‘ಪಾದಗಟ್ಟಿ’ ಕವಿ, ಲೇಖಕ ಆನಂದ ಕುಂಚನೂರು ಅವರ ಕಥಾಸಂಕಲನ. ಈ ಕೃತಿಗೆ ಹಿರಿಯ ಕಥೆಗಾರ ಚನ್ನಪ್ಪ ಅಂಗಡಿಯವರು ಮುನ್ನುಡಿ ಬರೆದಿದ್ದಾರೆ. ಆನಂದ ಕುಂಚನೂರ ವಿರಳವಾಗಿ ಬರೆಯುವ ವಿಶಿಷ್ಟ ಬರಹಗಾರ. ಎರಡು ಕವನ ಸಂಕಲನದ ನಂತರ ಇದೀಗ ಮೊದಲ ಕಥಾ ಸಂಕಲನ ಹೊರತರುತ್ತಿರುವ ಆನಂದ ಕೇವಲ ಸಂಯಮದ ಬರಹಗಾರ ಮಾತ್ರವಲ್ಲ, ತನ್ಮಯದ ಬರಹಗಾರ ಕೂಡ. ಇಷ್ಟೊಂದು ಆಳಕ್ಕಿಳಿದು, ಅನುಭವಿಸಿ ಬರೆಯುವ ಲೇಖಕರು ನಮ್ಮ ತಲೆಮಾರಿನಲ್ಲಿ ಸಿಗುವುದು ದುರ್ಲಭ.
ಅಂತೆಯೇ ಹಸ್ತಪ್ರತಿ ಹಂತದಲ್ಲಿಯೇ ಪಾಪು ಕಥಾ ಪುರಸ್ಕಾರ ಪಡೆದುಕೊಂಡ ಇಲ್ಲಿನ ಕಥೆಗಳಲ್ಲಿ ಲೌಕಿಕ ವಾಸ್ತವದ ಜೊತೆಗೆ ಭಿನ್ನ ವಾಸ್ತವವೂ ಬೆರೆತುಕೊಂಡಿದೆ ಎನ್ನುತ್ತಾರೆ ಕಥೆಗಾರ ಚನ್ನಪ್ಪ ಅಂಗಡಿ.
ಕವಿ, ಲೇಖಕ ಆನಂದ ಕುಂಚನೂರು ಮೂಲತಃ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯವರು. ಇವರು 13-07-1981ರಂದು ಮೂಡಲಗಿಯಲ್ಲಿ ಜನಿಸಿದರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಬನಹಟ್ಟಿಯಲ್ಲಿ ಮುಗಿಸಿದ ಆನಂದ ಅವರು ನಂತರ ಧಾರವಾಡದಲ್ಲಿ ಪಿ.ಯು.ಸಿ ಹಾಗೂ ಬೆಳಗಾವಿ ಮತ್ತು ಮೈಸೂರಿನಲ್ಲಿ ಬಿ.ಫಾರ್ಮ್ ಮತ್ತು ಎಂ.ಫಾರ್ಮ್ ಶಿಕ್ಷಣ ಪಡೆದರು. 2007 ರಿಂದ ಖಾಸಗಿ ಔಷದಿ ಕಂಪೆನಿಗಳಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಓದು- ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಅವರು ‘ಕರಿನೆಲ’, ‘ವ್ಯೋಮ ತಂಬೂರಿನಾದ’ ಎಂಬ ಕವನ ಸಂಕಲನಗಳು ಮತ್ತು ‘ಪಾದಗಟ್ಟಿ’ ಎಂಬ ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ. ಜೊತೆಗೆ ನಾಡಿನ ಪ್ರಮುಖ ಪತ್ರಿಕೆಗಳಾದ ಮಯೂರ, ತುಷಾರ, ...
READ MOREಅನನ್ಯ ಸಂಸ್ಕೃತಿಯ ಗುಚ್ಛ ‘ಪಾದಗಟ್ಟಿ’ - ಕತಾ ಸಂಕಲನದ ಕುರಿತು ಆನಂದ ಕುಂಚನೂರು ಮಾತು|