ಲೇಖಕ ವೈ.ಎನ್. ಗುಂಡೂರಾವ್ ಅವರು ಸಂಪಾದಿಸಿರುವ ಕೃತಿ ರಾಮಾಯಣದ ಉಪಕಥೆಗಳು. ಆದಿಕವಿ ವಾಲ್ಮೀಕಿ ವಿರಚಿತ ರಾಮಾಯಣ ಪುರಾತನ ಮಹಾಕಾವ್ಯ. ರಾಮಾಯಣ ಒಟ್ಟಾರೆಯಾಗಿ ನೋಡುವುದಕ್ಕೆ ಒಂದೇ ಕಥೆಯೆನಿಸಿದರೂ ಅದರಲ್ಲಿ ಅನೇಕ ಉಪಕಥೆಗಳು ಹಾಸುಹೊಕ್ಕಾಗಿರುವುದನ್ನು ಕಾಣಬಹುದು. ಬಿಡಿ ಬಿಡಿಯಾಗಿ ಈ ಕಥೆಗಳು ತಮ್ಮದೇ ಮಹತ್ವವನ್ನು ಹೊಂದಿವೆ.
ಈ ಕೃತಿಯಲ್ಲಿ ಅನೇಕ ಉಪಕಥೆಗಳನ್ನು ಸಂಗ್ರಹಿಸಲಾಗಿದೆ. ಉಪಕಥೆಗಳನ್ನು ಇಲ್ಲಿ ಇದ್ದುದರಿಂದ ಹೇಳಿಲ್ಲ. ಅದರ ಹಿನ್ನೆಲೆಯನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಮೂಲ ಕಥೆಗೆ ಈ ಕಥೆ ಹೇಗೆ ಪೂರಕವಾಗಿದೆ ಎಂದು ತಿಳಿಸಲಾಗಿದೆ. ಚಿತ್ತಾಕರ್ಷಕ ಭಾಷೆಯಲ್ಲಿ ಕಥೆಯನ್ನು ನಿರೂಪಿಸಲಾಗಿದೆ. ಇಷ್ಟೊಂದು ಉಪಕಥೆಗಳು ರಾಮಾಯಣದಲ್ಲಿಯೇ ಎಂದು ಬೆರಗುಗೊಳ್ಳುವಷ್ಟು ಸಂಗ್ರಹ ಇಲ್ಲಿದೆ. ಈ ಹಲವಾರು ಉಪಕಥೆಗಳು ಸೇರಿ ರಾಮಾಯಣ ಮಹಾಕಾವ್ಯದ ಕಥೆಯನ್ನೂ ನಿರೂಪಿಸುತ್ತ ಹೋಗುವುದು ಈ ಕೃತಿಯ ವೈಶಿಷ್ಟ್ಯವಾಗಿದೆ.
ಹಾಸ್ಯಪ್ರಬಂಧ ಲೇಖಕ, ಮಾಹಿತಿ ಸಂಗ್ರಾಹಕ, ಸಂಪಾದಕರಾದ ಗುಂಡೂರಾವ್ ಅವರು 1945 ಜೂನ್ 6ರಂದು ಈಗಿನ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಯರಗಂಬಳ್ಳಿಯಲ್ಲಿ ಹುಟ್ಟಿದರು. ನಿವೃತ್ತಿಯ ನಂತರ ಪೂರ್ಣ ಪ್ರಮಾಣದ ಸಾಹಿತ್ಯಾಭ್ಯಾಸ, ಬರೆಹದಲ್ಲಿ ತೊಡಗಿಕೊಂಡಿದ್ದಾರೆ. ಸದಭಿರುಚಿಯ ಹಾಸ್ಯ ಪ್ರಸಾರಕ್ಕಾಗಿ ಸ್ಥಾಪಿಸಿರುವ ‘ಹಾಸ್ಯಬ್ರಹ್ಮ ಟ್ರಸ್ಟ್’ನ ಸ್ಥಾಪಕ ಸದಸ್ಯರು. ಸಂಜೆ ಕಾಲೇಜಿಗೆ ಸೇರಿದಾಗ ದೊರೆತ ಸಾಹಿತಿ ಮಿತ್ರರ ಓಡನಾಟದಿಂದ ಸಾಹಿತ್ಯದ ಓದು, ಬರೆಹವನ್ನು ಅತಿ ಗಂಭೀರವಾಗಿ ತೆಗೆದುಕೊಂಡು ಪತ್ರಿಕೆಗಳಿಗೆ ಬರೆದ ಲೇಖನಗಳು. ಮೊದಲ ಲೇಖನ ಕಸ್ತೂರಿ ಮಾಸಪತ್ರಿಕೆ, ಮೊದಲ ಕತೆ ಇಂಚರ ಮಾಸ ಪತ್ರಿಕೆ ಹಾಗೂ ಮೊದಲ ಹಾಸ್ಯಲೇಖನ ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ...
READ MORE