ಲೇಖಕ ಡಾ. ಅಜಿತ್ ಹರೀಶಿ ಅವರು ಬರೆದ ಕಥಾಸಂಕಲನ ಕೃತಿ ʻಸೆಲೆಕ್ಟ್ ಆಲ್ ಡಿಲೀಟ್ʼ. ಇದು 12 ಕತೆಗಳುಳ್ಳ ಸಂಕಲನವಾಗಿದೆ. ಪುಸ್ತಕದ ಬಗ್ಗೆ ಲೇಖಕ, ನಟ ಹಾಗೂ ನಿರ್ದೇಶಕರಾಗಿರುವ ಸೇತುರಾಮ್ ಅವರು ಹೇಳುವಂತೆ, “ನೂರು ವರ್ಷ ಆಯುಷ್ಯದ ಮನುಷ್ಯ ನಿರಂತರ ಚಲನೆಯಲ್ಲಿ ಮತ್ತು ಬದುಕಿನ ಅರಸುವಿಕೆಯಲ್ಲಿ. ಅದೇ ನೂರು ದಿನದ ಸಹಸ್ರಪದಿ ಇದ್ದಲ್ಲೇ ಬದುಕುತ್ತಾನೆ. ಬದುಕನ್ನ ಆಸ್ವಾದಿಸುತ್ತಾನೆ. ಇವನದ್ದು ನಿರಂತರ ಸಾವಿನ ಮೆರವಣಿಗೆಯಾದರೆ, ಅದಕ್ಕೆ ಬದುಕಿನ ಸಂಭ್ರಮ. ಇವನಿಗೆ ಎಲ್ಲವೂ ಸಾಧನೆಯೇ. ಕಸ ಮಾಡುವುದರಿಂದ ಶುರುವಾಗಿ, ಬಳಿಯುವವರೆಗೂ. ಅದಕ್ಕೆ ಎಲ್ಲವೂ ಸ್ವಾಭಾವಿಕ. ' ಈ ಪರಿಸರದ ಕತೆಗಳು ' ಸ್ವಾಭಾವಿಕವಾಗಿವೆ.
ಲೇಖಕ ಡಾ. ಅಜಿತ್ ಹರೀಶಿ ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹರೀಶಿ ಗ್ರಾಮದವರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹುಟ್ಟೂರಿನ ಸರ್ಕಾರಿ ಶಾಲೆಗಳಲ್ಲಿ, ಪದವಿಪೂರ್ವ ಶಿಕ್ಷಣವನ್ನು ಶಿರಸಿಯಲ್ಲಿ ಮುಗಿಸಿರುತ್ತಾರೆ. ಆಯುರ್ವೇದ ಮಹಾವಿದ್ಯಾಲಯ, ಹುಬ್ಬಳ್ಳಿಯಲ್ಲಿ ವೈದ್ಯಕೀಯ ಪದವೀಧರರಾದ ಇವರು, ಆಕ್ಯುಪಂಕ್ಚರ್ ಚಿಕಿತ್ಸೆ , ಹಿಪ್ನೋಥೆರಪಿಯಲ್ಲಿಯೂ ಪರಿಣಿತರು. ಪ್ರಸ್ತುತ ಹರೀಶಿಯಲ್ಲಿ ಖಾಸಗಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ಬರವಣಿಗೆಯನ್ನು ತಮ್ಮ ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ. ಬಿಳಿಮಲ್ಲಿಗೆಯ ಬಾವುಟ, ಸೂರು ಸೆರೆಹಿಡಿಯದ ಹನಿಗಳು, ಕನಸಿನ ದನಿ ಪ್ರಕಟಿತ ಕವನ ಸಂಕಲನಗಳು. ಪರಿಧಾವಿ, ಕಾಮೋಲ ಮತ್ತು ಮೂಚಿಮ್ಮ ಪ್ರಕಟಿತ ಕಥಾಸಂಕಲನಗಳು. ಕಥಾಭರಣ ಸಂಪಾದಿತ ಕೃತಿಯಾಗಿದೆ. ಆರೋಗ್ಯದ ಅರಿವು ...
READ MORE