'Only ಪಾಲಿಟಿಕ್ಸ್‘ ಗೋಪಾಲ ಕೃಷ್ಣ ಕುಂಟಿನಿ ಅವರ ರಚನೆಯ ಕತೆಗಳ ಸಂಗ್ರಹವಾಗಿದೆ. ಮರುಭೂಮಿಯ ರಾಜ್ಯವೊಂದರ ರಾಜನಿಗೆ ಒಮ್ಮೆ ಒಂಟೆಗಳೆಲ್ಲಾ ನಕ್ಕಂತೆ ಕನಸು ಬೀಳುತ್ತದೆ. `ಒಂಟೆಗಳೇಕೆ ನಕ್ಕವು?' ಎಂದು ರಾಜ ಪಂಡಿತರ ಸಭೆ ಕರೆದು ಕೇಳುತ್ತಾನೆ. `ಒಂಟೆಗಳು ನಗುವುದಿಲ್ಲ, ನಗುವುದು ಮನುಷ್ಯರು ಮಾತ್ರಾ ದೊರೆಯೇ' ಎಂದು ಪಂಡಿತರು ಹೇಳುತ್ತಾರೆ. ರಾಜ, `ಹಾಗಾದರೆ ನನ್ನ ರಾಜ್ಯದಲ್ಲಿ ನನ್ನ ಪ್ರಜೆಗಳೆಲ್ಲರೂ ನಗುತ್ತಾರೆಯೇ?' ಎಂದು ಅಚ್ಚರಿಯಿಂದ ಕೇಳುತ್ತಾನೆ. ಅದಕ್ಕೆ ಪಂಡಿತರು, `ಮನುಷ್ಯರು ನಗುವುದು ಸಹಜ ಧರ್ಮ' ಎಂದು ವಿವರಿಸುತ್ತಾರೆ. ಮರುದಿನ ಮತ್ತೆ ಪಂಡಿತರ ಸಭೆ ಕರೆದ ರಾಜ, `ಕಳೆದ ರಾತ್ರಿ ನನಗೆ ಕನಸಲ್ಲಿ ಪ್ರಜೆಗಳೆಲ್ಲಾ ಅತ್ತಂತೆ ಕಾಣಿಸಿತು' ಎಂದು ಹೇಳುತ್ತಾನೆ. ಪಂಡಿತರು, `ಮನುಷ್ಯರು ಅಳುವುದೂ ಸಹಜಧರ್ಮ' ಎಂದು ವಿವರಿಸುತ್ತಾರೆ. ಮೂರನೇ ದಿನ ರಾಜ ಅದೇ ಪಂಡಿತರ ಸಭೆ ಕರೆದು `ನನಗೆ ಕನಸಲ್ಲಿ ಪ್ರಜೆಗಳೆಲ್ಲಾ ನಕ್ಕಂತೆಯೂ, ಒಂಟೆಗಳೆಲ್ಲಾ ಅತ್ತಂತೆಯೂ ಕನಸು ಬಿತ್ತು' ಎಂದು ಹೇಳುತ್ತಾನೆ. ಈಗ ಪಂಡಿತರು ರಾಜನಿಗೆ ಒಂದು ಸಲಹೆ ನೀಡುತ್ತಾರೆ, `ರಾಜನೇ ಮೊದಲು ನೀನು ನಗಲು ಕಲಿ. ನಂತರ ಅಳಲು ಕಲಿ. ನಗು ಮತ್ತು ಅಳುವನ್ನು ಧಿಕ್ಕರಿಸಿದ ನೀನು ರಾಜ್ಯವನ್ನು ಹೇಗೆ ಆಳುವೆ? ನೀನು ನಕ್ಕರೆ ಒಂಟೆಗಳು ನಗಲಾರವು, ನೀನು ಅತ್ತರೆ ಪ್ರಜೆಗಳು ಅಳಲಾರರು.' ಈ ಪುಸ್ತಕ ಈ ಕಾಲದ ರಾಜ ಮತ್ತು ಪ್ರಜೆಗಳ ಕತೆಗಳ ಸಂಗ್ರಹ.
ಹಿರಿಯ ಪತ್ರಕರ್ತರಾದ ಗೋಪಾಲಕೃಷ್ಣ ಕುಂಟಿನಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿಯವರು. ಕತೆಗಾರರಾಗಿರುವ ಗೋಪಾಲಕೃಷ್ಣ ಅವರು “ವೃತ್ತಾಂತ ಶ್ರವಣವು”, “ಆಮೇಲೆ ಇವನು”, ‘ಅಪ್ಪನ ನೀಲಿಕಣ್ಣು’, ‘ಪೂರ್ಣ ತೆರೆಯದ ಪುಟಗಳು’, “ವಿಲೇಜ್ ವರ್ಲ್ಡು ಮತ್ತು 24 ಕತೆಗಳು”, “ಮಾರಾಪು”ಎಂಬ ಕತೆಗಳ ಸಂಕಲನ ಮತ್ತು “ಈ ಚಳಿಗಾಲದಲ್ಲಿ ಅವಳು ಸಿಕ್ಕಿ” ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. “ಪುರುಷಾವತಾರ” ಅವರ ಕಾದಂಬರಿ. “ವಂಡರ್ ವೈ ಎನ್ ಕೆ” ಮತ್ತು “ಮಳೆಯಲ್ಲಿ ನೆನೆದ ಕತೆಗಳು” ಅವರ ಸಂಪಾದಿತ ಕೃತಿಗಳು. ಪತ್ರಕರ್ತ ಗೆಳೆಯ ಜೋಗಿ (ಗಿರೀಶರಾವ್ ಹತ್ವಾರ) ಅವರೊಂದಿಗೆ ಸೇರಿ ಆರಂಭಿಸಿದ ’ಕಥಾಕೂಟ’ವು ...
READ MORE