ನೀರು ನಿಂತ ನೆಲ ಸಂತೆಕಸಲಗೆರೆ ಪ್ರಕಾಶ್ ಅವರ ಕಥಾ ಸಂಕಲನವಾಗಿದೆ. “ನೀರು ನಿಂತ ಸಲ, ಕೆಂಪು ನೀನು, 'ರಾತ್ರಿಯಲೊಂದು ಹೆಣದ ಸದ್ದು' ಇಂತಹ ಕತೆಗಳಲ್ಲಿದೆ. ಪ್ರಕಾಶ್ ವಸ್ತುನಿಷ್ಠವಾಗಿ ಕತೆ ಬರೆಯಬೇಕೆಂದುಕೊಂಡಂತೆ ಕಾಣುತ್ತದೆ. ಕತೆಗಾರ ವಸ್ತುನಿಷ್ಠನಾಗಿದ್ದರೆ ಆತ ಅನೇಕ ಬಾರಿ ಪಾತ್ರಗಳ ಪರವಾಗಿ ವಕಾಲತ್ತು ಮಾಡುತ್ತ ಜೀವನವನ್ನು 'ವಸ್ತು'ವಾಗಿಯೇ ನೋಡುವ ಅಪಾಯ ಉಂಟಾಗುತ್ತದೆ. ಕಲಾವಿದನಾದವನು ತರ್ಕದ ಆಚೆಗಿನ ಮಾನವ ಸಂಬಂಧಗಳನ್ನು ಇರುವ ಎಲ್ಲ ವಾಸ್ತವ ಮಾನದಂಡಗಳನ್ನು ಮೀರಿ ಇರಬಹುದಾದ ಹಲವು ದಾರಿಗಳನ್ನು ಭಾವನಾತ್ಮಕವಾಗಿ ಹಿಡಿಯಲು ಯತ್ನಿಸುವನು. ಹೀಗೆ ಭಾವನಿಷ್ಠ ಬಗೆಯಲ್ಲಿ ಕತೆ ಹೇಳಲು ಹೊರಟಾಗ ಬದುಕಿನ ಅನೇಕ ಅರ್ಥಗಳು ದಟ್ಟವಾಗಿ ಸೃಜನಶೀಲ ಕಾಣೆಯಲ್ಲಿ ತೆರೆದುಕೊಳ್ಳುತ್ತದೆ. ಈ ಬಗೆಯ ಕತೆಗಳನ್ನು ಕೂಡ ಪ್ರಕಾಶ್ ಬರೆಯಬಲ್ಲರು. ಇವರ ಕತೆಗಳು ಹದವರಿತ ಭಾವ, ಸಂಬಂಧಗಳ ತುಡಿತದಲ್ಲಿ ಕಾಲದ ಜೊತೆ ಮುಖಾಮುಖಿಯಾಗುತ್ತವೆ ಎಂದು ಡಾ. ಮೊಗಳ್ಳಿ ಗಣೇಶ್ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯ ಸಂತೆಕಸಲಗೆರೆ ಗ್ರಾಮದವರು. ತಂದೆ ತಿಮ್ಮಪ್ಪಯ್ಯ ,ತಾಯಿ ಲಕ್ಷ್ಮಮ ,ಪ್ರಸ್ತುತ ಹೊಸದಿಗಂತ ದಿನಪತ್ರಿಕೆ , ಹಿರಿಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ಸಮ್ಮಿಲನ(ಕವನ ಸಂಕಲನ-1993), ವಳ್ಳೂರ ನೆನೆದೇನು (1996). ಮುತ್ತಕೇರೋಕೆ ಮೊರವಾದ (1998), (ಗ್ರಾಮಗಳ ಸ್ಥಳ ಪುರಾಣ ಕುರಿತ ಜಾನಪದ ಕೃತಿಗಳು), ಭಾಗಾಯ(1999) (ತೋಟದ ಬೆಳೆಗಳು ಕುರಿತು ಜಾನಪದ ಅಧ್ಯಯನ ಕೃತಿ) ಒಂದು ಸ್ವರ್ಗಕ್ಕಾಗಿ ,ಕರಗಿ ಹೋದವಳು, ನೀರು ನಿಂತ ನೆಲ, ಕತೆಗೂ ಊರಿಗೂ ಅಪಾರ ನಂಟು ( ಸಮಗ್ರ ಕತೆಗಳು) ಮೆಲ್ಲಗೆ ಹಬ್ಬಿತ್ತು ಮಲ್ಲಿಗೆ ಗಮಲು ( ಜಾನಪದ ಗ್ರಾಮಗಳ ಆಧ್ಯಯನ). ಗ್ರಾಮಗಳ ಕುರಿತ ಸ್ಥಳಪುರಾಣ, ಜಾನಪದ ಅಧ್ಯಯನ ...
READ MORE