ತುದಿ ಮಡಚಿಟ್ಟ ಪುಟ- ಕೃತಿಯಲ್ಲಿ ಒಟ್ಟು 13 ಕತೆಗಳಿವೆ. ಮಾಧ್ಯಮಗಳು ಬಿತ್ತುವ ಮೂಢನಂಬಿಕೆಯನ್ನು ವಿಶ್ಲೇಷಿಸುತ್ತ ಬರೆದ ಕತೆ ‘ಹೊಸ್ತಿಲು ತೊಳೆದ ನೀರು’ ಈ ಸಂಕಲನದಲ್ಲಿ ಅಡಕವಾಗಿದೆ. ಇಲ್ಲಿ ಎಲ್ಲ ಕತೆಗಳೂ ವಿವಿಧ ಪತ್ರಿಕೆಗಳ ವಿಶೇಷಾಂಕದಲ್ಲಿ ಪ್ರಕಟವಾಗಿವೆ. ಇಲ್ಲಿಯ ಒಂದು ಕತೆ 'ಸರಸ್ವತಿಯ ಫೇಸ್ಬುಕ್ ಪ್ರಸಂಗ' ವಿಜಯಪುರ ಅಕ್ಕಮಹಾದೇವಿ ವಿಶ್ವವಿದ್ಯಾಲಯವು ಎಂಎ ಮೊದಲ ವರ್ಷಕ್ಕೆ ಪಠ್ಯವಾಗಿಸಿದೆ.
ಕಥೆಗಾರ್ತಿ ಸ್ತ್ರೀವಾದಿ ಸುನಂದಾ ಕಡಮೆ ಉತ್ತರ ಕನ್ನಡ ಜಿಲ್ಲೆ, ಅಂಕೋಲಾ ತಾಲ್ಲೂಕಿನ ಅಲಗೇರಿ ಗ್ರಾಮದವರು. ಸಮಕಾಲೀನ ವಿಷಯಗಳ ಕುರಿತು ಬರೆಯುವ ಸುನಂದಾ ಅವರು ಪುಟ್ಟ ಪಾದದ ಗುರುತು, ಗಾಂಧಿ ಚಿತ್ರದ ನೋಟು, ಕಂಬಗಳ ಮರೆಯಲ್ಲಿ, ತುದಿ ಮಡಚಿಟ್ಟ ಪುಟ ಇವು ನಾಲ್ಕು ಕಥಾಸಂಕಲನಗಳು. ಬರೀ ಎರಡು ರೆಕ್ಕೆ, ದೋಣಿ ನಡೆಸೊ ಹುಟ್ಟು, ಹೈವೇ ನಂ. 63, ಎಳೆನೀರು ಇವು ನಾಲ್ಕು ಕಾದಂಬರಿಗಳು. ಪಿಸುಗುಡುವ ಬೆಟ್ಟಸಾಲು, ಪಡುವಣದ ಕಡಲು, ಕತೆಯಲ್ಲದ ಕತೆ ಇವು ಮೂರು ಪ್ರಬಂಧ ಸಂಕಲನಗಳು ಹಾಗೂ ಸೀಳುದಾರಿ ಎಂಬ ಕವನ ಸಂಕಲನಗಳು ಹೊರಬಂದಿವೆ. ಇವರಿಗೆ ಗುಡಿಬಂಡೆ ...
READ MOREಕತೆ ಕೇಳೋಣ ಬನ್ನಿ ಸರಣಿಯಲ್ಲಿ ಸುನಂದಾ ಕಡಮೆ ಅವರಿಂದ ‘ಹೊಸ್ತಿಲು ತೊಳೆದ ನೀರು’ ಕತೆ ವಾಚನ