ಶ್ರೀನಿವಾಸ್ ಉಡುಪ ಎನ್ ಅವರ ಅನುವಾದಿತ ಕಥೆಗಳ ಸಂಕಲನ ‘ಸತ್ಯಜಿತ್ ರೇ’.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಲ್ಲುಂಡೆಯಲ್ಲಿ (ಜನನ: 08-01-1933) ಶ್ರೀನಿವಾಸ ಉಡುಪರು ಹುಟ್ಟಿದರು. ತಂದೆ ಸುಬ್ಬರಾಯ ಉಡುಪರು, ತಾಯಿ ವೆಂಕಟಲಕ್ಷ್ಮಮ್ಮ. 2 ವರ್ಷದ ಮಗುವಿದ್ದಾಗಲೇ ತೀವ್ರ ಜ್ವರದಿಂದ ಕಾಲುಗಳ ಶಕ್ತಿ ಕಳೆದುಕೊಳ್ಳಬೇಕಾಯಿತು. 8ನೇ ವರ್ಷಕ್ಕೆ ತಂದೆ-ತಾಯಿಯನ್ನು ಕಳೆದುಕೊಂಡರು. ಸಹೋದರ ಮಾವನವರಲ್ಲಿ ಬೆಳೆದರು. ಗಾಜನೂರಿನಲ್ಲಿ ಪ್ರಾಥಮಿಕ-ಪ್ರೌಢಶಿಕ್ಷಣ ಪಡೆದರು ಮನೆಯಲ್ಲಿ ಹಿಂದಿ ಭಾಷೆ. ಶಿಕ್ಷಣ ಮುಂದುವರಿಸಲಾಗದೇ ತೀರ್ಥಹಳ್ಳಿಯ ಅರಳಿಸುರಳಿ ಮಾಧ್ಯಮಿಕ ಶಾಲೆಯ ಶಿಕ್ಷಕರಾದರು. ಹೆದ್ದೂರು, ಹೊಸನಗರದ ವಿದ್ಯಾಧಿಕಾರಿಗಳ ಕಚೇರಿಯ ಗುಮಾಸ್ತರಾದರು. ನಂತರ ಶರಾವತಿ ಕಣಿವೆ ಯೋಜನೆಯ ಲೋಕೋಪಯೋಗಿ ಇಲಾಖೆಗೆ ಸೇರಿ ಕಾರ್ಗಲ್ಲಿನಲ್ಲಿ ಗುಮಾಸ್ತರಾಗಿ ಸೇರಿದರು. ಶ್ರೀಮುಖ’, ‘ಹೋಶ್ರೀ’, ‘ಶ್ರೀಶ’ ಕಾವ್ಯನಾಮಗಳಿಂದ ಕಥೆ, ಕವನ ಕಾದಂಬರಿಗಳನ್ನು ಬರೆದಿದ್ದಾರೆ. ಸುಮಾರು 60 ಕಾದಂಬರಿಗಳು, ...
READ MORE