`ಮುಂದೇನಾಯ್ತು? 'ಕಂಚುಗಾರನಹಳ್ಳಿ ಸತೀಶ್ ಅವರ ಕಥಾಸಂಕಲನವಾಗಿದೆ. ಮಾನವೀಯತೆಯು ಬದುಕಿನಲ್ಲಿ ಪ್ರಮುಖ ಸ್ಥಾನ ಪಡೆಯದಿದ್ದರೆ ಅದು ಅರ್ಥಹೀನವಾಗುತ್ತದೆ. ಸಮಾಜ ನನಗೆ ಏನು ಕೊಟ್ಟಿದೆ? ಎನ್ನುವುದರ ಬದಲಾಗಿ ಸಮಾಜಕ್ಕೆ ನಾನು ಏನು ಕೊಟ್ಟಿದ್ದೇನೆ? ಎಂದು ಚಿಂತಿಸುವ ಹಾದಿಯಲ್ಲಿ ನಡೆಯುತ್ತಿರುವವರು ಕಂಸ (ಕಂಚುಗಾರನಹಳ್ಳಿ ಸತೀಶ್) ಅವರು, ಸಾಹಿತ್ಯದ ಅರಿವಿಲ್ಲದ, ಸಾಹಿತ್ಯಕ್ಕೆ ಮನ್ನಣೆ ನೀಡದ ಯಾವುದೇ ಸಮಾಜವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆಧುನಿಕತೆಯ ಯುಗದಲ್ಲಿ ಯುವಜನರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕ೦ಸ ಅವರು ತಮ್ಮ ಮುಂದೇನಾಯ್ತು? ಕಥಾ ಸಂಕಲನದಲ್ಲಿ ಹಲವು ಕಥೆಗಳನ್ನು ಸೃಷ್ಟಿಸಿದ್ದಾರೆ.
ಕಂಚುಗಾರನಹಳ್ಳಿ ಸತೀಶ್ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಂಚುಗಾರನಹಳ್ಳಿಯವರು. ತಂದೆ ಶ್ರೀನಿವಾಸ.ಕೆ.ಎನ್ ತಾಯಿ ಸುಜಾತ.ಟಿ . ಬಿ.ಎ,ಡಿ.ಎಡ್ ವಿದ್ಯಾರ್ಹತೆ ಮುಗಿಸಿ. ವೃತ್ತಿಯಲ್ಲಿ ಸಹಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಸೇವೆ : ಸುಮಾರು ಎರಡು ವರ್ಷಗಳಿಂದ ಕವನಗಳು,ಚುಟುಕುಗಳು,ಕಥೆಗಳು,ಆಧುನಿಕ ವಚನಗಳು,ಶಿಶು ಗೀತೆಗಳು,ನ್ಯಾನೋ ಕಥೆಗಳು,ಹಾಯ್ಕುಗಳು,ಗಝಲ್ ಗಳು,ಟಂಕಾಗಳ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೃತಿಗಳು: ಸ್ಯಾನಿಟರಿ ಪ್ಯಾಡ್ ,ಬಂಗಾರದ ಹನಿಗಳು ...
READ MORE