವು-ನಲಿವುಗಳ ರಸಮಯ ನಿರೂಪಣೆಯ ಮಾಹಿತಿಯಿದೆ’ ಎಂದು ಪ್ರಶಂಸಿಸಿದ್ದಾರೆ.

About the Author

ಎಂ.ಜೆ. ಸುಂದರ್ ರಾಮ್

ಎಂ.ಜೆ, ಸುಂದರ್ ರಾಮ್ ಅವರು ತಮ್ಮ ಶಿಕ್ಷಕ ವೃತ್ತಿಯನ್ನು 1964ರಲ್ಲಿ ಬೆಂಗಳೂರಿನ ವೈದ್ಯಕೀಯ ಕಾಲೇಜನಲ್ಲಿ ಪ್ರಾಣಿಶಾಸ್ತ್ರ ಉಪನ್ಯಾಸಕರಾಗಿ ಪ್ರಾರಂಭಿಸಿದರು. 1969ರಲ್ಲಿ ಬೆಂಗಳೂರಿನ ಪ್ರತಿಷ್ಠಿತ ವಿಜಯ ಕಾಲೇಜನ್ನು ಸೇರಿ ಅದರ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ ಪ್ರಾಚಾರ್ಯರಾಗಿ, ಉಪಪ್ರಾಂಶುಪಾಲರಾಗಿ ಸೇವೆಸಲ್ಲಿಸಿ, 2000ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರ ಬೆಂಗಳೂರಿನ ಸುರಾನ ಮುಕ್ತ ಪದವಿಪೂರ್ವ ಕಾಲೇಜಿನ ಜೀವಶಾಸ್ತ್ರ ಪ್ರಾಚಾರ್ಯರಾಗಿ ಕೆಲಸ ನಿರ್ವಹಿಸಿದರು. ಬೆಂಗಳೂರಿನ ಪ್ರತಿಷ್ಠಿತ ಬೇಸ್ ವಿದ್ಯಾಸಂಸ್ಥೆಯಲ್ಲಿ ಕೆಲಕಾಲ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದರು. ಸುಂದರ್ ರಾಮ್‌ರವರು ಕನ್ನಡದಲ್ಲಿ ಜೀವಶಾಸ್ತ್ರ ಮತ್ತು ವೈದ್ಯಕೀಯ ವಿಷಯಗಳಗೆ ಸಂಬಂಧಿಸಿದ ಹಲವಾರು ಜನಪ್ರಿಯ ಪುಸ್ತಕಗಳನ್ನು ...

READ MORE

Related Books