ಇದೊಂದು ನೀಳ್ಗತೆ. ಹಲಸಂಗಿ ಗೆಳೆಯರಲ್ಲಿ ಕಿರಿಯವರಾಗಿದ್ದ ಕಾಪಸೆ ರೇವಪ್ಪನವರ ಈ ಕೃತಿಯ ಬೀಜವು ಬೆಂಗಾಲಿಯ ಒಂದು ತೋಟದ್ದು ಎಂದು ಮಧುರಚನ್ನರು ತಮ್ಮ ಮುನ್ನುಡಿಯಲ್ಲಿ ಹೇಳಿದ್ದಾರೆ. ಭಾಷೆಯ ಸರಳತೆಯು ಆಪ್ತ ಸ್ನೇಹಿತನಂತೆ ಓದುಗನನ್ನು ಕೈಹಿಡಿದು ಕರೆದೊಯ್ಯ ನಿಂತಿದೆ. ಕತೆಯ ಜೀವಾಳವು ಜೀವಂತವಾದುದು. ಅದಕ್ಕೆ ಸರಳ ನುಡಿಯ ಮಿಲನವಾದರೆ ಅದು ಸುಲಿದ ಬಾಳೆಯ ಹಣ್ಣಿನಂದದಿ ಸವಿಯಲಿಕ್ಕೆ ಸುಲಭವೂ ಶಕ್ತಿಯುತವೂ ಆಗದಿರದು ಎಂದು ಈ ನೀಳ್ಗತೆಯ ಭಾಷೆಯನ್ನು ಮಧುರಚನ್ನರು ಶ್ಲಾಘಿಸಿದ್ದಾರೆ.
ಹಲಸಂಗಿ ಗೆಳಯರಲ್ಲಿ ಕಿರಿಯರು ಕಾಪಸೆ ರೇವಪ್ಪ. ಬಾಲ್ಯದಿಂದಲೇ ಕವಿತೆ ಬರೆಯಲು ಆರಂಭಿಸಿದ್ದ ಅವರು, ಮಧುರಚನ್ನರ ಕಾವ್ಯ ಅಭಿಮಾನಿಯಾಗಿದ್ದರು. ಅನಂತರ ಅವರು ಜಾನಪದದಂಥ ಕ್ಷೇತ್ರದಲ್ಲಿ ಮಾಡಿದ ಕೆಲಸ ದೊಡ್ಡದು. ನಂದನವನ, ಮಲ್ಲಿಗೆ ದಂಡೆ, ಸನ್ಯಾಸಿ ಅವರ ಪ್ರಮುಖ ಕೃತಿಗಳು.. ...
READ MORE