ಮೂರು ಮತ್ತಿಷ್ಟು

Author : ಪೆರ್ಲ ಗೋಪಾಲಕೃಷ್ಣ ಪೈ

Pages 400

₹ 250.00




Year of Publication: 2010
Published by: ಭಾಗ್ಯಲಕ್ಷ್ಮೀ ಪ್ರಕಾಶನ
Address: 87, 3ನೇ ಕ್ರಾಸ್, 4ನೇ ಬ್ಲಾಕ್, ಬನಶಂಕರಿ 3ನೇ ಸ್ಟೇಜ್, 3ನೇ ಫೇಸ್, ಬೆಂಗಳೂರು- 560085
Phone: 26695715

Synopsys

‘ಮೂರು ಮತ್ತಿಷ್ಟು’ ಲೇಖಕ ಗೋಪಾಲಕೃಷ್ಣ ಪೈ ಅವರ ಕತಾಸಂಕಲನ. ಸ್ವಪ್ನ ಸಾರಸ್ವತ ಕಾದಂಬರಿ ಬರೆದು ಹೆಸರು ಪಡೆದ ಗೋಪಾಲಕೃಷ್ಣ ಪೈ ಅವರು 1966ರಿಂದಲೂ ಸಣ್ಣ ಕತೆಗಳನ್ನು ಬರೆಯುತ್ತಿದ್ದಾರೆ. 2010ರವೆಗೆ ಅವರ ಮೂರು ಕಥಾಸಂಕಲನಗಳು ಪ್ರಕಟವಾಗಿದ್ದು, ಆ ಮೂರು ಸಂಕಲನಗಳ ಕತೆಗಳನ್ನಲ್ಲದೇ ಮತ್ತಿಷ್ಟು ಕತೆಗಳನ್ನು ಸೇರಿಸಿ ಈ ಸಂಕಲನವನ್ನು ಸಿದ್ಧಪಡಿಸಲಾಗಿದೆ.

ವಿಮರ್ಶಕ ವಿಜಯಶಂಕರ ಅವರು ಸ್ವಪ್ನ ಸಾರಸ್ವತಕ್ಕೆ ಮುನ್ನುಡಿ ಬರೆಯುತ್ತಾ ‘ಈ ಕಾದಂಬರಿಯ ಭಾವಚಿತ್ರಗಳು ಅಲ್ಲಲ್ಲಿ ಅಷ್ಟಿಷ್ಟು ಪ್ರತ್ಯೇಕ ರೂಪಗಳಲ್ಲಿ ಅವರ ಕಥಾಸಂಕಲನಗಳಲ್ಲಿ ಮಿಂಚಿವೆ’ ಎಂದು ಬರೆದಿದ್ದಾರೆ. ಕಥಾಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದ, ವಿಮರ್ಶಕರಿಂದ ಮೆಚ್ಚುಗೆ ಗಳಿಸಿದ್ದ ಇಲ್ಲಿಯ ಅನೇಕ ಧೀಮಂತರು ಅಭಿಪ್ರಾಯ ಪಟ್ಟಿದ್ದಾರೆ. ಕೆಲವು ಕತೆಗಳಂತೂ ಅನನ್ಯವಾದ ರೀತಿಯಲ್ಲಿ ಹೆಣೆಯಲ್ಪಟ್ಟಿವೆ. ಇತ್ತೀಚೆಗೆ ಕನ್ನಡ ಚಲನಚಿತ್ರಗಳಲ್ಲಿಯೂ ಕೈಯಾಡಿಸುತ್ತಿರುವ ಲೇಖಕ ಪೈ ಅವರು ‘ಕನಸೆಂಬೋ ಕುದುರೆಯನೇರಿ’ ಚಲನಚಿತ್ರದ ಚಿತ್ರಕತೆ ಬರೆದು ಅತ್ಯುತ್ತಮ ಚಿತ್ರಕತೆಗಾಗಿ ಶ್ರೀ ಗಿರೀಶ ಕಾಸರವಳ್ಳಿ ಅವರೊಂದಿಗೆ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇಲ್ಲಿ ಅವರ 35 ಕತೆಗಳಿದ್ದು, ಅವರ ಕಥಾಸಾಹಿತ್ಯವನ್ನು ಕುರಿತು ಅಭ್ಯಾಸ ಮಾಡುವವರಿಗೆ ಈ ಸಂಕಲನ ಉಪಯುಕ್ತವಾಗಿದೆ.

About the Author

ಪೆರ್ಲ ಗೋಪಾಲಕೃಷ್ಣ ಪೈ

ಮೂಲತಃ ಕೇರಳದ ಕಾಸರಗೋಡು ಹಾಗೂ ಕರ್ನಾಟಕದ ದಕ್ಷಿಣ ಕನ್ನಡ ಮಧ್ಯೆ ಇರುವ ಪೆರ್ಲ ಮೂಲದ ಗೋಪಾಲಕೃಷ್ಣ ಪೈ ಅವರು ಕತೆ,ನಾಟಕ ,ಪ್ರಬಂದ, ಲೇಖನ ಕಾದಂಬರಿಗಳನ್ನು ಬರೆಯುವುದರಲ್ಲಿ ಪ್ರವೀಣರು. ನಾಟಕ ವಿಮರ್ಶೆ ಮೊದಲಾದ ಹಲವು ಪ್ರಕಾರಗಳಲ್ಲಿ ಕೈಯ್ಯಾಡಿಸಿ ಉತ್ತಮ ಸಾಹಿತ್ಯ ಕೃಷಿಯನ್ನು ಬೆಳೆಸುತ್ತಿರುವ ಗೋಪಾಲಕೃಷ್ಣ ಪೈ ಅವರ ಮತ್ತಿತರ ಕೃತಿಗಳು ಇಂತಿವೆ; ತಿರುವು, ಈ ಬೆರಳ ಗುರುತು, ಹಾರುವ ಹಕ್ಕಿಯ ಗೂಡಿನ ದಾರಿ ,ಮೊದಲಾದ ಚಿಕ್ಕ ಕಥೆಗಳು. ಆಧುನಿಕ ಚೀನೀ ಸಣ್ಣಕಥೆಗಳು, 'ಪೆರ್ಲ ಗೋಪಾಲಕೃಷ್ಣ ಪೈ'ರವರ ಸ್ವಪ್ನ ಸಾರಸ್ವತ ಕಾದಂಬರಿಗೆ 2010 ರ ಸಾಲಿನ 'ಪ್ರತಿಷ್ಠಿತ ಕೇಂದ್ರ ಸಾಹಿತ್ಯ ...

READ MORE

Related Books