ಲೇಖಕ ಮಂಜುನಾಥ ಕೆ. ಅವರ ಚೊಚ್ಚಲ ಕಥಾ ಸಂಕಲನ- ‘ನಾ ಮೌನಿಯಾದೆ’. ಕೃತಿಗೆ ಮುನ್ನುಡಿ ಬರೆದ ವೆಂಕಟೇಶ್ ಎಲ್.ಎಮ್, `ಈ ಕತೆಗಳು ವ್ಯಕ್ತಿಗತವಾಗಿರುವ ಆಸೆ, ಆಕಾಂಕ್ಷೆಗಳು, ಸಫಲ-ವಿಫಲವಾಗುವ ಸೂಕ್ಷ್ಮಾತಿಸೂಕ್ಷ ವಿಚಾರಗಳನ್ನು ಕಥೆಗಾರ ನಿರೂಪಿಸುವುದರಲ್ಲಿ ನಿಪುಣರಾಗಿದ್ದಾರೆ - ಹಾಗೆಯೇ, ಆಧುನಿಕ ಕತೆಗಳಲ್ಲಿ ಮಾನವೀಯ ಸಂಬಂಧಗಳ ಬಿರುಕು ಎದ್ದು ಕಾಣುವುದನ್ನು ಕಾಣಬಹುದಾಗಿದೆ.’ ಎಂದು ಪ್ರಶಂಸಿದ್ದಾರೆ.
ಲೇಖಕ ಕೆ. ಮಂಜುನಾಥ ಮೂಲತಃ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕಲ್ ಕೆಳೆ ಗ್ರಾಮದವರು. ತಂದೆ ಕೃಷ್ಣಪ್ಪ ತಾಯಿ ಪದ್ಮಮ್ಮ. ಸಮೂಹ ಮತ್ತು ಪತ್ರಿಕೋದ್ಯಮ ಕ್ಷೇತ್ರದ ಪದವೀಧರರು. ‘ನಾ ಮೌನಿಯಾದೆ’ ಇವರ ಚೊಚ್ಚಲ ಕವನ ಸಂಕಲನ. ...
READ MORE