ಹಿರಿಯ ಸಾಹಿತಿ ಎಂ.ವೀ. ಸೀತಾರಾಮಯ್ಯ ಅವರು ಬರೆದ ಸಣ್ಣ ಕಥೆಗಳ ಸಂಕಲನ-ಮಾರ್ಗದರ್ಶಕ. ಕಥೆಗಾರ ಚಂದು, ಮಾರ್ಗದರ್ಶಕ, ಬಗೆದಂತೆ ಬಾಳು, ಸರೋಜಾಳ ಗೊಂಬೆ ಹೀಗೆ ಒಟ್ಟು 13 ಕಥೆಗಳು ಇಲ್ಲಿ ಸಂಕಲನಗೊಂಡಿವೆ. ಕವಿ ದ.ರಾ. ಬೇಂದ್ರ ಅವರು ಮುನ್ನುಡಿ ಬರೆದು `ಇಲ್ಲಿಯ ಕಥೆಗಳಲ್ಲಿ ಭಾವ ಪ್ರವಣತೆ, ರೂಪು ನಿರ್ಮಿತಿ ಹಾಗೂ ಕಥನದಾತುರತೆ ಇದೆ. ಅನುಭಾವ ಪರಿಪಕ್ವತೆಯೂ ಇದೆ. ಕಥೆಗಾರನ ರಸಿಕತೆ, ರಸಿಕನ ಉದಾರ ಭಾವ ಹೀಗೆ ಕತೆಗಳಲ್ಲಿ ಹಾಸುಹೊಕ್ಕಾಗಿವೆ ಎಂದು ಪ್ರಶಂಸಿಸಿದ್ದಾರೆ. ಇಲ್ಲಿಯ ಬಹುತೇಕ ಕಥೆಗಳು ಭಾವಪ್ರಧಾನವಾಗಿವೆ ಎಂದು ಲೇಖಕ ಎಂ.ವೀ. ಸೀತಾರಾಮಯ್ಯನವರು ಪ್ರಸ್ತಾವನೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ರಾಘವ ಕಾವ್ಯನಾಮದ ಮೂಲಕ ಪರಿಚಿತರಾಗಿರುವ ಎಂ.ವಿ. ಸೀತಾರಾಮಯ್ಯ ಜನಿಸಿದ್ದು ಮೈಸೂರಿನಲ್ಲಿ. ಮಕ್ಕಳಿಗಾಗಿ ಬರೆದ 'ಹೂವನು ಮಾರುತ ಹೂವಾಡಗಿತ್ತಿ' ಹಾಡು ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿತ್ತು. ಕನ್ನಡ ಅಧ್ಯಾಪಕರಾಗಿದ್ದ ಇವರು ಸಾಹಿತ್ಯ ಕ್ಷೇತ್ರದಲ್ಲಿಯೂ ಮನೆಮಾತಾಗಿದ್ದರು. ಕನ್ನಡ ಸಾಹಿತ್ಯಕ್ಕೆ ಇವರ ಕೊಡುಗೆಗಳೆಂದರೆ ಹಕ್ಕಿಹಾಡು, ರಾಗ, ಅಶೋಕ ಚಕ್ರ (ಕವನ ಸಂಗ್ರಹಗಳು), ರಾಘವ, ಕವನ ಕೋಶ, ಆ ಚಿತ್ರಗಳು, ಹಕ್ಕಿ ಹಾಡು, ರತಿದೇವಿ ಮತ್ತು ಇತರ ಕಥೆಗಳು, ಬಿಸಿಲು ಬೆಳದಿಂಗಳು, ನಿಲ್ದಾಣಗಳ ನಡುವೆ (ಕಥಾ ಸಂಕಲನಗಳು), ಭಾಗ್ಯಲಕ್ಷ್ಮಿ, ನಂಜಿನ ಸವಿ, ಜೀವನದ ಜೊತೆಗಾರ (ಕಾದಂಬರಿಗಳು), ತೆರೆಮರೆಯ ಚಿತ್ರಗಳು, ತೊಟ್ಟಿಲು ತೂಗದ ಕೈ (ನಾಟಕಗಳು), ...
READ MORE