ವೀರೇಶ ಶಿವಲಿಂಗಪ್ಪ ಸಜ್ಜನ ಅವರು ಧಾರವಾಡದವರು. ಜವಾಹರ ನವೋದಯ ವಿದ್ಯಾಲಯ ಹಾಗೂ ಕೇಂದ್ರೀಯ ವಿದ್ಯಾಲಯದಲ್ಲಿ ತಮ್ಮ ಪಿಯುಸಿವರೆಗಿನ ವಿದ್ಯಾಭ್ಯಾಸ, ನಂತರ ಮೈಸೂರಿನಲ್ಲಿ ಪರಿಸರದಲ್ಲಿ ಎಂಜಿನಿಯರಿಂಗ್ ಪದವಿ ಅನಂತರ, ಪುಣೆಯಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ, ಸದ್ಯ, "Dry deposition of aerosols over Indian Metro cities" ವಿಷಯದಲ್ಲಿ ಸಂಶೋಧನಾ ವಿದ್ಯಾರ್ಥಿ. ಇವರ ಮೊದಲ ಕವನ ಸಂಕಲನ 'ಹೊಸಹಾಡು'( 2012) ಹಾಗೂ ಮೊದಲ ಕಥಾ ಸಂಕಲನ 'ಪ್ರೇಮಧರ್ಮ' (2018) ಪ್ರಕಟವಾಗಿವೆ. 2015-19 ರವರೆಗೆ ಇವರು ಸಿರಿಗನ್ನಡ ವೇದಿಕೆಯ ಧಾರವಾಡ ಜಿಲ್ಲೆಯ ಅಧ್ಯಕ್ಷರಾಗಿದ್ದರು. ಕಾಜಾಣದ ಎರಡು ಕಮ್ಮಟಗಳಲ್ಲಿ, ಮೈಸೂರು ಮಂಡ್ಯ ಕುಪ್ಪಳ್ಳಿ, ಧಾರವಾಡ ಹೀಗೆ ಹಲವು ವೇದಿಕೆಗಳಲ್ಲಿ ತಮ್ಮ ಕವನಗಳನ್ನು ವಾಚಿಸಿದ್ದಾರೆ. ಇವರ ಕಥೆಗಳು ಅವಧಿ ಹಾಗೂ ಸ್ಥಿತಿ-ಗತಿ ಮಾಗ್ಝಿನ್ ಗಳಲ್ಲಿ ಪ್ರಕಟಗೊಂಡಿವೆ. ಕವನ, ಕಥೆ, ಚಾರಣ, ತಿರುಗಾಟ, ಸಂಗೀತ, ಕಾನೂನು ಹಾಗೂ ಸಂಶೋಧನೆ.ಇವರ ಆಸಕ್ತಿಯ ಕ್ಷೇತ್ರಗಳು.