ಫಲ ಸಂಚಯ

Author : ವರದರಾಜ ಹುಯಿಲಗೋಳ

Pages 127

₹ 1.00




Year of Publication: 1948
Published by: ಕಲ್ಪನಾ ಗ್ರಂಥ ಪ್ರಕಾಶನ ಸಮಿತಿ
Address: ಹುಬ್ಬಳ್ಳಿ

Synopsys

ವರದರಾಜ ಹುಯಿಲಗೋಳ ಅವರ ಸಣ್ಣ ಕಥೆಗಳ ಸಂಕಲನ-ಫಲ ಸಂಚಯ. ಇಲ್ಲಿ 11 ಕಥೆಗಳಿವೆ. ಕೃತಿಗೆ ಮುನ್ನುಡಿ ಬರೆದ ವಿ.ಕೃ.ಗೋಕಾಕ ಅವರು ‘ಇಲ್ಲಿಯ ಕಥೆಗಳಲ್ಲಿ ಜೀವನ ದೃಷ್ಟಿ ಇದೆ. ಸೂಕ್ಷ್ಮ ಸ್ವಭಾವದ ನಿರೀಕ್ಷಣೆಯೂ ಇದೆ. ಬರವಣಿಗೆಯಲ್ಲಿ ಲಾಲಿತ್ಯ ಹಾಗೂ ಸುಭಗತೆ ಇದೆ ಎಂದು ಪ್ರಶಂಸಿಸಿ, ಕಥೆಗಳ ಮುಕ್ತಾಯದಲ್ಲಿ ಹೆಚ್ಚಿನ ಸಿದ್ಧಿಯ ಸಂಪಾದನೆಯಾಗಬೇಕು’ ಎಂದೂ ಸಲಹೆ ನೀಡಿದ್ದರು. ‘ಮೇಳದ ಗಾಯಕಿ’ಎಂಬ ಕಥೆಯು ಚೆಕೋವ್ಹ್ ಅವರು ಬರೆದ ಕೋರಸ್ ಗರ್ಲ್ ಕಥೆಯ ಸರಳಾನುವಾದವಾಗಿದೆ ಎಂದು ಲೇಖಕರು ಸ್ಪಷ್ಟಪಡಿಸಿದ್ದಾರೆ.

About the Author

ವರದರಾಜ ಹುಯಿಲಗೋಳ
(12 August 1917 - 10 October 1993)

ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಗಣ್ಯ ಕೊಡುಗೆ ನೀಡಿರುವ ವರದರಾಜರು ಹುಟ್ಟಿದ್ದು ( ಜನನ: 12-08-1917) ವಿಜಾಪುರ ಜಿಲ್ಲೆಯ ಮುದ್ದೇ ಬಿಹಾಳದಲ್ಲಿ. ತಂದೆ ರಾಜೇರಾಯರು, ತಾಯಿ ಗೋದಾವರಿಬಾಯಿ. ರಂ.ಶ್ರೀ. ಮುಗಳಿಯವರು ಇವರ ಸೋದರಮಾವನಾದರೆ ಆಲೂರು ವೆಂಕಟರಾಯರು ಮಾವನವರು. ಪ್ರಾರಂಭಿಕ ಶಿಕ್ಷಣ ಮುದ್ದೇ ಬಿಹಾಳದಲ್ಲಿ ಹಾಗೂ ಹೈಸ್ಕೂಲು ಶಿಕ್ಷಣವನ್ನು ಗದಗದಲ್ಲಿ ಪೂರೈಸಿದರು. ಆನಂತರ ಸಾಂಗ್ಲಿಯ ವಿಲಿಂಗ್‌ಡನ್ ಕಾಲೇಜು ಸೇರಿದರು. 1943ರಲ್ಲಿ ಬಿ.ಎ. (ಆನರ್ಸ್) ಪದವಿ ನಂತರದಲ್ಲಿ ಎಂ.ಎ. ಹಾಗೂ ಬಿ.ಟಿ. ಪದವಿ ಪಡೆದರು. 1969ರಲ್ಲಿ ‘ದುರ್ಗಸಿಂಹನ ಪಂಚತಂತ್ರ ಸಮೀಕ್ಷೆ’ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪಡೆದರು. ಬಿ.ಎ. (ಆನರ್ಸ್) ಪದವಿಯ ನಂತರ ಕೆಲಕಾಲ ...

READ MORE

Related Books