ಲೇಖಕ ಡಾ. ಮಲ್ಲಿಕಾರ್ಜುನ ಹಿರೇಮಠ ಅವರ ಕಥೆಗಳ ಸಂಕಲನ-ಮೊಲೆವಾಲು ನಂಜಾಗಿ. ಒಂದು ಎರಡು ಬಾಳೆಲೆ ಹರಡು, ತಯಾರಿ, ಮೊಲೆವಾಲು ನಂಜಾಗಿ, ಅವನತಿ, ಬೆಕ್ಕು ಹಾರುತಿದೆ ನೋಡಿದಿರಾ..., ಒಂದು ಊರಿನ ವೃತ್ತಾಂತ, ಶಬ್ದ ನಿಶ್ಯಬ್ದ, ಮಾಗಿ ಹಾಗೂ ಅನುಬಂಧ ಹೀಗೆ ಒಟ್ಟು 9 ಕಥೆಗಳಿರುವ ಸಂಕಲನವಿದು.
ಸಾಹಿತಿ ಮಾಧವ ಕುಲಕರ್ಣಿ ಅವರು ಕೃತಿಗೆ ಮುನ್ನುಡಿ ಬರೆದು ‘ಕಥೆ ಹೇಳಬೇಕೆಂಬ ಬಯಕೆಯೊಡನೆ ಸೃಜನಶೀಲತೆಗೆ ಧಕ್ಕೆ ಬರಬಾರದೆಂಬ ಪ್ರಜ್ಞೆ ಇದೆ. ಕಥಾ ವವಸ್ತುವಿಗೆ ಹೊಂದಿಕೊಳ್ಳಬಹುದಾದ ಭಾಷೆಯನ್ನು ಬರೆಯಲು ಆರಂಭಿಸಿದ್ದು ಮಾತ್ರವಲ್ಲ; ಸಂಭಾಷಣೆ, ನಿರೂಪಣೆ ಹಾಗೂ ವಿವರಣೆಗಳಲ್ಲಿ ಸಂಯಮವಿದೆ. ಮಾನವತಾವಾದ ಎಲ್ಲಿಯೂ ವಾಚ್ಯವಾಗದಿರುವುದೇ ಇಲ್ಲಿಯ ಕಥೆಗಳ ಹೆಗ್ಗಳಿಕೆ’ ಎಂದು ಪ್ರಶಂಸಿಸಿದ್ದಾರೆ.
ಕೃತಿಗೆ ಬೆನ್ನುಡಿ ಬರೆದ ಖ್ಯಾತ ವಿಮರ್ಶಕ ಡಾ. ಜಿ.ಎಸ್. ಆಮೂರ ‘ಉತ್ತಮ ಕಥೆಗಳು ಮಾತ್ರವಲ್ಲ; ಕಥೆಗಳನ್ನು ಚೆನ್ನಾಗಿ ಹೇಳಬಲ್ಲ ಕಲೆಯನ್ನು ಸಾಧಿಸಿವೆ. ಮಾನವೀಯ ಸಂಬಂಧಗಳ ಆಳ ಹಾಗೂ ಆವರಣ ಸೃಷ್ಟಿಯ ಕೌಶಲ ಕಥೆಗಳ ಮೂಲ ಅಂಶಗಳಾಗಿವೆ’ ಎಂದು ಶ್ಲಾಘಿಸಿದ್ದರೆ, ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ‘ಮನುಷ್ಯ ಸಂಬಂಧಗಳ ತೊಡಕುಗಳನ್ನು ಚಿತ್ರಿಸುವುದರಲ್ಲಿ ಹೆಚ್ಚು ಪ್ರಬುದ್ಧತನ ತೋರಿವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಲೇಖಕ ಮಲ್ಲಿಕಾರ್ಜುನ ಹಿರೇಮಠ ಅವರದ್ದು ವಿವೇಚನಾಪೂರ್ಣ ಸಾಹಿತ್ಯ ಮತ್ತು ವ್ಯಕ್ತಿತ್ವ. ಹುಟ್ಟಿದ್ದು ಕೊಪ್ಪಳ ಜಿಲ್ಲೆಯ ಬಿಸರಹಳ್ಳಿ 1946 ಜೂನ್ 05ರಂದು. ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವೀಧರರು. ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಸದ್ಯ ನಿವೃತ್ತರಾಗಿದ್ದಾರೆ. 'ಆಕ್ವೇರಿಯಂ ಮೀನು' ಅವರ ಮೊದಲ ಕವನ ಸಂಕಲನ 1974ರಲ್ಲಿ ಪ್ರಕಟವಾಯಿತು. ‘ಅಮೀನಪುರದ ಸಂತೆ, ಜ್ಞಾನೇಶ್ವರನ ನಾಡಿನಲ್ಲಿ (ಪ್ರವಾಸ ಕಥನ), ಅಂತರ್ಗತ (ವಿಮರ್ಶೆ), ಅಭಿಮುಖ (ವಿಮರ್ಶೆ), ಹವನ (ಕಾದಂಬರಿ), 'ಮೊಲೆವಾಲು ನಂಜಾಗಿ' (ಕತಾ ಸಂಕಲನ), ಮೂರುಸಂಜೆ ಮುಂದ ಧಾರವಾಡ (ಲಲಿತ ಪ್ರಬಂಧಗಳು), ಗಿರಡ್ಡಿ ಗೋವಿಂದರಾಜ : ವ್ಯಕ್ತಿ-ಆಭಿವ್ಯಕ್ತಿ (ವಿಮರ್ಶೆ)’ ಅವರ ಪ್ರಮುಖ ಕೃತಿಗಳು. ಅವರ ಸಾಹಿತ್ಯ ಸೇವೆಗೆ ‘ಕನಾಟಕ ...
READ MORE