‘ನೀತಿ ಕಥೆಗಳು’ ಎ.ಸರಸಮ್ಮ ಅವರ ಕಥಸಂಕಲನವಾಗಿದೆ. ತಮ್ಮ ಅರಿವಿನಿಂದ ಮಕ್ಕಳಿಗೆ ಹೇಳುವ ನೀತಿ ಕಥೆಗಳನ್ನು ಒಂದೆಡೆ ಬರೆದಿಡುವ ಸಣ್ಣ ಪ್ರಯತ್ನ ಮಾಡಿರುತ್ತಾರೆ. ಸ್ವತಃ ತಾವೇ ಬರೆದಿದ್ದ ಕಥೆಗಳನ್ನು ಸಂಗ್ರಹಿಸಿ ಈಗ “ನೀತಿ ಕಥೆಗಳು” ಎಂಬ ಶೀರ್ಷಿಕೆಯಡಿಯಲ್ಲಿ ಕಥಾ ಸಂಕಲನವನ್ನು ಹೊರತಂದಿದ್ದಾರೆ.
ಲೇಖಕಿ ಎ. ಸರಸಮ್ಮ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಸಾಹಿತ್ಯ ಅವರ ವಿಶೇಷ ಆಸಕ್ತಿಯಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಪ್ರಸ್ತುತ ನಿವೃತ್ತರಾಗಿದ್ದರೆ. ಕೃತಿಗಳು: ಮೋಸದ ಜಾಲ(ಕಾದಂಬರಿ), ಬಾಡಿಗೆ ಮನೆ, ಮನೆ ಮಗ, ನೀತಿ ಕಥೆಗಳು, ದನಗಳ ಚೆನ್ನಿ, ನಂದಾದೀಪ, ಜಾಲಿಯ ನೆರಳು, ಕಾವ್ಯ ಜ್ಯೋತಿ, ವಿಧಿ ನಿಯಮ, ಸನ್ಮಾರ್ಗ, ಹೆಣ್ಣಿನ ಬಾಳು, ಗುರಿ, ಪಾಪ ಪುಣ್ಯ, ಭಕ್ತಿಸಾರ, ಸ್ನೇಹ ಬಂಧನ, ಕಾಮನಬಿಲ್ಲು, ಮೋಸದ ಜಾಲ ...
READ MORE