‘ಉದಯವಾಯಿತು ವಿಜಯನಗರ’ ಬಿ.ಎಸ್. ಸುದರ್ಶನ್ ಅವರ ಪೌರಾಣಿಕ ಕಥಾಸಂಕಲನವಾಗಿದೆ. ವಿದ್ಯಾರಣ್ಯರ ಸೋದರಿ ಸಿಂಗಳಾಂಬಿಕೆಯ ತನ್ನ ಸೋದರರ ವರ್ಣನೆಯಿಂದ ಪ್ರಾರಂಭವಾಗಿ ಸಂಗಮ ವಂಶದ ಕೊನೆಯ ಪ್ರಮುಖ ದೊರೆ ಇಮ್ಮಡಿ ದೇವರಾಯನ ಕಾಲಘಟ್ಟದಲ್ಲಿ ಪರ್ಯಾಯಗೊಳ್ಳುವ ಈ ಕೃತಿಯಲ್ಲಿ ಸರಳವಾಗಿ ಕೆಲವು ಪಾತ್ರಗಳ ಮೂಲಕ ಕಥೆಯನ್ನು ಹೆಣೆಯಲಾಗಿದೆ.
ವಿಂಗ್ ಕಮಾಂಡರ್ ಸುದರ್ಶನರು ಹುಟ್ಟಿದ್ದು ದಾವಣಗೆರೆ ಜಿಲ್ಲೆಯ ಗಂಗೂರು ಎನ್ನುವ ಪುಟ್ಟ ಹಳ್ಳಿಯಲ್ಲಿ. ಉಪಾಧ್ಯಾಯರಾಗಿದ್ದ ತಂದೆಯವರೊಂದಿಗೆ ಚಿಕ್ಕಮಗಳೂರು ಜಿಲ್ಲೆಯ ಹಲವಾರು ಶಾಲೆಗಳಲ್ಲಿ ಇವರ ವಿದ್ಯಾಭ್ಯಾಸ ನಡೆಯಿತು. ದಾವಣಗೆರೆಯಲ್ಲಿ ಪಿಯುಸಿ ಮುಗಿಸಿದ ನಂತರ ವಾಯುಸೇನೆಯಲ್ಲಿ ವೈದ್ಯಕೀಯ ಸಹಾಯಕರಾಗಿ ಆಯ್ಕೆಯಾದರು. ದೇಶ ಸುತ್ತು ಕೋಶ ಓದು ಎನ್ನುವಂತೆ ವಾಯುಸೇನೆಯಲ್ಲಿ ಭಾರತದಲ್ಲಿ ಇವರು ಸುತ್ತದ ಪ್ರದೇಶಗಳಿಲ್ಲ, ಅಂತೆಯೇ ಕೋಶವನ್ನು ಓದುತ್ತಲೇ ಇವರು ತಮ್ಮ ವೃತ್ತಿವಲಯದಲ್ಲಿ ಹಂತಹಂತವಾಗಿ ಮೇಲೇರುತ್ತಾ ವಾಯುಸೇನೆಯಲ್ಲಿ ಪೈಲಟ್ ಆಗಿ ಮುಂದುವರೆದರು. ವೈಮಾನಿಕ ಜೀವನದಲ್ಲಿ ಇವರು ಸುಮಾರು ಹದಿನಾಲ್ಕು ವಿವಿಧ ರೀತಿಯ, ಗಾತ್ರದ ವಿಮಾನಗಳನ್ನು ಹಾರಿಸುತ್ತಾ ಹನ್ನೆರಡು ಸಾವಿರ ಗಂಟೆಗಳಿಗೂ ...
READ MORE