ಪ್ರೇಮಧರ್ಮ

Author : ವೀರೇಶ ಶಿವಲಿಂಗಪ್ಪ ಸಜ್ಜನ

Pages 96

₹ 75.00




Year of Publication: 2018
Published by: ಎಸ್.ಎಲ್.ಎನ್. ಪ್ರಕಾಶನ
Address: ನಂ.3437, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರೀನಗರ ಬನಶಂಕರಿ 2ನೇ ಹಂತ, ಬೆಂಗಳೂರು-28
Phone: 997229376

Synopsys

‘ಪ್ರೇಮಧರ್ಮ’ ಲೇಖಕ ವೀರೇಶ ಶಿವಲಿಂಗಪ್ಪ ಸಜ್ಜನ ಅವರ ಕಥಾಸಂಕಲನ. ಈ ಪುಸ್ತಕಕ್ಕೆ ಲೇಖಕಿ ಸುನಂದಾ ಪ್ರಕಾಶ ಕಡಮೆ ಬೆನ್ನುಡಿ ಬರೆದು ‘ಸಾಹಿತ್ಯದ ಮೂಲಗುಣ ಕಾವ್ಯ ಎಂಬ ಮಾತಿದೆ. ಅಪ್ಪಟ ಕವಿಗಳು ಇದ್ದಕ್ಕಿದ್ದಂತೆ ಕಥೆಗಾರರೂ ಆಗಿಬಿಟ್ಟರೆ ಅವರಿಂದ ಹುಟ್ಟುವ ಕತೆಗಳು ಒಂದು ಹದದಲ್ಲಿ ಕಾವ್ಯಮಯತೆಯಿಂದ ಕೂಡಿರಬಲ್ಲವು ಎಂಬುದಕ್ಕೆ ವೀರೇಶನ ಇಲ್ಲಿನ ನಾಲ್ಕು ಕಥೆಗಳೇ ಸಾಕ್ಷಿ. ಹಾಗಾಗಿ, ನನ್ನ ಮಟ್ಟಿಗೆ ಕವಿತೆ ಮತ್ತು ಕತೆ ಇವೆರಡೂ ಮಾಧ್ಯಮಗಳು ಬೇರೆ ಬೇರೆ ಅಲ್ಲ. ಒಂದೊಳ್ಳೆಯ ಚಿತ್ರಕಲೆಯು ಏಕಕಾಲಕ್ಕೆ ಕಾವ್ಯದ ರೀತಿಯೂ ಇರುತ್ತದೆ ಮತ್ತು ಯಾವುದೋ ಒಂದು ಕತೆಯನ್ನೂ ಅದು ಹೇಳುತ್ತಿರುತ್ತದೆ. ಅಂತೆಯೇ ಕತೆಯಲ್ಲಿ ಹೇಳುತ್ತಿದ್ದ ಒಂದು ಘಟನೆ ಪ್ರಸಂಗ ಪ್ರಕರಣಗಳು ಇನ್ನೇನನ್ನೋ ಹೇಳುತ್ತಿರಬೇಕು, ಸಾಂಕೇತಿಕತೆಯನ್ನು ಉಳಿಸಿಕೊಂಡಿರಬೇಕು. ಎಲ್ಲ ಪ್ರಕಾರಗಳಲ್ಲೂ ಇಂಥ ಧ್ವನಿಪೂರ್ಣತೆ ಇದ್ದರೆ ಅದು ಗಟ್ಟಿ ಬರಹ ಅಂತ ನಾನಂತೂ ಅಂದುಕೊಂಡಿದ್ದೇನೆ. ಹೊಸ ತಲೆಮಾರಿನ ಕಥೆಗಾರ ವೀರೇಶನೊಳಗೆ ಬಂಡಾಯದ ಕ್ರಾಂತಿ ಪಥ ಮತ್ತೆ ಮತ್ತೆ ಅನುರಣಿಸುವುದು ಸಮಾಧಾನದ ಸಂಗತಿ. ಇನ್ನು ಮುಂಬರುವ ಬರವಣಿಗೆಗೆ ಬೇಕಾಗುವ ಬದುಕಿನ ದಟ್ಟ ಅನುಭವ ವೀರೇಶನದಾಗಲಿ ಮತ್ತು ಈ ಕಥೆಗಾರ ಕಥಾ ಮಾಧ್ಯಮವನ್ನು ಬಹು ಗಂಭೀರವಾಗಿ ಪರಿಗಣಿಸಲಿ’ ಎಂದು  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

About the Author

ವೀರೇಶ ಶಿವಲಿಂಗಪ್ಪ ಸಜ್ಜನ

ವೀರೇಶ ಶಿವಲಿಂಗಪ್ಪ ಸಜ್ಜನ ಅವರು ಧಾರವಾಡದವರು. ಜವಾಹರ ನವೋದಯ ವಿದ್ಯಾಲಯ ಹಾಗೂ ಕೇಂದ್ರೀಯ ವಿದ್ಯಾಲಯದಲ್ಲಿ ತಮ್ಮ ಪಿಯುಸಿವರೆಗಿನ ವಿದ್ಯಾಭ್ಯಾಸ, ನಂತರ ಮೈಸೂರಿನಲ್ಲಿ ಪರಿಸರದಲ್ಲಿ ಎಂಜಿನಿಯರಿಂಗ್ ಪದವಿ ಅನಂತರ, ಪುಣೆಯಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ, ಸದ್ಯ, "Dry deposition of aerosols over Indian Metro cities" ವಿಷಯದಲ್ಲಿ ಸಂಶೋಧನಾ ವಿದ್ಯಾರ್ಥಿ. ಇವರ ಮೊದಲ ಕವನ ಸಂಕಲನ 'ಹೊಸಹಾಡು'( 2012) ಹಾಗೂ ಮೊದಲ ಕಥಾ ಸಂಕಲನ 'ಪ್ರೇಮಧರ್ಮ' (2018) ಪ್ರಕಟವಾಗಿವೆ. 2015-19 ರವರೆಗೆ ಇವರು ಸಿರಿಗನ್ನಡ ವೇದಿಕೆಯ ಧಾರವಾಡ ಜಿಲ್ಲೆಯ ಅಧ್ಯಕ್ಷರಾಗಿದ್ದರು. ಕಾಜಾಣದ ಎರಡು ಕಮ್ಮಟಗಳಲ್ಲಿ, ಮೈಸೂರು ಮಂಡ್ಯ ಕುಪ್ಪಳ್ಳಿ, ಧಾರವಾಡ ಹೀಗೆ ಹಲವು ವೇದಿಕೆಗಳಲ್ಲಿ ತಮ್ಮ ಕವನಗಳನ್ನು ವಾಚಿಸಿದ್ದಾರೆ. ...

READ MORE

Related Books